ಆವರ್ತಕ ಠೇವಣಿ (Recurring Deposit) ನಿಯಮಾವಳಿಗಳು

ಸಹಕಾರ ಸಂಘದ ಆಡಳಿತ ನಿಯಮಾವಳಿಯ III ನೇ ಅಧ್ಯಾಯದ ೧೧ನೇ ಉದ್ದೇಶವನ್ನು ಈಡೇರಿಸಿಕೊಳ್ಳಲು ಹಾಗೂ V ನೇ ಅಧ್ಯಾಯದ 21ನೇ ನಿಯಮಾನುಸಾರ ಸಂಘದ ನಿಧಿಯನ್ನು ವೃದ್ಧಿಸುವುದಕ್ಕಾಗಿ ಸರ್ವ ಸದಸ್ಯರ ೨ನೇ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಆಡಳಿತ ಮಂಡಳಿಯ 14 ನೇ ಸಭೆಯಲ್ಲಿ ಚರ್ಚಿಸಿ ಈ ಮುಂದಿನಂತೆ ಆವರ್ತಕ ಠೇವಣಿ (Recurring Deposit) ಉಪ ನಿಯಮವನ್ನು 01-01-2021 ರಿಂದ ಅನುಷ್ಠಾನಗೊಳಿಸಲಾಗಿದೆ.

1. ಸಹಕಾರ ಸಂಘದ ಸದಸ್ಯರಿಂದ, ಸಹ ಸದಸ್ಯರಿಂದ, ನಾಮಮಾತ್ರ ಸದಸ್ಯರಿಂದ ಮತ್ತು ಆಡಳಿತ ಮಂಡಳಿಯಿಂದ ಅನುಮೋದಿಸಲ್ಪಟ್ಟ ಸದಸ್ಯರಲ್ಲದ ಠೇವಣಿದಾರರಿಂದ ಆವರ್ತಕ ಠೇವಣಿಗಳನ್ನು ಸ್ವೀಕರಿಸಲಾಗುವುದು.
2. ಈ ಠೇವಣಿಯ ಕನಿಷ್ಠ ಅವಧಿ ಮೂರು ವರ್ಷ ಗರಿಷ್ಠ ಹತ್ತು ವರ್ಷ. ಕನಿಷ್ಠ ಮೊತ್ತ 100 ರೂಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಬೇಕು. ಗರಿಷ್ಠಕ್ಕೆ ಮಿತಿ ಇರುವುದಿಲ್ಲ.
3. ಆವರ್ತಕ ಠೇವಣಿಗೆ ಶೇಕಡ 6 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡಲಾಗುವುದು. ಅದಾಗ್ಯೂ, ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಆಡಳಿತ ಮಂಡಳಿಯು ಪರಿಶ್ಕರಿಸುವ ಬಡ್ಡಿ ದರವನ್ನು ಸ್ವೀಕರಿಸಲು ಠೇವಣಿದಾರರು ಬದ್ಧರಾಗಿರಬೇಕು.
4. ಪ್ರತಿ ತಿಂಗಳು 15 ನೇ ತಾರೀಖಿನೊಳಗೆ ಕಂತಿನ ಮೊತ್ತವನ್ನು ಪಾವತಿ ಮಾಡಬೇಕಾಗಿರುತ್ತದೆ. ತಪ್ಪಿದಲ್ಲಿ ಕಂತಿನ ಹಣದ ಮೇಲೆ ಶೇಕಡ 5 ರಷ್ಟು ಶುಲ್ಕವನ್ನು ಠೇವಣಿದಾರ ಪಾವತಿಸಬೇಕು.
5. ನಿರಂತರ ಮೂರು ತಿಂಗಳು ಠೇವಣಿಯ ಕಂತಿನ ಮೊತ್ತವನ್ನು ಠೇವಣಿದಾರ ಪಾವತಿಸದಿದ್ದಲ್ಲಿ, ಠೇವಣಿ ಖಾತೆಯನ್ನು ಸ್ಥಗಿತಗೊಳಿಸಲಾಗುವುದು. ಪಾವತಿಸಿದ ಕಂತಿನ ಮೊತ್ತವನ್ನು ವಾಯಿದೆ ಮುಗಿದ ನಂತರ ಠೇವಣಿದಾರ ಪಡೆದುಕೊಳ್ಳತಕ್ಕದ್ದು. ಠೇವಣಿಯನ್ನು ಮರು ಚಾಲನೆಗೊಳಿಸಿಕೊಳ್ಳಲು ಇಚ್ಛಿಸುವ ಠೇವಣಿದಾರನು ಕಂತಿನ ಮೊತ್ತದಲ್ಲಿ ಶೇಕಡ 10 ರಷ್ಟು ಹಣವನ್ನು ಒಂದು ಭಾರಿ ಪಾವತಿಸತಕ್ಕದ್ದು.
6. ಠೇವಣಿಯನ್ನು ವಾಯಿದೆಗೂ ಮುಂಚಿತವಾಗಿ ರದ್ದುಪಡಿಸಿಕೊಳ್ಳಲು ಇಚ್ಛಿಸುವ ಠೇವಣಿದಾರನು ಕೋರಿಕೆ ಪತ್ರವನ್ನು ಮುಂಚಿತವಾಗಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗೆ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಮೂರು ತಿಂಗಳ ಒಳಗೆ ಠೇವಣಿ ಮೇಲಿನ ವಾರ್ಷಿಕ ಬಡ್ಡಿ ದರದಲ್ಲಿ ಶೇಕಡ 5 ರಷ್ಟನ್ನು ಕಡಿತಗೊಳಿಸಿ ಬಾಕಿ ಬಡ್ಡಿ ಮತ್ತು ಠೇವಣಿ ಮೊತ್ತವನ್ನು ಪಾವತಿಸಲಾಗುವುದು.
7. ಠೇವಣಿ ತೆರೆದ ಠೇವಣಿದಾರರಿಗೆ ಪ್ರಮಾಣಪತ್ರವನ್ನು ಹಾಗೂ ಠೇವಣಿಯಿಂದ 10,000 ರೂಗಳಿಗಿಂತ ಹೆಚ್ಚು ಬಡ್ಡಿ ಗಳಿಸುವ ಠೇವಣಿದಾರರಿಗೆ ಬಡ್ಡಿ ಪ್ರಮಾಣಪತ್ರವನ್ನು ನೀಡಲಾಗುವುದು.
8. ಈ ಠೇವಣಿಗೆ ತೊಡಗಿಸಿದ ಮೊತ್ತದ ಆಧಾರದಲ್ಲಿ ಸಾಲ ಪಡೆಯಲು ಇಚ್ಛಿಸುವ ಠೇವಣಿದಾರನಿಗೆ ಶೇಕಡ 75 ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುವುದು.
9. ನೀಡುವ ಸಾಲಕ್ಕೆ ಶೇಕಡ 9ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸಲಾಗಿದೆ. ಠೇವಣಿದಾರ ಠೇವಣಿ ಅರ್ಜಿಯಲ್ಲಿ ನಮೂದಿಸಿದ ಅವಧಿಯೊಳಗೆ ಅಥವಾ ಆಡಳಿತ ಮಂಡಳಿಯು ಸೂಚಿಸುವ ಅವಧಿಯ ಒಳಗೆ ಸಾಲವನ್ನು ಬಡ್ಡಿ ಸಹಿತ ಮರುಪಾವತಿಸಬೇಕು. ಮರುಪಾವತಿಸದಿದ್ದಲ್ಲಿ, ಠೇವಣಿಯಲ್ಲಿ ಜಮೆಯಾದ ಮೊತ್ತದ ಮೇಲಿನ ಹಕ್ಕನ್ನು ಠೇವಣಿದಾರ ಕಳೆದುಕೊಳ್ಳುವನು.
10. ಠೇವಣಿದಾರ ಮೃತಪಟ್ಟಲ್ಲಿ ಪಾವತಿಸಿದ ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು. ಠೇವಣಿಯ ಮೇಲೆ ಸಾಲವನ್ನು ಪಡೆದಿದ್ದಲ್ಲಿ ಅದನ್ನು ಸಾಲಕ್ಕೆ ಜಪ್ತಿ ಮಾಡಿಕೊಳ್ಳಲಾಗುವುದು.
11. ಈ ಠೇವಣಿಯನ್ನು ಹೊಂದಲು ಇಚ್ಛಿಸುವ ಆಸಕ್ತ ಸದಸ್ಯರು ಕೆಳಗಿನ ಕೊಂಡಿಯಲ್ಲಿ ನೀಡಿರುವ ನಮೂನೆಯನ್ನು ಭರ್ತಿಗೊಳಿಸಬೇಕು ಅಥವಾ ನಿಗದಿತ ನಮೂನೆಯನ್ನು ಭರ್ತಿಗೊಳಿಸಿ ಸಲ್ಲಿಸಬೇಕು. ಕಂತಿನ ಮೊತ್ತವನ್ನು ಜಿಲ್ಲಾ ಉಸ್ತುವಾರಿ ನಿರ್ದೇಶಕರಿಗೆ ಅಥವಾ ಪರಿಚಯವಿರುವ ಆಡಳಿತ ಮಂಡಳಿಯ ಒಬ್ಬ ಪದಾಧಿಕಾರಿಗೆ ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವರಿಗೆ ನೀಡಬಹುದು ಅಥವಾ ಸಹಕಾರ ಸಂಘದ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು.
ಅ. ಆನ್ಲೈನ್‌ ಮೂಲಕ ನೋಂದಾಯಿಸಿಕೊಳ್ಳುವವರಿಗೆ ನಮೂನೆಯ ಕೊಂಡಿ
ಆ. ಅಂಚೆ ಮೂಲಕ ನೋಂದಾಯಿಸಿಕೊಳ್ಳುವವರು ಈ ಕೊಂಡಿಯಲ್ಲಿ ನೀಡಿರುವ ನಿಗದಿತ ನಮೂನೆಯನ್ನು ಮುದ್ರಿಸಿ ಭರ್ತಿಗೊಳಿಸಿ ಸಲ್ಲಿಸಬೇಕು.
1೨. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ: ಜಿಲ್ಲಾ ನಿರ್ದೇಶಕರನ್ನು ಅಥವಾ ಮೊಬೈಲ್ ಸಂಖ್ಯೆ: 8867360940 / e-mail: ksecsb.kar@gmail.com ಸಂಪರ್ಕಿಸಿ.

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು