ಮರಣ ನಿಧಿ ಯೋಜನೆಯ ನಿಯಮಾವಳಿಗಳು

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘದ ಆಡಳಿತ ನಿಯಮದ III ನೇ ಅಧ್ಯಾಯದ 4ನೇ ನಿಯಮದಲ್ಲಿ ತಿಳಿಸಿರುವ 16 ನೇ ಉದ್ದೇಶವನ್ನು ಯೋಜನಾ ಬದ್ಧವಾಗಿ ಅನುಷ್ಠಾನಗೊಳಿಸಲು ಸಹಕಾರ ಸಂಘದ ಸರ್ವ ಸದಸ್ಯರ ೨ನೇ ಸಭೆಯಲ್ಲಿ ಮರಣ ನಿಧಿ ಸ್ಥಾಪಿಸಲು ಅನುಮೋದನೆ ಪಡೆದುಕೊಳ್ಳಲಾಗಿದೆ. ಆಡಳಿತ ಮಂಡಳಿಯ 14 ನೇ ಸಭೆಯಲ್ಲಿ ಚರ್ಚಿಸಿ 01-01-2021 ರಿಂದ ಈ ಮುಂದಿನಂತೆ ಉಪ ನಿಯಮವನ್ನು ರಚಿಸಿ ಜಾರಿಗೊಳಿಸಲಾಗಿದೆ.


 

1. ಸರ್ವ ಸದಸ್ಯರ 2ನೇ ಸಭೆಯ ನಿರ್ಣಯದಂತೆ ಈ ಯೋಜನೆಯನ್ನು ಸದಸ್ಯರೆಲ್ಲರು ಕಡ್ಡಾಯವಾಗಿ ಹೊಂದಬೇಕಿದೆ. ಮರಣ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಸದಸ್ಯರು ಮತ್ತು ಸಿಬ್ಬಂದಿಗಳು ಈ ಯೋಜನೆಯ ಫಲಾನುಭವಿಗಳು. ಸಹಕಾರ ಸಂಘದ ಶೇಕಡ 60 ರಷ್ಟು ಸದಸ್ಯರು ಈ ಯೋಜನೆಗೆ ಹಣ ಪಾವತಿಸಿದ ತದನಂತರವೇ ಈ ನಿಧಿಯ ಪ್ರಯೋಜನವನ್ನು ವಿತರಿಸಲಾಗುವುದು.


2. ಮರಣ ನಿಧಿ ಯೋಜನೆಯ ಫಲಾನುಭವಿಯಾಗುವ ಸದಸ್ಯರಿಂದ 55 ವಯಸ್ಸಿನೊಳಗೆ ಒಮ್ಮೆ ಮಾತ್ರ ಇಡಿಗಂಟಿನ ರೂಪದಲ್ಲಿ 1000 ರೂಗಳನ್ನು ಪಡೆದುಕೊಳ್ಳಲಾಗುವುದು. ಈಗಾಗಲೆ ಸದಸ್ಯತ್ವ ಪಡೆದುಕೊಂಡಿರುವವರು 1000 ರೂಗಳ ಮೊತ್ತವನ್ನು ಪಾವತಿಸಬೇಕು.


3. ಫಲಾನುಭವಿಯು ೬೦ ವಯಸ್ಸಿನೊಳಗೆ ಮೃತಪಟ್ಟಲ್ಲಿ ಕಾಲಕಾಲಕ್ಕೆ ನಿಗಧಿಪಡಿಸಿದ ಮೊತ್ತವನ್ನು ಮರಣೋತ್ತರ ಖರ್ಚಿಗಾಗಿ ಫಲಾನುಭವಿಯ ನಾಮ ನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು. ಪ್ರಸ್ತುತ ಮರಣ ನಿಧಿ ಮೊತ್ತವು 5000 ರೂಗಳು.


4. ಸಹಕಾರ ಸಂಘದಲ್ಲಿ ಸಂವೇದನಾತ್ಮಕ ಹಾರ್ದಿಕ ಸಂಬಂಧವನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ಈ ನಿಧಿಯನ್ನು ಸ್ಥಾಪಿಸಲಾಗಿದೆ. ಫಲಾನುಭವಿಯ ಮರಣದ ಸುದ್ದಿಯನ್ನು ಸದಸ್ಯರು ಆಡಳಿತ ಮಂಡಳಿಯ ಒಬ್ಬ ಪದಾಧಿಕಾರಿಗೆ ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ತಿಳಿಸಬೇಕು. ಅಧ್ಯಕ್ಷರು ಅಥವಾ ಅವರ ಅನುಪಸ್ಥಿತಿಯಲ್ಲಿ ಉಪ ಅಧ್ಯಕ್ಷರು ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಥವಾ ಫಲಾನುಭವಿಯ ಜಿಲ್ಲಾ ಉಸ್ತುವಾರಿ ನಿರ್ದೇಶಕರು ಮುಂದಿನ ಪ್ರಕ್ರಿಯೆಯ ನಿರ್ಣಯವನ್ನು ತ್ವರಿತವಾಗಿ ಕೈಗೊಳ್ಳುವರು.


5. ಈ ನಿಧಿಯ ಪ್ರಯೋಜನವನ್ನು ವೃದ್ಧಿಸುವುದಕ್ಕಾಗಿ ಸುರಕ್ಷಿತ ಮಾರ್ಗವನ್ನು ಆಡಳಿತ ಮಂಡಳಿಯು ಕಂಡುಕೊಳ್ಳುವುದು. ಮರಣ ನಿಧಿಯ ಸಂಗ್ರಹಣೆಯಲ್ಲಿ ಉಂಟಾಗಬಹುದಾದ ಕೊರತೆಯನ್ನು ಇತರೆ ನಿಧಿಗಳಿಂದ ಅಥವಾ ದೇಣಿಗೆಯ ಮೂಲಕ ಹೊಂದಿಸಿಕೊಳ್ಳಲಾಗುವುದು.


6. ಒಂದು ವರ್ಷದ ಅವಧಿಯಲ್ಲಿ ಸದಸ್ಯರ ಮರಣ ಪ್ರಮಾಣ ಮತ್ತು ಈ ನಿಧಿಗೆ ದೊರಕಬಹುದಾದ ಸಂಪನ್ಮೂಲಗಳ ಆಧಾರಗಳಲ್ಲಿ ಮೇಲೆ ತಿಳಿಸಿದ ನಿಯಮಗಳನ್ನು ಪರಿಶ್ಕರಿಸಲು ಆಡಳಿತ ಮಂಡಳಿಯು ನಿರ್ಣಯವನ್ನು ತೆಗೆದುಕೊಳ್ಳುವುದು.


7. ಕಂತಿನ ಮೊತ್ತವನ್ನು ಜಿಲ್ಲಾ ಉಸ್ತುವಾರಿ ನಿರ್ದೇಶಕರಿಗೆ ಅಥವಾ ಪರಿಚಯವಿರುವ ಆಡಳಿತ ಮಂಡಳಿಯ ಒಬ್ಬ ಪದಾಧಿಕಾರಿಗೆ ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವರಿಗೆ ನೀಡಬೇಕು.



8. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ: ಜಿಲ್ಲಾ ನಿರ್ದೇಶಕರನ್ನು ಅಥವಾ ಮೊಬೈಲ್ ಸಂಖ್ಯೆ: 8867360940 / e-mail: ksecsb.kar@gmail.com ಸಂಪರ್ಕಿಸಿ. 

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು