5ನೇ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ

update admin report 2022-23.doc

 

ಮುಂಗಡ ಪತ್ರಿಕೆ

 

ಅನುಪಾಲನಾ ವರದಿ

 

4ನೇ ಸರ್ವ ಸದಸ್ಯರ ಸಭೆಯ ನಡಾವಳಿ

 

Reg No:OTS-2/293/HOT/52921/2018-19 Date: 14-02-2020

    #41/ಬಿ, ಬಿಬ್ಲಾಕ್, ರೈನ್ಬೋಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರಅಂಚೆ,ಬೆಂಗಳೂರುಉತ್ತರ-560097

Email: ksecsb.kar@gmail.com

ವೀರಕ್ಯಾತಯ್ಯ ಎನ್                        ನೇತ್ರಾವತಿ                      ಚೆಲುವರಾಜು ಎಂ.ಪಿ

 ಅಧ್ಯಕ್ಷರು- 9964100089               ಉಪಾಧ್ಯಕ್ಷರು- 9242881867                  ಮು.ಕಾ.ನಿ /9945439790

ಸಭಾ ಸೂಚನಾ ಪತ್ರ

signed 5th gbm notice

ಸಂಖ್ಯೆ: ಕರಾಅನೌಸಸನಿ/ಸಾಸಸಸೂಪ/04/2023-24                              ದಿನಾಂಕ:  27-07-2023

ಮಾನ್ಯರೇ,

ವಿಷಯ: 2023-24ನೇ ಸಾಲಿನ ಸಾಮಾನ್ಯ ಸಭೆಯನ್ನು ಆಯೋಜಿಸಿರುವ ಕುರಿತು.

ಉಲ್ಲೇಖ 1: ಆಡಳಿತ ಮಂಡಳಿಯ 04ನೇ ಸಭೆಯ 1ನೇ ನಿರ್ಣಯ. ದಿನಾಂಕ: 27/07/2023

 

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮೂಲಕ ತಿಳಿಯಪಡಿಸುತ್ತಿರುವುದೇನೆಂದರೆ, 2023-24ನೇ ಸಾಲಿನ ಸಾಮಾನ್ಯ ಸಭೆಯನ್ನು (General Body Meeting) ಆಯೋಜಿಸಬೇಕೆಂದು ತಿಳಿಸಲಾಗಿದೆ. ಅದರಂತೆ ಉಲ್ಲೇಖ 1 ರಲ್ಲಿ ನಮೂದಿಸಿದ ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ದಿನಾಂಕ: 27-08-2023 ರಂದು ಸಹಕಾರ ಸಂಘದ 5ನೇ ಸಾಮಾನ್ಯ ಸಭೆಯನ್ನು ಅಧ್ಯಕ್ಷರಾದ ಶ್ರೀಯುತ ವೀರಕ್ಯಾತಯ್ಯ ರವರ ನೇತೃತ್ವದಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸೂಚನೆಗಳನ್ನು ಓದಿಕೊಂಡು ತಪ್ಪದೆ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಮೂಲಕ ಕೋರಲಾಗಿದೆ.

ಸಭಾ ದಿನಾಂಕ: 27-08-2023., ಭಾನುವಾರ

ಸಮಯ: 10AM (ಬೆಳಗ್ಗೆ)

ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣ ಕಬ್ಬನ್ ಉದ್ಯಾನವನ ಬೆಂಗಳೂರು -01

 

ಸಭಾ ವಿಷಯಗಳು:

1.   4ನೇ ಸಾಮಾನ್ಯ ಸಭಾ ನಡಾವಳಿಯ ಸಂಕ್ಷಿಪ್ತ ವರದಿ ಮಂಡನೆ.

2. 2023-24ನೇ ಸಾಲಿನ ಆಡಳಿತ, ಲೆಕ್ಕ ಪರಿಶೋಧಿತ ಹಾಗು ಅನುಪಾಲಾನ ವರಧಿಗಳ ಮಂಡನೆ ಮತ್ತು 2023-24ನೇ ಸಾಲೀನ ಮುಂಗಡ ವರದಿ ಮಂಡನೆ

3. 2023-24ನೇ  ಸಾಲಿನ ಲಾಬಾಂಶ ಹಂಚಿಕೆ ಕುರಿತು ಚರ್ಚೆ

4.    ಸಹಕಾರ ಸಂಘಕ್ಕೆ ಲೆಕ್ಕ ಪರಿಶೋಧಕರನ್ನು ನೇಮಿಸಿಕೊಳ್ಳುವುದಕ್ಕಾಗಿ ಕುರಿತು ಚರ್ಚೆ.

5. 4ನೇ ಮಹಾ ಸಭೆಯಲ್ಲಿ ಸಹಕಾರ ಸಂಘದ ಉಪ ವಿಧಿಯ ಕೆಲವು ನಿಯಮಗಳ ತಿದ್ದುಪಡಿಗೆ ಮಂಡಿಸಿ ಅನುಮೋದನೆ ಪಡೆದ ಸ್ಥಿತಿಯ ಪರಮರ್ಶೆ.

6. ಸಾಲ ವಿತರಣೆಗೆ ಸಂಬಂದಿಸಿದಂತೆ ಉಪ ವಿಧಿಯ 25ನೇ ನಿಯಮದ ಪರಿಷ್ಕರಣೆಗೆ  ಪ್ರಸ್ಥಾವನೆಯ ಮಂಡನೆ ಮತ್ತು ಅನುಮೋದನೆ ಪಡೆಯುವುದು.

7.ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮ ಈ ಯೋಜನೆಯನ್ನು ನಮ್ಮ ಸಂಘದ ಮೂಲಕ ಜಾರಿಗೊಳಿಸುವ ಬಗ್ಗೆ ಚರ್ಚೆ

8.ರಾಜ್ಯ ಹಾಗು ಕೇಂದ್ರ ಸರ್ಕಾರದ ವಿವಿದ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ

9.ತ್ರಿಫ್ಟ್ ಫೆಡೇರೇಷನ್ ಸಂಸ್ಥೆಗೆ ನಮ್ಮ ಸಂಘ ನೋಂದಾಯಿಸುವ ಬಗ್ಗೆ ಚರ್ಚೆ.

10. ಸದಸ್ಯರಿಂದ ಸ್ವೀಕರಿಸುವ ಸಲಹೆ/ಪ್ರಶ್ನೆಗಳು ಮತ್ತು ಅಧ್ಯಕ್ಷರ ಅನುಮತಿಯ ಮೇರೆಗೆ ರ‍್ಚಿಸಬಹುದಾದ ಇತರೇ ವಿಷಯಗಳು.

ಸೂಚನೆಗಳು:

1. ಸಭೆಗೆ ಪಾಲ್ಗೊಳ್ಳಲು ನೋಂದಾಯಿಸಿಕೊಳ್ಳುವುದು ಕಡ್ಡಾಯ. ನೋಂದಣಿಗೆ ಕಡೆಯ ದಿನಾಂಕ: 20-08-2023.

2. ಸಭೆಗೆ ಬರುವ ಸದಸ್ಯರಿಗೆ ಮತ್ತು ಸಹಾಯಕರಿಗೆ ಚಹ ಹಾಗೂ ಮಧ್ಯಾನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

3. ದೂರದ ಊರುಗಳಿಂದ ಬರುವ ಸದಸ್ಯರಿಗೆ ಸ್ನಾನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

4. ಗುರುತಿನ ಚೀಟಿ, ರಸೀದಿ ಮತ್ತು ಷೇರು ಪ್ರಮಾಣಪತ್ರಗಳನ್ನು ನೀಡಲಾಗುವುದು.

5. ಸದಸ್ಯರು ಸಭೆಯ ಗಮನಕ್ಕೆ ತರಬಯಸುವ ವಿಷಯಗಳನ್ನು ಅಥವಾ ಪ್ರಶ್ನೆಗಳನ್ನು ದಿನಾಂಕ: 20-08-2023 ಒಳಗಾಗಿ ಸಹಕಾರ ಸಂಘದ ಕಛೇರಿಗೆ ಬ್ರೈಲ್ ಲಿಪಿಯಲ್ಲಿ ಅಥವಾ ಮಿನ್ನಂಚೆ  ಔಚಿತ್ಯ ರೀತಿಯಲ್ಲಿ ಕಳುಹಿಸಬಹುದಾಗಿದೆ.

6. ಪ್ರೋತ್ಸಾಹ ಧನ ಪಡೆಯಲು ದಾಖಲಾತಿಗಳನ್ನು ನೀಡಿದ ಸದಸ್ಯರು ತಮ್ಮ ಮಕ್ಕಳೊಂದಿಗೆ ಬರತ್ತಕ್ಕದ್ದು

7. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಸಹಕಾರ ಸಂಘದ ವಾಟ್ಸಪ್‌ ಗುಂಪು/ ಮೊಬೈಲ್‌ ಸಂಖ್ಯೆ: 8867260940,          e- Email: ksecsb.kar@gmail.com.

ಈ ಸಂವಹನ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯಬಹುದು.ಸಹಿ

 

 

ಚಲುವರಾಜು ಎಮ್.ಪಿ.¦ .

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ,

  ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ.


ಹೆಚ್ಚು ಓದಿದ ವಿಷಯಗಳು