ಸಹಕಾರ ಸಂಘದ ಸಂವಿಧಾನ

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ

(Karnataka State Employees Cooperative Society of the Blind limited)

#೪೧/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-೫೬೦೦೯೭

Email: ksecsb.kar@gmail.com

ಉಪವಿಧಿಗಳು

 

ಅನುಕ್ರಮಣಿಕೆ


ಅಧ್ಯಾಯ-I. ಪೀಠಿಕೆ.
ಅಧ್ಯಾಯ- II. ಅರ್ಥ ವಿವರಣೆ.
ಅಧ್ಯಾಯ-III. ಸಂಘದ ಧ್ಯೇಯ ಮತ್ತು ಉದ್ದೇಶಗಳು.
ಅಧ್ಯಾಯ-IV. ಸದಸ್ಯರ ಅಧಿಕಾರ, ಹಕ್ಕುಗಳು ಮತ್ತು ಜವಾಬ್ದಾರಿಗಳು.
ಅಧ್ಯಾಯ-V. ಸಂಘದ ನಿಧಿಗಳು.
ಅಧ್ಯಾಯ-VI. ಸಾಲ.
ಅಧ್ಯಾಯ-VII. ಸಭೆಗಳು.
ಅಧ್ಯಾಯ-VIII. ಸಂಘದ ವ್ಯವಹಾರಗಳ ನಿರ್ವಹಣೆ.
ಅಧ್ಯಾಯ-IX. ಸಿಬ್ಬಂದಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು.
ಅಧ್ಯಾಯ-X. ಲೆಕ್ಕಪತ್ರಗಳ ನಿರ್ವಹಣೆ.
ಅಧ್ಯಾಯ-XI. ನಿವ್ವಳ ಲಾಭಾಂಶದ ವಿತರಣೆ.
ಅಧ್ಯಾಯ-XII. ಇತರೆ.
ಪ್ರವರ್ತಕರುಗಳು      
ಅಧ್ಯಾಯ-I ಪೀಠಿಕೆ>

೧.        ಹೆಸರು ಮತ್ತು ವಿಳಾಸ:

ಅ) ಸಂಘದ ಹೆಸರು ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (Karanataka State Employees Cooperative Society of the Blind limited) ಎಂದು ಇರುತ್ತದೆ. ಆ) ಸಂಘದ ನೋಂದಾಯಿತಕಾರ್ಯಾಲಯವು #೪೧/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-೫೬೦೦೯೭ ಇಲ್ಲಿ ಇರತಕ್ಕದ್ದು. ಇ) ಸಂಘದ ವಿಳಾಸದಲ್ಲಿ ಏನಾದರೂ ಬದಲಾವಣೆ ಆದಲ್ಲಿ, ಅಂತಹ ಬದಲಾವಣೆಯಾದ ೩೦ ದಿನಗಳೊಳಗಾಗಿ ನಿಬಂಧಕರು (ರಿಜಿಸ್ಟ್ರಾರ್) ಮತ್ತು ಸಂಬಂಧಪಟ್ಟ ಇತರ ಎಲ್ಲರಿಗೂ ತಿಳಿಸತಕ್ಕದ್ದು. ಈ) ಸಂಘದ ಹೆಸರು, ನೋಂದಣಿ ಸಂಖ್ಯೆ ಮತ್ತು ನೋಂದಾಯಿತ ವಿಳಾಸ, ಕೆಲಸದ ವೇಳೆ ಮತ್ತು ವಾರದರಜಾ ದಿನ ಇವುಗಳನ್ನು ಸಂಘದ ಕಾರ್ಯಾಲಯವು ಇರುವಂತಹ ಕಟ್ಟಡದಲ್ಲಿ ಎಲ್ಲರಿಗೂ ಕಾಣಿಸುವಂತಹ ಸ್ಥಳದಲ್ಲಿ ಒಂದು ಫಲಕದಲ್ಲಿ ಪ್ರದರ್ಶಿಸತಕ್ಕದ್ದು.

೨.        ಕಾರ್ಯವ್ಯಾಪ್ತಿ :

ಸಂಘದ ಕಾರ್ಯವ್ಯಾಪ್ತಿಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸೀಮಿತವಾಗಿರುತ್ತದೆ. #ಅನುಕ್ರಮಣಿಕೆ  

ಅಧ್ಯಾಯ- II


೩.        ಅರ್ಥ ವಿವರಣೆ:

ಈ ಉಪವಿಧಿಗಳಲ್ಲಿ ಅನ್ಯಥಾ ಪ್ರತ್ಯೇಕವಾಗಿ ಅವಕಾಶ ಮಾಡದ ಹೊರತು ಈ ಕೆಳಕಂಡ ಪದಗಳು ಮತ್ತು ವಾಕ್ಯಾವಳಿಗಳಿಗೆ ಈ ಉಪವಿಧಿಯಲ್ಲಿ ಕೊಟ್ಟಿರುವ ಅರ್ಥವೇ ಇರತಕ್ಕದ್ದು. ೧.        ಕಾಯಿದೆ ಎಂದರೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಮತ್ತುಕಲಂಅಂದರೆ ಕಾಯ್ದೆಯ ಒಂದು ಕಲಂ ಎಂದುಅರ್ಥ. ೨.   ನಿಯಮಗಳು ಎಂದರೆ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು ೧೯೬೦ಎಂದುಅರ್ಥ. ೩.   ಸರ್ಕಾರ ಎಂದರೆ ಕರ್ನಾಟಕ ರಾಜ್ಯ ಸರ್ಕಾರ; ೪.        ಸಹಕಾರ ಸಂಘ ಎಂದರೆ, ಮೇಲ್ಕಂಡ ಕಾಯ್ದೆಯ ಮೇರೆಗೆ ನೋಂದಾಯಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (Karanataka State Employees Cooperative Society of the Blind limited) ೫.        ಉಪವಿಧಿಗಳು ಎಂದರೆ, ಮೇಲ್ಕಂಡ ಕಾಯ್ದೆಯ ಮೇರೆಗೆ ನೋಂದಾಯಿಸಿರುವ ಅಥವಾ ನೋಂದಾಯಿಸಿರುವುದಾಗಿ ಭಾವಿಸಲ್ಪಟ್ಟಿರುವ ಮತ್ತು ತತ್ಕಾಲದಲಿ ಜಾರಿಯಲ್ಲಿರುವ ಉಪವಿಧಿಗಳು ಎಂದು ಅರ್ಥ ಮತ್ತು ಈ ಅರ್ಥದಲ್ಲಿ ಉಪವಿಧಿಗಳ ನೋಂದಾಯಿಸಿದ ತಿದ್ದುಪಡಿಯುಇದರಲ್ಲಿ ಒಳಗೊಂಡಿರುತ್ತದೆ. ೬.   ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದರೆ, ಕಾಯ್ದೆ, ನಿಯಮಗಳು ಮತ್ತು ಉಪವಿಧಿಗಳ ಮೇರೆಗೆ ಕಾರ್ಯ ನಿರ್ವಾಹಕನ ಕಾರ್ಯಗಳನ್ನು ನಿರ್ವಹಿಸುವ ಯಾವುದೇ ಪದನಾಮದಿಂದ ಕರೆಯಲ್ಪಡುವ ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಕಲಂ ೨೯ಜಿ ಅನ್ವಯ ನೇಮಕಗೊಂಡ ಸಹಕಾರ ಸಂಘದ ಅಧಿಕಾರಿ ಎಂದು ಅರ್ಥ. ೭.   ವರ್ಷ ಎಂದರೆ ಪ್ರತಿ ವರ್ಷ ಏಪ್ರಿಲ್ ೧ನೇ ದಿನಾಂಕದಿಂದ ಮಾರ್ಚ್ ೩೧ನೇ ದಿನಾಂಕದವರೆಗಿನ ಅವಧಿ. ೮.  ಮಂಡಳಿಎಂದರೆ, ಸಂಘದ ವ್ಯವಹಾರಗಳ ಕಾರ್ಯನಿರ್ವಹಣೆಯನ್ನು ವಹಿಸಲ್ಪಟ್ಟಿದ್ದು, ಯಾವುದೇ ಹೆಸರಿನಿಂದ ಕರೆಯಲ್ಪಡುವ ಸಂಘದ ಆಡಳಿತ ಮಂಡಳಿ. ೯.   ಸಹಕಾರ ವರ್ಷ ಅಥವಾ ವರ್ಷಎಂದರೆ, ಏಪ್ರಿಲ್ ೧ನೇ ದಿನಾಂಕದಂದು ಆರಂಭವಾಗುವ ವರ್ಷ. ೧೦. ಸದಸ್ಯ ಎಂದರೆ, ಸಹಕಾರ ಸಂಘದ ನೋಂದಣಿಕೋರಿ ಸಲ್ಲಿಸಲಾದ ಅರ್ಜಿಯಲ್ಲಿ ಸೇರ್ಪಡೆಯಾಗತಕ್ಕ ಒಬ್ಬ ವ್ಯಕ್ತಿ ಮತ್ತು ಈ ಕಾಯ್ದೆ, ನಿಯಮಗಳು ಹಾಗೂ ಉಪವಿಧಿಗಳ ಮೇರೆಗೆ ನೋಂದಣಿಯಾದ ನಂತರ ಸದಸ್ಯನೆಂದು ಪ್ರವೇಶ ಪಡೆದ ವ್ಯಕ್ತಿ. ೧೧. ಪದಾಧಿಕಾರಿಎಂದರೆ, ಅಧ್ಯಕ್ಷ, ಉಪಾಧ್ಯಕ್ಷ, ಸಭಾಪತಿ, ಉಪಸಭಾಪತಿ, ಆಢಳಿತಾಧಿಕಾರಿ, ವಿಶೇಷಾಧಿಕಾರಿ, ಸಮಾಪಕ ಮತ್ತು ಸಹಕಾರ ಸಂಘದ ವ್ಯವಹಾರ ಸಂಬಂಧದಲ್ಲಿ ಯಾವುದೇ ಅಧಿಕಾರವನ್ನು ಚಲಾಯಿಸಲು ಅಥವಾ ಯಾವುದೇ ಕಾರ್ಯಗಳನ್ನು ನಿರ್ವಹಿಸಲು ಅಧಿಕಾರ ಪಡೆದಿರುವ ನೌಕರನಲ್ಲದ ಯಾವುದೇ ಇತರ ವ್ಯಕ್ತಿ ಮತ್ತು ಮಂಡಳಿ ಸದಸ್ಯ ಅಥವಾ ಸಂಘದ ವ್ಯವಹಾರಗಳಿಗೆ ಸಂಬಂಧಪಡುವ ಕಾರ್ಯನೀತಿಗಳ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡಲು ಅಧಿಕಾರ ನೀಡಲಾದ ಯಾವುದೇ ಇತರ ವ್ಯಕ್ತಿಯನ್ನು ಒಳಗೊಂಡಿರುತ್ತದೆ. ೧೨.     ನಿಬಂಧಕರು (ರಿಜಿಸ್ಟ್ರಾರ್) ಎಂದರೆ, ಮೇಲ್ಕಂಡಕಾಯ್ದೆಯಲ್ಲಿ ವಿವರಿಸಿರುವಂತೆ ಸಹಕಾರ ಸಂಘಗಳ ನಿಬಂಧಕರು. ೧೩. ಹಿಂದುಳಿದ ವರ್ಗಗಳು ಎಂದರೆ, ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಮೀಸಲಾತಿ ಉದ್ದೇಶಕ್ಕಾಗಿ ಕಾಲ ಕಾಲಕ್ಕೆ ಸರ್ಕಾರ ಪಂಚಾಯತ್ ರಾಜ್ ಇಲಾಖೆಯಿಂದ ಎ ಮತ್ತುಬಿ ಪ್ರವರ್ಗಗಳು ಎಂಬುದಾಗಿ ವರ್ಗೀಕರಿಸಬಹುದಾದ ಮತ್ತು ಅಧಿಸೂಚಿಸಬಹುದಾದಅಂಥ ವರ್ಗಅಥವಾ ವರ್ಗಗಳ ನಾಗರೀಕರು. ೧೪. ಸಹಕಾರ ಚುನಾವಣಾ ಪ್ರಾಧಿಕಾರ ಎಂದರೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ೧೯೫೯ ರ ಕಲಂ ೩೯ಎಎ ರಡಿಯಲ್ಲಿ ರಚಿತವಾದ ಸಹಕಾರ ಚುನಾವಣಾ ಪ್ರಾಧಿಕಾರ ೧೫. ಡೆಲಿಗೇಟ್ (ಪ್ರತಿನಿಧಿಗಳು) ಎಂದರೆ ಇತರೆ ಸಹಕಾರ ಸಂಘಗಳಲ್ಲಿ ಒಂದು ಸಹಕಾರ ಸಂಘವನ್ನು ಪ್ರತಿನಿಧಿಸಲು ನಿಯೋಜಿಸಿದ ಅಂಥ ಸಂಘದ ಒಬ್ಬ ಸದಸ್ಯ. ೧೬. ಅಧ್ಯಕ್ಷಎಂದರೆ ಈ ಉಪವಿಧಿಗಳ ಪ್ರಕಾರ ಚುನಾಯಿತ ನಿರ್ದೇಶಕರುಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿ. ೧೭.  ಉಪಾಧ್ಯಕ್ಷ ಎಂದರೆ ಈ ಉಪವಿಧಿಗಳ ಪ್ರಕಾರ ಚುನಾಯಿತ ನಿರ್ದೇಶಕರುಗಳಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿ. ೧೮. ನಿರ್ದೇಶಕ ಎಂದರೆ ಸದಸ್ಯರುಗಳಿಂದ ಚುನಾಯಿತರಾದ ಅಥವಾ ಕೋ-ಆಪ್ಟ್ ಮಾಡಿಕೊಂಡ ಆಡಳಿತ ಮಂಡಳಿ ಸದಸ್ಯ. ೧೯.  ಉಪ ಸಮಿತಿ ಎಂದರೆ ಸಂಘದ ಉಪವಿಧಿಗಳನ್ವಯ ನಿರ್ದಿಷ್ಟವಾದ ಕಾರ್ಯನಿಮಿತ್ತ ನಿರ್ದಿಷ್ಟವಾದ ಅವಧಿಗೆ ಆಡಳಿತ ಮಂಡಳಿಯಿಂದ ನೇಮಿಸಲ್ಪಟ್ಟ ಯಾವುದೇ ಹೆಸರಿನಿಂದ ಕರೆಯುವ ಸಮಿತಿ. ೨೦. ಮುದ್ರೆ ಎಂದರೆ ಸಂಘದ ಸಾಮಾನ್ಯ ಮುದ್ರೆ. ೨೧. ಅವನು ಎಂದರೆ ಅವಳು ಮತ್ತು ಅದು ಸಹಾ ಸೇರುತ್ತದೆ. ೨೨.  ಅಂಧತ್ವ ಎಂದರೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ ಹಾಗೂ ತತ್ಸಂಬಂಧಿ ನಿಯಮಗಳಲ್ಲಿ ಅರ್ಥೈಸಿರುವಂತೆ ಭಾವಿಸತಕ್ಕದ್ದು. ೨೩. ಅಂಧರು/ ಭಾಗಶಃ ಅಂಧರು (Blind/ Low Vision) ಎಂದರೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ ಹಾಗೂ ತತ್ಸಂಬಂಧಿತ ನಿಯಮಗಳಿಗೆ ಅನುಗುಣವಾಗಿ ಬೆಂಚ್ಮಾರ್ಕ್ ಪ್ರಮಾಣಕ್ಕೆ (ಶೇ ೪೦) ಕಡಿಮೆ ಇಲ್ಲದಂತೆ ಅಂಧತ್ವವನ್ನು ಹೊಂದಿರುವವರು. #ಅನುಕ್ರಮಣಿಕೆ  

ಅಧ್ಯಾಯ-III


೪.        ಸಂಘದ ಧ್ಯೇಯ ಮತ್ತು ಉದ್ದೇಶಗಳು:-

ಸಂಘವು ಕೆಳಕಂಡ ವಿವಿದೋದ್ದೇಶಗಳನ್ನು ಹೊಂದಿರುತ್ತದೆ. ೧. ಸಂಘದ ಸದಸ್ಯರುಗಳಲ್ಲಿ ಆರ್ಥಿಕ ಸಶಕ್ತಿಕರಣ ಮತ್ತು ಮಿತವ್ಯಯ, ಉಳಿತಾಯ ಹಾಗೂ ಪರಸ್ಪರ ಸಹಕಾರಕ್ಕೆ ಉತ್ತೇಜನ ನೀಡುವುದು. ಈ ಉದ್ದೇಶದ ಈಡೇರಿಕೆಗೆ ಮತ್ತು ಸಾಧನೆಗೆ ಪತ್ತಿನ ವ್ಯವಹಾರ ಕೈಗೊಳ್ಳುವುದು. ೨. ಸದಸ್ಯರ ಆರ್ಥಿಕ ಅಬಿವೃದ್ದಿಯ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಹಾಗೂ ಅವುಗಳಿಗೆ ಬೇಕಾದ ಆರ್ಥಿಕ ಸಹಾಯವನ್ನು ಕಲ್ಪಿಸುವುದು. ೩. ಸದಸ್ಯರುಗಳ ಸುಭದ್ರ ಸೂರಿನ ವ್ಯವಸ್ಥೆಗಾಗಿ ನಿವೇಶನ, ಗೃಹ ನಿರ್ಮಾಣ, ವಸತಿ ಸಂಕೀರ್ಣಗಳ ಖರೀದಿ ಅಥವಾ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡುವುದು ಮತ್ತುಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ೪. ಸಂಘದ ಸದಸ್ಯರಿಗೆಅವಶ್ಯವಾಗಿರುವ ಸಾಲ ಸೌಲಭ್ಯಗಳನ್ನು ನೀಡಲು ಸರ್ಕಾರ ಹಾಗೂ ಹೊರಗಿನ ಸಂಘ ಸಂಸ್ಥೆಗಳು ಅಂದರೆ ಜಿಲ್ಲಾ ಸಹಕಾರಕೇಂದ್ರ ಬ್ಯಾಂಕ್, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ, ಎನ್.ಸಿ.ಡಿ.ಸಿ (National Co-Operative Development Corporation) L.r.©.L. ರಾಷ್ಟ್ರೀಕೃತ ಬ್ಯಾಂಕುಗಳು ಇತ್ಯಾದಿಗಳಿಂದ ಪುನರ್ಧನ ಸಾಲ ಸೌಲಭ್ಯಗಳನ್ನು ಪಡೆಯಬಹುದು. ೫. ಸದಸ್ಯರು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಸೌಲಭ್ಯವನ್ನು ನೀಡುವುದು ಹಾಗೂ ವಿದ್ಯಾರ್ಥಿ ವೇತನವನ್ನು ನೀಡುವುದು. ೬. ನಿರ್ದೇಶಕ ಮಂಡಳಿಯು ರೂಪಿಸಿದ ನಿಯಮಗಳಿಗೆ ಅನುಸಾರವಾಗಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಬಳಸುವ ನಿಧಿಗಳನ್ನು ರಚಿಸುವುದು, ಸಿಬ್ಬಂದಿಯವರ ಮತ್ತು ಸದಸ್ಯರ ಅನುಕೂಲಕ್ಕಾಗಿ ವಿವಿಧ ಕಲ್ಯಾಣ ನಿಧಿಗಳನ್ನು ಸ್ಥಾಪಿಸುವುದು. ೭. ಸದಸ್ಯರುಗಳಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವುದು. ೮. ಮಹಿಳಾ ಸದಸ್ಯರಿಗೆ ವಿಶೇಷವಾಗಿ ವಿಧವಾ, ಕಾನೂನಿನ ಮುಖಾಂತರ ಪ್ರತ್ಯೇಕಗೊಂಡ ಹಾಗೂ ಏಕ ಪೋಷಕ (ಸಿಂಗಲ್ ಪೇರೆಂಟ್) ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಸಂಘದ ಯೋಜನೆಗಳಲ್ಲಿ ಆಧ್ಯತೆಯನ್ನು ನೀಡುವುದು ಮತ್ತು ಇವರ ಕ್ಷೇಮಾಭಿವೃದ್ದಿಗಾಗಿ ಸಂಘದ ಆರ್ಥಿಕ ಮಿತಿಗೆ ಒಳಪಟ್ಟು ವಿಶೇಷ ಯೋಜನೆಗಳನ್ನು ರೂಪಿಸುವುದು. ೯. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು ಹಾಗೂ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಂದ ಮತ್ತು ಸರ್ಕಾರೇತರ ಹಣಕಾಸು ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಒಳಗೊಂಡಂತೆ ಸಹಕಾರಿ ಸಂಘಗಳ ಬೆಳವಣಿಗೆಗೆ ಲಭ್ಯವಿರಬಹುದಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು. ೧೦. ನಿಬಂಧಕರ ಪೂರ್ವಾನುಮತಿಯ ಮೇರೆಗೆ ಸಂಘದ ಅನುಕೂಲತೆಗಾಗಿ ಯಾವುದೇ ಸ್ವರೂಪದ ಸ್ತಿರ ಮತ್ತು ಚರ ಆಸ್ತಿಗಳನ್ನು ಅರ್ಜಿಸಲು ಹಾಗೂ ಅರ್ಜಿಸಿದ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯವಹರಿಸಲು ಸಂಘವು ಮುಕ್ತವಾಗಿರುವುದು. ೧೧. ಸಂಘದ ಸದಸ್ಯರಿಂದ, ಸಹ ಸದಸ್ಯರಿಂದ, ನಾಮಮಾತ್ರ ಸದಸ್ಯರುಗಳ ಠೇವಣಿಗಳು ಸೇರಿದಂತೆ ಆಡಳಿತ ಮಂಡಳಿಯಿಂದ ಅನುಮೋದಿಸಲ್ಪಟ್ಟ ಠೇವಣಿದಾರರಿಂದ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಈ ಠೇವಣಿಗಳ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ಕೊಡುವುದು. ೧೨. ಸಂಘದ ಅವಶ್ಯಕತೆಯನುಸಾರ ನಿಬಂಧಕರ ಅನುಮತಿಯೊಂದಿಗೆ ಕಾರ್ಯವ್ಯಾಪ್ತಿ ಶಾಖೆಗಳನ್ನು ತೆರೆಯುವುದು. ೧೩. ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಮತ್ತು ಆರ್ಥಿಕ ಸ್ತಿತಿಯನ್ನು ಉತ್ತಮಗೂಳಿಸುವುದಕ್ಕಾಗಿ ಸಂಘದ ಉದ್ದೇಶಗಳಿಗೆ ಪೂರಕವಾದ ಮತ್ತಿತರೆ ಕಾರ್ಯಗಳನ್ನು ಕೈಗೂಳ್ಳುವುದು. ೧೪. ವಿವಾಹ ವೇದಿಕೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ೧೫. ರಾಜ್ಯದ ದೃಷ್ಟಿ ಸವಾಲಿಗ ಸಮುದಾಯದ ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸುವುದು ಹಾಗೂ ವಿವಿಧ ಸರ್ಕಾರಗಳಿಂದ ಲಭ್ಯವಿರಬಹುದಾದ ಯೋಜನೆಗಳ ಪ್ರಯೋಜನವನ್ನು ಅರ್ಹ ವ್ಯಕ್ತಿಗಳಿಗೆ ಒದಗಿಸುವಲ್ಲಿ ಸರ್ಕಾರಗಳ ಸಹಯೋಗದೊಂದಿಗೆ ಪ್ರಯತ್ನಿಸುವುದು. ೧೬. ಪ್ರಮುಖ ಹಬ್ಬಗಳಲ್ಲಿ ಸದಸ್ಯರುಗಳಿಗೆ ಹಬ್ಬದ ಸಾಲವನ್ನು ನೀಡುವುದು. ೧೬. ಸದಸ್ಯರು ಅಥವಾ ಅವರ ಕುಟುಂಬ ವರ್ಗದವರು ಮೃತಪಟ್ಟಾಗ ತುರ್ತುನಿಧಿಯಿಂದ ಧನಸಹಾಯ ಮಾಡುವುದು. ೧೭. ರಾಷ್ಟ್ರೀಯ ಮತ್ತು ನಾಡಹಬ್ಬಗಳನ್ನು ಆಚರಿಸುವುದು, ಆ ಸಂದರ್ಬದಲ್ಲಿ ಸದಸ್ಯರು ಮತ್ತು ಅವರ ಕುಟುಂಬವರ್ಗದವರು ಹಾಗೂ ಅಂಧ ಸಮುದಾಯದವರಿಗಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ೧೮. ಸದಸ್ಯರುಗಳು ಹಾಗೂ ಅವರ ಕುಟುಂಬ ವರ್ಗದವರಿಗಾಗಿ ತಡೆರಹಿತ (Accessible and Inclusive Tourism) ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸುವುದು. ೧೯. ವಿಶ್ವಅಂಗವಿಕಲರ ದಿನಾಚರಣೆ, ವಿಶ್ವ ಬ್ರೈಲ್ ದಿನಾಚರಣೆ ಮತ್ತುಅಂಧ ಸಮುದಾಯಕ್ಕೆ ಸಂಬಂಧಿಸಿದ ದಿನಾಚರಣೆಗಳನ್ನು ಆಚರಿಸುವುದು ಹಾಗೂ ಆ ಸಂದರ್ಭಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ೨೦. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಗುತ್ತಿಗೆ/ ಸಹಯೋಗ/ ಒಪ್ಪಂದದ ಮುಖಾಂತರ ಅಂಧ ವ್ಯಕ್ತಿಗಳಿಗೆ ತಾಂತ್ರಿಕ ಮತ್ತು ತಾಂತ್ರಿಕೇತರ ಸಾಧನ ಸಲಕರಣೆಗಳನ್ನು-ತಂತ್ರಾಂಶಗಳನ್ನು (Assistive Devices and Software) ತಯಾರಿಸಿ ಅಥವಾ ಖರೀದಿಸಿ ವಿತರಿಸುವುದು. ೨೧. ಅಂಧ ವಿದ್ಯಾರ್ಥಿಗಳಲ್ಲಿ ಬ್ರೈಲ್ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಶಿಬಿರಗಳನ್ನು ಹಮ್ಮಿಕೊಳ್ಳುವುದು. ೨೨. ಅಂಧ ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಸಮಾವೇಶ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು. ೨೩. ಅಂಧರು ಬಳಸುವ ಸಾದನ ಸಲಕರಣೆಗಳ ಸಂಗ್ರಹಾಗಾರವನ್ನು ಹೊಂದುವುದು ಮತ್ತು ಆ ಸಾಧನ ಸಲಕರಣೆಗಳನ್ನು ಮಾರಾಟ ಮಾಡುವುದು. ೨೪. ಅಂಧ ನೌಕರರಿಗಾಗಿ ಸರ್ಕಾರದ ಸಹಯೋಗದೊಂದಿಗೆ ವೃತ್ತಿಬುನಾದಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು ಇದಕ್ಕಾಗಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಅಗತ್ಯ ಅನುದಾನವನ್ನು ಪಡೆಯಲು ಸಂಘವು ಮುಕ್ತವಾಗಿರುವುದು. ೨೫. ಜನ ಸಾಮಾನ್ಯರಲ್ಲಿ ಅಂಧ ಹಾಗೂ ಅಂಗವಿಕಲರ ಬಗ್ಗೆ ಸಕಾರಾತ್ಮಕ ಅರಿವನ್ನು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ೨೬. ಅಂಧತ್ವ ನಿರ್ಮೂಲನೆಗಾಗಿ ಹಾಗೂ ಅಂಧ ಸಮುದಾಯದ ಜೀವನಮಟ್ಟವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ನಡೆಯುವ ಸಂಶೋಧನೆಗಳನ್ನು (R&D) ಪ್ರೋತ್ಸಾಹಿಸುವುದು ಮತ್ತು ಸಂಶೋಧನೆಯ ಫಲಿತಾಂಶಗಳನ್ನು ಸಮುದಾಯದಲ್ಲಿ ಪ್ರಚುರಪಡಿಸುವುದು ಹಾಗೂ ತಲುಪಿಸುವುದು. ೨೭. ಸಂಘದ ಧ್ಯೆಯೋದ್ದೇಶಗಳ ಈಡೇರಿಕೆಗಾಗಿ ಸಮಾನ ಧ್ಯೇಯೋದ್ದೇಶಗಳನ್ನು ಹೊಂದಿರುವ ಇತರ ಸಂಘ ಸಂಸ್ಥೆಗಳೊಡನೆ ಸಂಯೋಜನೆಗೊಳ್ಳುವುದು ಮತ್ತು ಅಂತಹದೇ ಸಂಘ-ಸಂಸ್ಥೆಗಳು ಸದರಿ ಸಂಘದೊಂದಿಗೆ ಸಂಯೋಜನೆ ಹೊಂದಲು ಸಹ ಅವಕಾಶ ಇರುವುದು. ೨೮. ಸದರಿ ಸಂಘದ ವ್ಯಾಪ್ತಿಗೆ ಒಳಪಡುವ ಅಂಧ ನೌಕರರಿಗಾಗಿಯೇ ಇರುವ ಇತರೇ ನೌಕರ ಸಂಘಟಣೆಗಳ ಧ್ಯೇಯೋದ್ದೇಶಗಳ ಈಡೇರಿಕೆಗಾಗಿಆರ್ಥಿಕ ನೆರವನ್ನು ಒಳಗೊಂಡಂತೆ ಸಾಧ್ಯವಿರಬಹುದಾದ ಎಲ್ಲಾ ರೀತಿಯ ನೆರವನ್ನು ನೀಡುವುದು. ೨೯. ಮೇಲೆ ತಿಳಿಸಿದ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಅಲ್ಲದೆ ಅಂಧ ಸಮುದಾಯದ ಸರ‍್ವಾಂಗೀಣ ಅಭಿವೃದ್ದಿಗೆ ಪ್ರಾಸಂಗಿಕವಾಗಿ ಅಗತ್ಯವಾಗಬಹುದಾದ ಯಾವುದೇ ಕಾರ್ಯಕ್ರಮ/ ಚಟುವಟಿಕೆಗಳನ್ನು ಸಂಘವು ಕೈಗೊಳ್ಳಲು ಮುಕ್ತವಾಗಿರುವುದು. ೩೦. ನಿಬಂಧಕರ ಪೂರ್ವಮಂಜೂರಾತಿಯ ಮೇರೆಗೆ ಈ ಉಪನಿಯಮದಲ್ಲಿ ತಿಳಿಸಿದ ಉದ್ದೇಶಗಳು ಮತ್ತು ಅಂಧ ಸಮುದಾಯಕ್ಕೆ ಪ್ರಯೋಜನಕಾರಿಯಾಗುವಂತಹ ಎಲ್ಲಾ ರೀತಿಯ ಗುರಿ ಉದ್ದೇಶಗಳ ಸಾಧನೆಗಾಗಿ ಉಪಯುಕ್ತವಾಗುವಂತಹ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದು. #ಅನುಕ್ರಮಣಿಕೆ  

ಅಧ್ಯಾಯ-IV. ಸದಸ್ಯರ ಅಧಿಕಾರ, ಹಕ್ಕುಗಳು ಮತ್ತು ಜವಾಬ್ದಾರಿಗಳು


೫.        ಸದಸ್ಯತ್ವ:

ಸಂಘದ ಸದಸ್ಯ ವೃಂದವು ಈ ಕೆಳಕಂಡವರನ್ನು ಒಳಗೊಂಡಿರತಕ್ಕದ್ದು. ಅ)  ಸಾಮಾನ್ಯ ಸದಸ್ಯರುಗಳು ಆ)  ಸಹ ಸದಸ್ಯರುಗಳು ಇ)  ನಾಮ ಮಾತ್ರ ಸದಸ್ಯರು ಈ)  ರಾಜ್ಯ ಸರ್ಕಾರ ಉ)  ಕೇಂದ್ರ ಸರ್ಕಾರ  

೬.        ಸದಸ್ಯತ್ವಕ್ಕೆ ಅರ್ಹತೆಗಳು:

ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ, ಅನುದಾನಿತ, ನಿಗಮ ಮಂಡಳಿ ಹಾಗೂ ಕೇಂದ್ರ ಸರ್ಕಾರಿ, ಅನುದಾನಿತ, ನಿಗಮ ಮಂಡಳಿಗಳ, ಸಾರ್ವಜನಿಕ ವಲಯದ ಸಂಸ್ಥೆಗಳ, ರಾಷ್ಟ್ರೀಕೃತ ಬ್ಯಾಂಕುಗಳ, ಕೇಂದ್ರ ಸರ್ಕಾರದ ಅಂಗಸಂಸ್ಥೆಗಳಲ್ಲಿ ಖಾಯಂ ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅಂಧ ನೌಕರರು.  

೭.        ಸಂಘದ ಸದಸ್ಯರಾಗಿ ಪ್ರವೇಶ ಪಡೆಯಲು ಅರ್ಜಿ :

ಅ) ಸಂಘದ ಸದಸ್ಯತ್ವಕೋರಿ ಸಲ್ಲಿಸುವ ಪ್ರತಿಯೊಂದು ಅರ್ಜಿಯು ಬರಹದಲ್ಲಿದ್ದು, ಸಂಘವು ನಿಗದಿಪಡಿಸಿದ ನಮೂನೆಯಲ್ಲಿರತಕ್ಕದ್ದು ಮತ್ತು ಅದನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ವಿಳಾಸಿಸತಕ್ಕದ್ದು. ಆ) ಪ್ರತಿಯೊಂದು ಅರ್ಜಿಯನ್ನು ರೂ.೧೦೦೦/-(ಒಂದು ಸಾವಿರ ರೂಪಾಯಿಗಳ ಮಾತ್ರ)ಗಳ ಒಂದು ಷೇರಿನ ಪೂರ್ಣ ಸಂದಾಯಿತ ಮೌಲ್ಯ, ಪ್ರತೀ ಷೇರಿಗೆ ಷೇರು ಶುಲ್ಕ ೧೦೦/-(ಒಂದು ನೂರು ರೂಪಾಯಿಗಳು ಮಾತ್ರ) ಮತ್ತು ಪ್ರವೇಶಧನ ರೂ.೧೦೦/-(ಒಂದುನೂರು ರೂಪಾಯಿಗಳು ಮಾತ್ರ) ಮತ್ತುಅರ್ಜಿ ಶುಲ್ಕ ರೂ.೫೦/-(ಐವತ್ತು ರೂಪಾಯಿಗಳು ಮಾತ್ರ) ಹಾಗೂ ಇತರೆ ಶುಲ್ಕ ರೂ.೫೦/- ಗಳೊಂದಿಗೆ ಸಲ್ಲಿಸತಕ್ಕದ್ದು.  

೮.        ಸಂಘದ ಸದಸ್ಯರಾಗಿ ಪ್ರವೇಶ ಪಡೆಯುವುದು :

ಅ) ಸಂಘದ ಸದಸ್ಯತ್ವ ಬಯಸಿ ಸಲ್ಲಿಸುವ ಅರ್ಜಿಯು ಅರ್ಹತಾ ಮಾನದಂಡಕ್ಕೆ ಅನುಗುಣವಾಗಿದೆಯೇ ಮತ್ತು ಸರಿಯಾದ ವಿವರಗಳನ್ನು ಅರ್ಜಿದಾರರು ನೀಡಿದ್ದಾರೆಯೇ ಎಂಬುದನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಪರಿಶೀಲಿಸಿದ ತರುವಾಯ ಅದನ್ನು ಅನುಮೋದನೆಗಾಗಿ ಸಂಘದ ಮಂಡಳಿಯ ಮುಂದೆ ಮಂಡಿಸಬೇಕು. ಆ) ಅರ್ಜಿದಾರರು ಸಂಘದ ಸದಸ್ಯತ್ವಕ್ಕೆ ಅರ್ಹರಾಗಿದ್ದಾರೆಂದು ಮಂಡಳಿಗೆ ಮನವರಿಕೆಯಾದ ತರುವಾಯ ಅರ್ಜಿದಾರನಿಗೆ ಸದಸ್ಯತ್ವ ನೀಡುವ ನಿರ್ಣಯವನ್ನು ಅಂಗೀಕರಿಸತಕ್ಕದ್ದು ಮತ್ತು ಹಾಗೆ ಸದಸ್ಯತ್ವ ಪಡೆದ ಅರ್ಜಿದಾರರ ಹೆಸರನ್ನು ನಡವಳಿ ಪುಸ್ತಕದಲ್ಲಿ ದಾಖಲು ಮಾಡತಕ್ಕದ್ದು. ಇ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಅಂತಹ ನಿರ್ಣಯದ ದಿನಾಂಕದಿಂದ ೭ ದಿನಗಳೊಳಗಾಗಿ ಆ ಸದಸ್ಯರ ಹೆಸರನ್ನು ನಡೆವಳಿ ಸಂಖ್ಯೆ ಮತ್ತು ದಿನಾಂಕದೊಂದಿಗೆ ಷೇರು ರಿಜಿಸ್ಟರಿನಲ್ಲಿ ನಮೂದಿಸತಕ್ಕದ್ದು. ಈ) ಪ್ರವೇಶ ಕೋರಿ ಸಂಘಕ್ಕೆ ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಎರಡು ತಿಂಗಳೊಳಗಾಗಿ ಸಂಘವು ಅಂತಹ ಯಾರೇ ವ್ಯಕ್ತಿಗೆ ಸದಸ್ಯತ್ವ ನೀಡತಕ್ಕದ್ದು ಅಥವಾ ಸದಸ್ಯತ್ವ ನೀಡಲು ನಿರಾಕರಿಸತಕ್ಕದ್ದು ಮತ್ತು ಅರ್ಜಿದಾರರಿಗೆ ಸದಸ್ಯತ್ವ ನೀಡಿರುವುದನ್ನು ಅಥವಾ ನಿರಾಕರಿಸಿರುವುದನ್ನು ಸದರಿ ಅವಧಿಗೆ ಮುಂಚೆ ಲಿಖಿತದಲ್ಲಿ ಮಾಹಿತಿಯನ್ನು ಕಳುಹಿಸತಕ್ಕದ್ದು. ಸದರಿ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಅರ್ಜಿದಾರರಿಗೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ಮಾಹಿತಿಯು ತಲುಪದಿದ್ದರೆ, ಸಂಘವು ಸದಸ್ಯತ್ವವನ್ನು ಅಂಗೀಕರಿಸಿದೆ ಎಂದು ಭಾವಿಸತಕ್ಕದ್ದು. ಉ) ಸಂಘವು ಸದಸ್ಯತ್ವವನ್ನು ನಿರಾಕರಿಸಿದಲ್ಲಿ ಅಂತಹ ವ್ಯಕ್ತಿಯು ಕಾರ್ಯವ್ಯಾಪ್ತಿ ನಿಬಂಧಕರಿಗೆ ಮೇಲ್ಮನವಿ ಸಲ್ಲಿಸಬಹುದು. ನಿಬಂಧಕರು ಅಂತಹ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿ ಆತನನ್ನು ಸಂಘದ ಸದಸ್ಯರನ್ನಾಗಿ ಸೇರಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಆಡಳಿತ ಮಂಡಳಿಗೆ ನಿರ್ದೇಶಿಸಬಹುದು. ಮೇಲ್ಮನವಿದಾರರಿಗೆ ಸದಸ್ಯತ್ವ ನೀಡಬೇಕೆಂದು ನಿರ್ದೇಶಿಸಿದರೆ ಆಡಳಿತ ಮಂಡಳಿಯು ಆದೇಶದ ದಿನಾಂಕದಿಂದ ೧೫ ದಿನಗಳೊಳಗಾಗಿ ಆತನಿಗೆ ಸದಸ್ಯತ್ವ ನೀಡತಕ್ಕದ್ದು.  

೯.        ಸದಸ್ಯರ ಮತದಾನದ ಹಕ್ಕುಗಳು :

(i)  ಸಂಘದ ಸಾಮಾನ್ಯ ಸದಸ್ಯ, ಪ್ರತಿನಿದಿ ಅಥವಾ ನಿಯೋಜಿಸಿದ ಸದಸ್ಯ ಸಂಘದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ಮತವನ್ನು ಹೊಂದಿರತಕ್ಕದ್ದು ಮತ್ತು ಅಂತಹ ಪ್ರತಿಯೊಬ್ಬರು ಅವರ ಮತವನ್ನು ಖುದ್ದಾಗಿ ಚಲಾಯಿಸತಕ್ಕದ್ದು. ಚುನಾವಣೆ ದಿನಾಂಕದಿಂದ ಸದಸ್ಯತ್ವ ಪಡೆದ ೧೨ ತಿಂಗಳು ಪೂರ್ಣಗೊಳ್ಳದ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. (ii) ಸಂಘದ ಸಾಮಾನ್ಯ ಸದಸ್ಯ, ಪ್ರತಿನಿದಿ ಅಥವಾ ನಿಯೋಜಿಸಿದ ಸದಸ್ಯ ಒಟ್ಟು ೫ ಸರ್ವ ಸದಸ್ಯರ ಸಭೆಗಳ ಪೈಕಿ ೩ ಸಭೆಗಳಿಗೆ ಗೈರು ಹಾಜರಾದಲ್ಲಿ ಅವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. (iii)     ಸಂಘದ ಸಾಮಾನ್ಯ ಸದಸ್ಯ ಅಥವಾ ಪ್ರತಿನಿಧಿ ಒಂದು ಸಹಕಾರ ವರ್ಷದಲ್ಲಿ ಕನಿಷ್ಟ ಸೇವೆ ಮತ್ತು ಅನುಕೂಲತೆಗಳನ್ನು ಸತತವಾಗಿ ೩ ವರ್ಷಗಳು ಉಪಯೋಗಿಸಿಕೊಳ್ಳದಿದ್ದಲ್ಲಿ ಅವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.  

೧೦.     ಸದಸ್ಯತ್ವಕ್ಕಾಗಿ ಅನರ್ಹತೆಗಳು :

೧) ಯಾವುದೇ ವ್ಯಕ್ತಿಯು; (i)  ದಿವಾಳಿಯೆಂದು ನ್ಯಾಯ ನಿರ್ಣಯಿಸುವಂತೆ ಅರ್ಜಿ ಸಲ್ಲಿಸಿದ್ದರೆ ಅಥವಾ ವಿಮುಕ್ತ ದಿವಾಳಿಯಾಗಿದ್ದರೆ, (ii) ರಾಜಕೀಯ ಸ್ವರೂಪದ ಅಪರಾಧವಲ್ಲದ ಇತರ ಯಾವುದೇ ಅಪರಾಧಕ್ಕಾಗಿ ಅಥವಾ ನೈತಿಕ ಅಧಃಪತನವನ್ನೊಳಗೊಂಡ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾಗಿದ್ದರೆ, ಅಂತಹ ಶಿಕ್ಷೆಯನ್ನು ರದ್ದು ಪಡಿಸಿರದಿದ್ದರೆ ಅಥವಾ ಅಪರಾಧವನ್ನು ಮನ್ನಿಸಿರದಿದ್ದರೆ ಮತ್ತು ಅಂತಹ ಶಿಕ್ಷೆಯು ಮುಕ್ತಾಯದ ದಿನಾಂಕದಿಂದ ೫ ವರ್ಷಗಳ ಅವಧಿಯು ಕಳೆದಿರದಿದ್ದರೆ (iii)     ಅಂತಹ ಸಹಕಾರ ಸಂಘವು ನಡೆಸುವಂತಹ ವ್ಯವಹಾರವನ್ನು ನಡೆಸುತ್ತಿದ್ದರೆ, (iv) ಸಹಕಾರ ಸಂಘವು ನಡೆಸುತ್ತಿರುವಂತಹದ್ದೇ ವ್ಯವಹಾರವನ್ನು ನಡೆಸುತ್ತಿರುವ ಇತರ ಇದೇ ರೀತಿಯ ಸಹಕಾರ ಸಂಘಕ್ಕೆ ಈಗಾಗಲೇ ಸದಸ್ಯರಾಗಿದ್ದರೆ ಅಥವಾ ಸದಸ್ಯರಾದರೆ ಅವರು ಸಂಘದ ಸದಸ್ಯರಾಗಿ ಪ್ರವೇಶ ಪಡೆಯಲು ಅರ್ಹರಾಗತಕ್ಕದ್ದಲ್ಲ. (v)  ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಕಲಂ ೧೬ ರಡಿಯಲ್ಲಿ ಸದಸ್ಯತ್ವ ಪಡೆಯಲು ಅನರ್ಹನಾದಲ್ಲಿ, (vi) ಸಂಘದ ವೇತನ ನೌಕರನಾಗಿದ್ದಲ್ಲಿ ಅಥವಾ ಸಂಘಕ್ಕೆ ಆರ್ಥಿಕ ನೆರವು ನೀಡುವ ಬ್ಯಾಂಕಿನ ನೌಕರನಾಗಿದ್ದಲ್ಲಿ ಮತ್ತು ೨) ಸಂಘದ ಯಾವೊಬ್ಬ ಸದಸ್ಯರು ಕೆಳಗೆ ನಿರ್ದಿಷ್ಟಪಡಿಸಿರುವ ಅನರ್ಹತೆಗಳ ಪೈಕಿ ಯಾವುದೇ ಅನರ್ಹತೆಗಳಿಗೆ ಒಳಗಾದರೆ, ಆ ಅನರ್ಹತೆಯು ಉಂಟಾದ ದಿನಾಂಕದಿಂದ ಅವರು ಸಂಘದ ಸದಸ್ಯರಾಗಿರುವುದು ನಿಂತು ಹೋಗಿರುವುದಾಗಿ ಭಾವಿಸತಕ್ಕದ್ದು.  

೧೧.     ಸದಸ್ಯತ್ವ ಕಳೆದುಕೊಳ್ಳುವುದು :

ಸಂಘದ ಯಾರೇ ಸದಸ್ಯರು ಈ ಕೆಳಕಂಡ ಕಾರಣಗಳ ಪೈಕಿ ಯಾವುದೇ ಕಾರಣಕ್ಕೆ ಸದಸ್ಯತ್ವ ಕಳೆದುಕೊಳ್ಳತಕ್ಕದ್ದು. ಅ) ಮರಣ ಹೊಂದಿದಾಗ; ಆ) ರಾಜೀನಾಮೆ ನೀಡಿದಾಗ; ಇ) ಅನರ್ಹಗೊಂಡಾಗ ಮತ್ತು ಸದಸ್ಯತ್ವ ಸಮಾಪ್ತಿಗೊಂಡಾಗ ಉ) ಯಾರೇ ಸದಸ್ಯರು ಮೇಲೆ ನಿರ್ದಿಷ್ಟಪಡಿಸಿದ ಅನರ್ಹತೆಗೆ ಒಳಗಾದರೆ ಸಂಘದ ಮಂಡಳಿಯು ಅದರ ಸಭೆಯ ನಡೆವಳಿಗಳಲ್ಲಿ ಆ ಸಂಗತಿಯನ್ನು ವಿವರವಾಗಿ ದಾಖಲು ಮಾಡತಕ್ಕದ್ದು ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯು ಸಂಬಂಧಪಟ್ಟ ವ್ಯಕ್ತಿಗೆ ಅವರ ಸದಸ್ಯತ್ವ ನಿಂತುಹೋಗಿರುವ ಬಗ್ಗೆ ತಿಳಿಸತಕ್ಕದ್ದು.  

೧೨.     ಸದಸ್ಯತ್ವಕ್ಕೆ ರಾಜೀನಾಮೆ :

ಯಾವ ಸದಸ್ಯನೇ ಆಗಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು: ೧.   ಅವರುಒಂದು ವರ್ಷಕ್ಕೆ ಕಡಿಮೆಯಿಲ್ಲದ ಅವಧಿಯವರೆಗೆ ಸಂಘದಲ್ಲಿ ಷೇರುಗಳನ್ನು ಹೊಂದಿರಬೇಕು, ಅಲ್ಲದೆ ಒಂದು ತಿಂಗಳ ಮುನ್ಸೂಚನೆ ಕೊಡಬೇಕು; ೨.   ಸಾಲಗಾರನಾಗಿ ಅಥವಾ ಜಾಮೀನುದಾರನಾಗಿ ಸಂಘಕ್ಕೆ ಕೊಡಬೇಕಾದ ಬಾಕಿ ಅಥವಾ ಇನ್ನಾವುದೇ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ತೀರಿಸಿರಬೇಕು. ೩.   ಅಂತಹ ರಾಜೀನಾಮೆಯನ್ನು ಸಂಘದ ಮಂಡಳಿಯು ಅಂಗೀಕರಿಸಿರಬೇಕು.  

೧೩.     ಷೇರುಗಳ ವರ್ಗಾವಣೆ :

೧.   ಸದಸ್ಯರು ಸಹಕಾರ ಸಂಘದಲ್ಲಿರುವ ಅವರ ಷೇರು ಅಥವಾ ಹಿತಾಸಕ್ತಿಯನ್ನು ವರ್ಗಾವಣೆ ಮಾಡುವುದು. ೨.   ಸಂಘದ ಸದಸ್ಯರು ತಮ್ಮ ಷೇರುಗಳನ್ನು ಸಂಘದಇತರ ಸದಸ್ಯರಿಗೆ ವರ್ಗಾಯಿಸಲು, ನಿರ್ದೇಶಕ ಮಂಡಳಿಗೆ ಷೇರು ಪ್ರಮಾಣ ಪತ್ರಗಳೊಡನೆ ಸಲ್ಲಿಸಬಹುದು. ಇಂತಹ ವರ್ಗಾವಣೆ ಆಗುವ ಪ್ರತಿ ಷೇರಿಗೆ ರೂ.೨೫ ಶುಲ್ಕವನ್ನು ವರ್ಗಾವಣೆ ಮಾಡುವವರಿಂದ ಪಡೆಯತಕ್ಕದ್ದು. ಷೇರು ವರ್ಗಾವಣೆ ಮಾಡುವ ಸದಸ್ಯರು, ವರ್ಗಾವಣೆ ಮಾಡಲಾಗುವ ಷೇರುಗಳನ್ನು ಪಡೆದು ಕನಿಷ್ಟ ಒಂದು (೧) ವರ್ಷವಾಗಿರಬೇಕು. ಅರ್ಜಿಜೊತೆ ಷೇರುಗಳನ್ನೂ ಪಡೆಯುವವರಿಂದ ಒಪ್ಪಿಗೆ ಪತ್ರ ಪಡೆದು ಲಗತ್ತಿಸಿರಬೇಕು. ತಪ್ಪಿದಲ್ಲಿ ಅಂತಹ ಷೇರುಗಳ ವರ್ಗಾವಣೆ ಮಾಡುವಂತಿಲ್ಲ. ನಿರ್ದೇಶಕ ಮಂಡಳಿಯು ಈ ವರ್ಗಾವಣೆಯನ್ನು ಒಪ್ಪುವವರೆಗೂ ಹಾಗೂ ಸಂಘದ ಪುಸ್ತಕದಲ್ಲಿ ಈ ಬಗ್ಗೆ ನೋಂದಾವಣೆ ಯಾಗುವವರೆಗೂ ಈ ಷೇರು ವರ್ಗಾವಣೆ ಕ್ರಮಬದ್ಧವಾಗಿರುವುದಿಲ್ಲ.  

೧೪.     ಸಂಘದ ಸದಸ್ಯರ ಮರಣದ ತರುವಾಯ ಹಿತಾಸಕ್ತಿಯ ವರ್ಗಾವಣೆ :

೧) ಸಹಕಾರ ಸಂಘದಒಬ್ಬ ಸದಸ್ಯರ ಮರಣದ ತರುವಾಯ ಸಂಘವು, ಮೃತ ಸದಸ್ಯರ ಷೇರುಅಥವಾ ಹಿತಾಸಕ್ತಿಯನ್ನು ಈ ಕೆಳಕಂಡ ವ್ಯಕ್ತಿಗಳಿಗೆ ವರ್ಗಾವಣೆ ಮಾಡತಕ್ಕದ್ದು: (ಅ) ನಿಯಮಗಳಿಗನುಸಾರ ಮೃತರು ನಾಮ ನಿರ್ದೇಶನ ಮಾಡಿದ ಮತ್ತು ನಾಮನಿರ್ದೇಶನವು ಚಾಲ್ತಿಯಲ್ಲಿದ್ದರೆ ಆ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಅಥವಾ, (ಆ) ಯಾರೇ ವ್ಯಕ್ತಿಯನ್ನು ಹಾಗೆ ನಾಮನಿರ್ದೇಶನ ಮಾಡಿರದಿದ್ದರೆ ಅಥವಾ ನಾಮ ನಿರ್ದೇಶನವು ಚಾಲ್ತಿಯಲ್ಲಿರದಿದ್ದರೆ, (i)  ಈ ಸಂಘದ ಮೃತ ಸದಸ್ಯರ ಷೇರುಅಥವಾ ಹಿತಾಸಕ್ತಿಯು ಒಂದು ಲಕ್ಷ ರೂಪಾಯಿಗಳಿಗೆ ಮೀರದಿದ್ದಲ್ಲಿ, ಮೃತ ಸದಸ್ಯರ ವಾರಸುದಾರರೆಂಬುದಾಗಿ ಅಥವಾ ಕಾನೂನುಬದ್ಧ ಪ್ರತಿನಿಧಿಗಳೆಂದು ಸಂಘದ ಮಂಡಳಿಯವರಿಗೆ ಕಂಡು ಬರಬಹುದಾದಂತಹ ವ್ಯಕ್ತಿಗಳಿಗೆ ಅಂತಹ ವ್ಯಕ್ತಿಗಳು ಇಂಡೆಮ್ನೆಟಿ ಬಾಂಡನ್ನು ಮಂಡಳಿಯವರು ಅಗತ್ಯ ಪಡಿಸಬಹುದಾದ ಜಾಮೀನುಗಳೊಂದಿಗೆ ಬರೆದುಕೊಟ್ಟ ನಂತರ, (ii) ರೂ. ಒಂದು ಲಕ್ಷಕ್ಕೆ ಮೀರಿದ ಸಂದರ್ಭದಲ್ಲಿ ಆ ಷೇರನ್ನು ಅಥವಾ ಹಿತಾಸಕ್ತಿಯನ್ನು ಸಕ್ಷಮ ನ್ಯಾಯಾಲಯವು ನೀಡಿದಉತ್ತರಾಧಿಕಾರತ್ವ ಪ್ರಮಾಣಪತ್ರವನ್ನು ಅಥವಾ ಕಾನೂನುಬದ್ಧ ಇತರ ಅಧಿಕಾರ ದಾಖಲೆ ಪತ್ರವನ್ನು ಹಾಜರುಪಡಿಸುವಂತಹ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ವರ್ಗಾಯಿಸತಕ್ಕದ್ದು. (iii)     ಆಯಾ ಸಂದರ್ಭಾನುಸಾರ, ಅಂತಹ ನಾಮನಿರ್ದೇಶನಗೊಂಡವರನ್ನುಅಥವಾ ವಾರಸುದಾರರನ್ನು ಅಥವಾ ಕಾನೂನುಸಮ್ಮತ ಪ್ರತಿನಿಧಿಯನ್ನು ಸಹಕಾರ ಸಂಘದ ಸದಸ್ಯರನ್ನಾಗಿ ಸೇರಿಸಿಕೊಂಡಿರಬೇಕು. (iv) ಈ ಉಪವಿಧಿಯಲ್ಲಿರುವುದ್ಯಾವುದೂ ಈ ಸಹಕಾರ ಸಂಘದಲ್ಲಿರುವ ಮೃತ ಸದಸ್ಯರ ಷೇರು ಅಥವಾ ಹಿತಾಸಕ್ತಿಯನ್ನು ವಾರಸಿನ ಮೂಲಕ ಅನ್ಯಥಾ ಪಡೆಯಲು ಅಪ್ರಾಪ್ತ ವಯಸ್ಕನ ಅಥವಾ ಅಸ್ವಸ್ಥಚಿತ್ತನಾಗಿರುವ ವ್ಯಕ್ತಿಯನ್ನು ಪ್ರತಿಬಂಧಿಸತಕ್ಕದ್ದಲ್ಲ. ೨) ಈ ಉಪವಿಧಿಯ ಅಂದರೆ ಅಂಶ ೧ರಲ್ಲಿ ಏನೇ ಇದ್ದರೂಆಯಾ ಸಂದರ್ಭಾನುಸಾರ, ಅಂತಹ ಯಾವ ನಾಮ ನಿರ್ದೇಶನಗೊಂಡವರಾಗಲೀ, ವಾರಸುದಾರರಾಗಲೀ ಅಥವಾ ಕಾನೂನುಬದ್ಧ ಪ್ರತಿನಿಧಿಯಾಗಲೀ, ನಿಯಮಾನುಸಾರವಾಗಿ ನಿಶ್ಚಿತಪಡಿಸಲಾದ ಮೃತ ಸದಸ್ಯರ ಷೇರಿನ ಅಥವಾ ಹಿತಾಸಕ್ತಿಯ ಮೊಬಲಗನ್ನು ತನಗೇ ಪಾವತಿ ಮಾಡಬೇಕೆಂದು ಲಿಖಿತರೂಪದಲ್ಲಿ ಸಂಘವನ್ನು ಕೇಳಿಕೊಳ್ಳಬಹುದು. ೩) ಸಹಕಾರ ಸಂಘವು ಮೃತ ಸದಸ್ಯರಿಗೆ ಸಂಘದಿಂದ ಸಲ್ಲಬೇಕಾದ ಇತರಎಲ್ಲಾ ಮೊಬಲಗನ್ನು ಆಯಾ ಸಂದರ್ಭಾನುಸಾರ, ಅಂತಹ ನಾಮನಿರ್ದೇಶಿತರಿಗೆ ಅಥವಾ ವಾರಸುದಾರರಿಗೆಅಥವಾಕಾನೂನುಬದ್ಧ ಪ್ರತಿನಿಧಿಗಳಿಗೆ ಪಾವತಿ ಮಾಡಬಹುದು. ೪) ಸಹಕಾರ ಸಂಘದ ಈ ಉಪವಿಧಿಯ ಉಪಬಂಧಗಳಿಗನುಸಾರವಾಗಿ ಸಂಘವು ಮಾಡಿದ ಎಲ್ಲಾ ವರ್ಗಾವಣೆಗಳು ಮತ್ತು ಹಣ ಪಾವತಿಗಳು ಇತರೆ ಯಾವುದೇ ವ್ಯಕ್ತಿಯಿಂದ ಸಂಘದ ಮೇಲೆ ಮಾಡಲಾದ ಯಾವುದೇ ತಗಾದೆ ವಿರುದ್ಧವಾಗಿ, ಕಾನೂನುಬದ್ಧವಾಗಿ ಊರ್ಜಿತವಾಗಿರತಕ್ಕದ್ದು ಮತ್ತು ಪರಿಣಾಮಕಾರಿಯಾಗಿರತಕ್ಕದ್ದು.  

೧೫.     ಸದಸ್ಯರ ಷೇರು ಮೌಲ್ಯ :

ಸಂಘದ ಸದಸ್ಯರು, ಸಂಘದ ಸದಸ್ಯತ್ವ ಕಳೆದುಕೊಂಡರೆ, ಅವರ ನಾಮನಿರ್ದೇಶಿತ ವ್ಯಕ್ತಿಗೆ ಅಥವಾ ಕಾನೂನು ಸಮ್ಮತ ಪ್ರತಿನಿಧಿಗೆ ಸಂದಾಯ ಮಾಡಬೇಕಾದ ಸಂಘದ ಬಂಡವಾಳದಲ್ಲಿನ ಅವರ ಷೇರು ಅಥವಾ ಹಿತಾಸಕ್ತಿಯ ಮೌಲ್ಯದಲ್ಲಿನ ಅವರ ಷೇರಿನ ಹಿತಾಸಕ್ತಿಯ ಮೊತ್ತವನ್ನು ಈ ಕೆಳಕಂಡ ರೀತಿಯಲ್ಲಿ ಗೊತ್ತುಪಡಿಸತಕ್ಕದ್ದು. (i)  ಆ ಮೊತ್ತವು ಸದಸ್ಯತ್ವವು ನಿಂತುಹೋಗುವುದಕ್ಕೆ ಹಿಂದಿನ ಕೊನೆಯ ಲೆಕ್ಕಪರಿಶೋಧಿತ ಆಸ್ತಿ ಜವಾಬ್ದಾರಿ ತಃಖ್ತೆ (ಬ್ಯಾಲೆನ್ಸ್ ಷೀಟ್) ಯಲ್ಲಿ ತೋರಿಸಿರುವಂತೆ, ಸಂಘದ ಹಣಕಾಸು ಸ್ಥಿತಿಯನ್ನಾಧರಿಸಿದ ಮೌಲ್ಯ ನಿರ್ಣಯದ ಮೂಲಕ ನಿರ್ಧರಿಸಿದ ಮೊಬಲಗು ಆಗಿರತಕ್ಕದ್ದು. (ii) ಹಾಗೆ ನಿರ್ಧರಿಸಿದ ಮೊಬಲಗು, ಅಂತಹ ಷೇರು ಅಥವಾ ಹಿತಾಸಕ್ತಿಗೆ ಸಂಬಂಧಿಸಿದಂತೆ ಸಂಘದಿಂದ ಪಡೆದ ವಾಸ್ತವಿಕ ಮೊಬಲಗು ಮೀರತಕ್ಕದ್ದಲ್ಲ. (iii)     ಸಂಘಕ್ಕೆ ನಿವ್ವಳ ನಷ್ಟವೇನಾದರೂ ಆಗಿದ್ದರೆ, ಅದು ಸಂಘದ ಸಂದಾಯವಾದ ಷೇರು ಬಂಡವಾಳಕ್ಕೆ ಸಮನಾಗಿದ್ದರೆ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಷೇರಿನ ಮೌಲ್ಯ ಇಲ್ಲ ಎಂಬುದಾಗಿ ಪರಿಗಣಿಸತಕ್ಕದ್ದು. (iv) ಸಂಘದ ಸದಸ್ಯರ ಅಥವಾ ಅವರ ನಾಮನಿರ್ದೇಶಿತ ವ್ಯಕ್ತಿ ಕಾನೂನು ಸಮ್ಮತ ಪ್ರತಿನಿಧಿ ಮತ್ತು ಸಂಘದ ನಡುವೆ ಷೇರು ಬಂಡವಾಳದಲ್ಲಿನ ಷೇರು ಮೌಲ್ಯ ಅಥವಾ ಹಿತಾಸಕ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾದ ಸಂದರ್ಭದಲ್ಲಿ ಆ ಕುರಿತು ನಿಬಂಧಕರವರ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು.  

೧೬.     ವಾರ್ಷಿಕ ಸಾಮಾನ್ಯ ಸಭೆಯ ಪೂರ್ವದಲ್ಲಿ ಸದಸ್ಯತ್ವ ನೀಡುವುದು:

ಸಂಘವು ತನ್ನ ವಾರ್ಷಿಕ ಸಾಮಾನ್ಯ ಸಭೆ ಗೊತ್ತುಪಡಿಸಿದ ದಿನಾಂಕದ ಮುಂಚಿನ ಮೂವತ್ತು (೩೦) ದಿನಗಳ ಅವಧಿಯಲ್ಲಿ ಹೊಸದಾಗಿಯಾರೇ ಸದಸ್ಯರನ್ನು ಸೇರಿಸಿಕೊಳ್ಳತಕ್ಕದ್ದಲ್ಲ.  

೧೭.     ಸದಸ್ಯರ ಪಟ್ಟಿ :

ಪ್ರತಿ ಸಹಕಾರ ವರ್ಷದಕೊನೆಯ ದಿನಾಂಕದಂದು ಇರುವಂತೆ ಸದಸ್ಯರ ಪಟ್ಟಿಯನ್ನು ಸಂಘವು ಸಿದ್ಧಪಡಿಸತಕ್ಕದ್ದು ಮತ್ತು ಚುನಾವಣೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ಕೊನೆಯ ಪಕ್ಷ ಐವತ್ತು (೫೦) ದಿವಸಗಳಿಗೆ ಮುಂಚಿತವಾಗಿ ಮತದಾರರತಾತ್ಕಾಲಿಕ ಪಟ್ಟಿಯನ್ನು ಮತ್ತು ಹದಿನೈದು (೧೫) ದಿನಗಳಿಗೆ ಮುಂಚಿತವಾಗಿಅಂತಿಮ ಮತದಾರರ ಪಟ್ಟಿಯನ್ನು ಸಂಘದ ಪ್ರಕಟಣಾ ಫಲಕ (notice board)ದಲ್ಲಿ ಪ್ರಕಟಿಸತಕ್ಕದ್ದು.  

೧೮.     ಸಹಸದಸ್ಯರು :

೧.   ಸಂಘದ ಸಾಮಾನ್ಯ ಸದಸ್ಯರಂತೆ ಸಂಘದ ಪದಾಧಿಕಾರಿಯಾಗಲು ಹಾಗೂ ಮತ ಚಲಾಯಿಸುವ ಹಕ್ಕನ್ನು ಹೊರತುಪಡಿಸಿ ಇತರೆ ಎಲ್ಲಾ ಹಕ್ಕು ಬಾದ್ಯತೆಗಳನ್ನು ಹೊಂದಲು ಸಹ-ಸದಸ್ಯರೂ ಸಹ ಅರ್ಹರಿರುತ್ತಾರೆ. ಸಂಘದ ಒಟ್ಟು ಸದಸ್ಯರ ಶೇ.೧೫ ರಷ್ಟು ಮಾತ್ರ ಸಹಸದಸ್ಯರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಸಂಘವು ಈ ಕೆಳಗಿನ ಯಾರನ್ನೇ ಆಗಲಿ ಸಹ ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದು. ಟಿಪ್ಪಣಿ: ಭಾರತೀಯ ಒಪ್ಪಂದದ ಕಾಯಿದೆ ೧೮೭೨ ಕಲಂ ೧೧ರ ಪ್ರಕಾರ ಕರಾರುಗಳನ್ನು ಮಾಡಿಕೊಳ್ಳಲು ಅರ್ಹನಿದ್ದ ಯಾವುದೇ ವ್ಯಕ್ತಿ. ೨) ಸಹ ಸದಸ್ಯರಾಗ ಬಯಸುವವರು ನಿಗಧಿಪಡಿಸಿದ ಷೇರು ಮತ್ತು ಪ್ರವೇಶ ಶುಲ್ಕವನ್ನು ಪಾವತಿಮಾಡಿ ಕನಿಷ್ಟ ಒಂದು ಷೇರಿನ ಪೂರ್ಣ ಹಣವನ್ನು ಹಾಗೂ ಇತರೆ ಶುಲ್ಕಗಳೊಂದಿಗೆ ಪಾವತಿ ಮಾಡಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ೩) ನಿರ್ದೇಶಕ ಮಂಡಳಿಯು ಸಹ ಸದಸ್ಯತ್ವ ಕೋರಿ ಬಂದಿರುವ ಯಾವುದೇ ಅರ್ಜಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಪಡೆದಿರುವರು. ಸದಸ್ಯತ್ವವನ್ನು ತಿರಸ್ಕರಿಸಿದರೆ ಸದಸ್ಯತ್ವಕ್ಕಾಗಿ ಅಭ್ಯರ್ಥಿಯು ಸಲ್ಲಿಸಿದ ಪೂರ್ಣ ಹಣವನ್ನು ವಾಪಸ್ ಮಾಡಬೇಕು. ಈ ಬಗ್ಗೆ ನಿರ್ಣಯಕೈಗೊಂಡ ಎರಡು ತಿಂಗಳಲ್ಲಿ ಅಂತಹ ಅಭ್ಯರ್ಥಿಗೆ ಅವನ ಅರ್ಜಿ ತಿರಸ್ಕೃತವಾದ ಬಗ್ಗೆ ತಿಳಿಸತಕ್ಕದ್ದು. ೪) ಸಹ ಸದಸ್ಯರು ಸಂಘವು ನೀಡುವ ಎಲ್ಲಾ ರೀತಿಯ ಸೇವೆಗಳನ್ನು ಪಡೆಯಲು ಅರ್ಹರಿರುತ್ತಾರೆ. ೫) ಸಹ ಸದಸ್ಯರು ಸಂಘವು ಘೋಷಿಸುವ ಲಾಭಾಂಷವನ್ನು ಪಡೆಯಲು ಅರ್ಹರಿರುತ್ತಾರೆ. ೬)  ಸಹ ಸದಸ್ಯರು ಸಂಘದ ಸಾಮಾನ್ಯ ಸಭೆಯ ಅಥವಾ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನೋಟೀಸು ಪಡೆಯಲು, ವಾರ್ಷಿಕ ವರದಿ ಅಥವಾ ಲೆಕ್ಕ ಪತ್ರಗಳ ವಿವರ ಪಡೆಯಲು ಅರ್ಹರಾಗಿರುವುದಿಲ್ಲ. ೭)  ಸಂಘದ ಯಾವುದೇ ಪದವಿಗೆ ಸ್ಪರ್ಧಿಸುವುದಕ್ಕಾಗಲೀ ಅಥವಾ ಮತದಾನ ಮಾಡುವುದಕ್ಕಾಗಲೀ ಸಹ ಸದಸ್ಯರು ಅರ್ಹರಾಗಿರುವುದಿಲ್ಲ. ೮)  ಸಹ ಸದಸ್ಯರನ್ನು ಆಡಳಿತ ಮಂಡಳಿ ಬಯಸಿದ್ದಲ್ಲಿ ಸಂಘದ ಸಾಮಾನ್ಯ ಸದಸ್ಯರನ್ನಾಗಿ ಪರಿವರ್ತಿತಗೊಳಿಸಬಹುದು.  

೧೯.     ನಾಮ ಮಾತ್ರ ಸದಸ್ಯರು :

ಸಂಘವು ಈ ಕೆಳಗಿನ ಯಾರನ್ನೇ ಆಗಲಿ ನಾಮ ಮಾತ್ರ ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದು. ೧)   ಅ) ಸಂಘದ ಕಾರ್ಯ ಕ್ಷೇತ್ರದಲ್ಲಿ ಖಾಯಂ ನಿವಾಸಿಯಾಗಿರುವ ಅಥವಾ ಆ ಕಾರ್ಯಕ್ಷೇತ್ರದಲ್ಲಿ ವ್ಯಾಪಾರ ಅಥವಾ ಉದ್ಯಮದಲ್ಲಿಇರುವ ೧೮ ವರ್ಷ ತುಂಬಿದ, ದಿವಾಳಿಯಾಗಿರದ, ಹುಚ್ಚನಲ್ಲದ ವ್ಯಕ್ತಿ. ಆ)  ಮಾಲೀಕತ್ವ ಸಂಸ್ಥೆ ಅಥವಾ ಪಾಲುದಾರಿಕೆ ಸಂಸ್ಥೆಗಳು ಅಥವಾ ೧೯೬೦ರ ಕರ್ನಾಟಕ ಸಂಘಗಳ ನೊಂದಣಿಕಾಯ್ದೆ (ಕರ್ನಾಟಕ ೧೯೬೦, ೧೭ನೇ ಕಾಯ್ದೆ) ಮೇರೆಗೆ ನೊಂದಣಿಯಾದ ಸಂಘಗಳು. ಇ)  ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಚನೆಗೊಂಡ ಸಂಸ್ಥಾರೂಪದ ವ್ಯಕ್ತಿ. ಟಿಪ್ಪಣಿ : ಭಾರತೀಯ ಒಪ್ಪಂದದಕಾಯ್ದೆ ೧೮೭೨ ಕಲಂ ೧೧ರ ಪ್ರಕಾರ ಕರಾರುಗಳನ್ನು ಮಾಡಿಕೊಳ್ಳಲು ಅರ್ಹನಿದ್ದ ಯಾವುದೇ ವ್ಯಕ್ತಿ. ೨)   ಸದಸ್ಯರಾಗಬಯಸುವರು ನಿಗಧಿಪಡಿಸಿದ ಪ್ರವೇಶ ಶುಲ್ಕವನ್ನು ಪಾವತಿ ಮಾಡಿ ಲಿಖಿತರೂಪದಲ್ಲಿ ಅರ್ಜಿ ಸಲ್ಲಿಸಬೇಕು. ೩)   ಸದಸ್ಯತ್ವ ಕೋರಿ ಬಂದಿರುವ ಅರ್ಜಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವು ಆಡಳಿತ ಮಂಡಳಿಯದಾಗಿರುತ್ತದೆ. ೪)   ನಾಮ ಮಾತ್ರ ಸದಸ್ಯರು ಸಂಘದ ಈ ಕೆಳಗಿನ ಸೇವೆಗಳನ್ನು ಪಡೆಯಲು ಅರ್ಹರಿರುತ್ತಾರೆ. ೫)   ನಾಮ ಮಾತ್ರ ಸದಸ್ಯರು ಸಂಘವು ಘೋಷಿಸುವ ಲಾಭಾಂಶವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ೬)   ನಾಮ ಮಾತ್ರ ಸದಸ್ಯರು ಸಂಘದ ಸಾಮಾನ್ಯ ಸಭೆಯಅಥವಾ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು, ನೋಟೀಸು ಪಡೆಯಲು, ವಾರ್ಷಿಕ ವರದಿ ಅಥವಾ ಲೆಕ್ಕ ಪತ್ರಗಳ ವಿವರ ಪಡೆಯಲು ಅರ್ಹರಾಗಿರುವುದಿಲ್ಲ. ೭)   ಸಂಘದಯಾವುದೇ ಪದವಿಗೆ ಸ್ಪರ್ಧಿಸುವುದಕ್ಕಾಗಲೀ ಅಥವಾ ಮತದಾನ ಮಾಡುವುದಕ್ಕಾಗಲೀ ನಾಮ ಮಾತ್ರ ಸದಸ್ಯರು ಅರ್ಹರಾಗಿರುವುದಿಲ್ಲ. ೮)  ನಾಮ ಮಾತ್ರ ಸದಸ್ಯತ್ವ ಅವಧಿ ಮೂರು ವರ್ಷಗಳು ಅಥವಾ ಅವರು ಸಂಘದಿಂದ ಪಡೆದ ಸೇವೆ ಮುಕ್ತಾಯವಾಗುವವರಗೆ ಇವುಗಳಲ್ಲಿ ಯಾವುದು ಮೊದಲೋ ಅದಾಗಿರುತ್ತದೆ. ಆದರೂ ಅವರ ಸದಸ್ಯತ್ವವನ್ನು ಮಂಡಳಿಯು ನವೀಕರಿಸುವ ಅಧಿಕಾರ ಹೊಂದಿರುತ್ತದೆ. #ಅನುಕ್ರಮಣಿಕೆ  

ಅಧ್ಯಾಯ-V. ಸಂಘದ ನಿಧಿಗಳು


೨೦.     ಕಾರ್ಯನಿರತ ಬಂಡವಾಳ

ಸಂಘದಕಾರ್ಯನಿರತ ಬಂಡವಾಳದಲ್ಲಿ ಈ ಕೆಳಕಂಡವು ಒಳಗೊಂಡಿರತಕ್ಕದ್ದು. ಅ) ಷೇರು ಬಂಡವಾಳ ಆ) ಸದಸ್ಯರ ಠೇವಣಿಗಳು ಇ) ಸಾಲಗಳು  

೨೧.     ನಿಧಿಗಳ ಸಂಗ್ರಹಣೆ

ಈ ಕೆಳಕಂಡ ಒಂದುಅಥವಾಅದಕ್ಕೂ ಹೆಚ್ಚು ವಿಧಾನಗಳಿಂದ ಸಂಘದ ನಿಧಿಯನ್ನು ಸಂಗ್ರಹಿಸಬಹುದು. ಅ)  ಪ್ರವೇಶ ಶುಲ್ಕ ಆ) ಷೇರುಗಳನ್ನು ನೀಡುವುದು ಇ) ಸದಸ್ಯರಿಂದ ಠೇವಣಿಗಳು ಈ) ಷೇರುಗಳ ವರ್ಗಾವಣೆಗಳ ಮೇಲೆ ಶುಲ್ಕ. ಉ) ಸದಸ್ಯರಿಂದಆವರ್ತನಾ ಠೇವಣಿಗಳನ್ನು ಸ್ವೀಕರಿಸುವುದರ ಮೂಲಕ ಊ) ಸದಸ್ಯರಿಂದ ಮತ್ತು ದಾನಿಗಳಿಂದ ವಂತಿಗೆಗಳನ್ನು ಪಡೆಯುವುದು  

೨೨.     ಅಧಿಕೃತ ಷೇರು ಬಂಡವಾಳ :

ಪ್ರತಿ ಷೇರಿನ ಮುಖ ಬೆಲೆ ರೂ.೧೦೦೦/- (ಒಂದು ಸಾವಿರ ರೂಪಾಯಿಗಳು ಮಾತ್ರ) ದಂತೆ ಸಂಘವು ಸರ್ವಸದಸ್ಯರಸಭೆಯಲ್ಲಿ ನಿಗಧಿಪಡಿಸಿದ ಷೇರು ಬಂಡವಾಳವನ್ನು ಹೊಂದಬಹುದಾಗಿದೆ. ಆಡಳಿತ ಮಂಡಳಿ ಚುನಾವಣೆ ದಿನಾಂಕವು ೬ ತಿಂಗಳು ಇರುವಾಗ ಸಂಘದ ಷೇರಿನ ಬೆಲೆಯನ್ನು ಹೆಚ್ಚಿಸಬಾರದು.  

೨೩.     ಠೇವಣಿಯ ವಿಧಗಳು

ಸಂಘವು ಸದಸ್ಯರಿಂದ ಠೇವಣಿಗಳನ್ನು ಸ್ವೀಕರಿಸಲು ಸರ್ವಸದಸ್ಯರ ಸಭೆಯ ಅನುಮತಿಯ ಮೇರೆಗೆ ಠೇವಣಿಗಳನ್ನು ಪಡೆಯಬಹುದು. ಈ ರೀತಿ ಅನುಮತಿ ನೀಡಿದ ಸಭೆಯ ನಿರ್ಣಯ ಮುಂದಿನ ಸರ್ವಸದಸ್ಯರ ಸಭೆಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಂಘವು ಸದಸ್ಯರಿಂದ ಕೆಳಕಂಡ ಠೇವಣಿಗಳನ್ನು ಸ್ವೀಕರಿಸಬಹುದು. ೧.   ಚಾಲ್ತಿ ಖಾತೆ ಠೇವಣಿ; ೨.   ಉಳಿತಾಯ ಖಾತೆ ಠೇವಣಿ; ೩.   ಖಾಯಂ ಠೇವಣಿ; ೪.   ನಿತ್ಯನಿಧಿ ಠೇವಣಿ (ಪಿಗ್ಮಿಠೇವಣಿ) ೫.   ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿರ್ಧರಿಸುವಇತರೆ ಠೇವಣಾತಿಗಳು #ಅನುಕ್ರಮಣಿಕೆ  

ಅಧ್ಯಾಯ-VI. ಸಾಲ


೨೪.     ಸಾಲ:

ಸಂಘವು ತನ್ನ ಉದ್ದೇಶಗಳ ಈಡೇರಿಕೆಗಾಗಿ ಈ ಕೆಳಕಂಡ ಮೂಲಗಳಿಂದ ಅಗತ್ಯವಿರುವ ಕಡೆ ಸರ್ವಸದಸ್ಯರ ಸಭೆಯ ಅನುಮತಿಯ ಮೇರೆಗೆ ಸಾಲಗಳನ್ನು ಪಡೆಯಬಹುದು. ಈ ರೀತಿ ಅನುಮತಿ ನೀಡಿದ ಸಭೆಯ ನಿರ್ಣಯ ಮುಂದಿನ ಸರ್ವ ಸದಸ್ಯರ ಸಭೆಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ೧.   ಸರ್ಕಾರ ೨.   ಭಾರತೀಯ ಜೀವವಿಮಾ ನಿಗಮ ೩.   ರಾಷ್ಟ್ರೀಕೃತ ಬ್ಯಾಂಕ್ ಮತ್ತು ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ೪.   ಅಪೆಕ್ಸ್ ಬ್ಯಾಂಕ್ ಮತ್ತು ಬಿ.ಡಿ ಅಂಡ್ ಬಿ.ಆರ್.ಡಿ.ಸಿ.ಸಿ ಬ್ಯಾಂಕ್ ೫.   ಸಹಕಾರ ಬ್ಯಾಂಕ್‌ಗಳು ಮತ್ತುಇತರೆ ಸಹಕಾರ ಸಂಸ್ಥೆಗಳು ೬.   ಕರ್ನಾಟಕ ಸರ್ಕಾರ ಅಥವಾ ಸಂಘದ ಸರ್ವಸದಸ್ಯರ ಸಭೆಯು ಅನುಮೋದಿಸಿದ ಇತರೆ ಸಂಸ್ಥೆಗಳು.  

೨೫.     ಸಾಲ ನೀಡುವ ಗರಿಷ್ಠ ಮಿತಿ:

ಆಡಳಿತ ಮಂಡಳಿಯು ಅಂಗೀಕರಿಸಿದ ಭದ್ರತೆಗಳ ಮೇಲೆ ಅಥವಾ ಜಾಮೀನು ಪಡೆದು ಆಡಳಿತ ಮಂಡಳಿಯು ಒಳನಿಯಮಗಳನ್ನು ಮಾಡಿಕೊಂಡು ಸದಸ್ಯರುಗಳಿಗೆ ಅವಶ್ಯವಾದ ಸಾಲವನ್ನು ಮಂಜೂರು ಮಾಡಬಹುದು. ಕನಿಷ್ಟ ೨೫,೦೦೦ ದಿಂದ ಗರಿಷ್ಟ ೫೦,೦೦೦ ರೂಗಳವರೆಗೂ ಸಾಲ ನೀಡಬಹುದು. #ಅನುಕ್ರಮಣಿಕೆ  

ಅಧ್ಯಾಯ-VII. ಸಭೆಗಳು


೨೬. ಸಂಘದ ಸಭೆ : ಸಂಘದ ಸಾಮಾನ್ಯ [General Meeting] ಸಭೆಗಳೂ ಸೇರಿದಂತೆ ಎಲ್ಲಾ ಸಭೆಗಳನ್ನೂ ಸಂಘದ ನೋಂದಾಯಿತ ಕಛೇರಿಯಲ್ಲಿ ನಡೆಸತಕ್ಕದ್ದು. ನೋಂದಾಯಿತ ಕಛೇರಿಯಲ್ಲಿ ಸ್ಥಳಾವಕಾಶವಿಲ್ಲದಿದ್ದಲ್ಲಿ, ಸಂಘದ ನೋಂದಾಯಿತ ಕಛೇರಿ ಇರುವ ನಗರ / ಪಟ್ಟಣದಲ್ಲಿ ಬೇರೆ ಸ್ಥಳದಲ್ಲಿ ನಡೆಸತಕ್ಕದ್ದು.  

೨೭.     ವಾರ್ಷಿಕ ಸಾಮಾನ್ಯ ಸಭೆ :

ಸಂಘದ ವಾರ್ಷಿಕ ಸಾಮಾನ್ಯ ಸಭೆಗಳನ್ನು ಪ್ರತಿ ವರ್ಷ ಸೆಪ್ಟೆಂಬರ್ ೨೫ನೇ ತಾರೀಖಿನೊಳಗೆ ಈ ಕೆಳಕಂಡ ಉದ್ದೇಶಗಳಿಗಾಗಿ ನಡೆಸತಕ್ಕದ್ದು: ೧    ಹಿಂದಿನ ಸಾಮಾನ್ಯ ಸಭೆಯ ಮತ್ತು ವಿಶೇಷ ಸಾಮಾನ್ಯ ಸಭೆ ಯಾವುದಾದರೂ ಇದ್ದರೆ ಆ ಸಭೆಯ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸುವುದು ಮತ್ತು ಆ ಬಗ್ಗೆ ಕೈಗೊಂಡ ಕ್ರಮದ ಕುರಿತು ಟಿಪ್ಪಣಿ ಬರೆಯುವುದು. ೨    ವಾರ್ಷಿಕ ವರದಿಯನ್ನು ಮತ್ತು ಲಭ್ಯವಿರುವ ಇತ್ತೀಚಿನ ಲೆಕ್ಕಪರಿಶೋಧನಾ ವರದಿಯನ್ನು, ಆ ಲೆಕ್ಕಪರಿಶೋಧನಾ ವರದಿಯಲ್ಲಿ ತೋರಿಸಿದ ತಪ್ಪುಗಳನ್ನು ಸರಿಪಡಿಸಲು ಆಡಳಿತ ಮಂಡಳಿಯು ತೆಗೆದುಕೊಂಡಿರುವ ಕ್ರಮವನ್ನು ಪರಿಶೀಲಿಸಿ ಅನುಮೋದಿಸುವುದು. ೩    ಮುಂಬರುವ ವರ್ಷಕ್ಕಾಗಿ ಸಂಘದ ಮಂಡಳಿಯು ಸಿದ್ದಪಡಿಸಿದ ಸಂಘದ ಕಾರ್ಯಕ್ರಮಗಳನ್ನು ಅನುಮೋದಿಸುವುದು. ೪    ಸಂಘದ ವಾರ್ಷಿಕ ಆಯವ್ಯಯ ಪತ್ರವನ್ನು ಪರಿಶೀಲಿಸುವುದು ಮತ್ತು ಮಂಜೂರು ಮಾಡುವುದು. ೫    ನಿವ್ವಳ ಲಾಭದ ವಿತರಣೆಯನ್ನು ಪರಿಶೀಲಿಸುವುದು. ೬    ಉಪವಿಧಿಗಳಿಗನುಸಾರ ಮಂಡಿಸಬಹುದಾದ ಯಾವುದೇ ಇತರ ವಿಷಯವನ್ನು ಪರಿಶೀಲಿಸುವುದು. ೭    ಯಾವುದಾದರು ಕಾರ್ಯಾಚರಣೆಯ ವೆಚ್ಚದಲ್ಲಿ ಕೊರತೆಯುಂಟಾದಲ್ಲಿ, ಅದನ್ನು ಸರಿದೂಗಿಸಲು ಕಾರ್ಯಕ್ರಮ ರೂಪಿಸಿಕೊಳ್ಳುವುದು. ೮   ನಿಗಧಿತ ನಿಧಿಗಳನ್ನು ಮತ್ತು ಇತರೆ ನಿಧಿಗಳನ್ನು ಸ್ಥಾಪಿಸುವುದರ ಬಗ್ಗೆ ೯    ಸಂಘವು ಬೇರೆ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯುವ ಬಗ್ಗೆ ಅನುಮೋದನೆ ಮಾಡುವುದು ೧೦  ನೇಮಕಗೊಂಡ ಸಂಘದ ನೌಕರರು, ಆಡಳಿತ ಮಂಡಳಿ ಸದಸ್ಯರ ಮತ್ತು ಪದಾಧಿಕಾರಿಗಳ ಸಂಬಂಧಿಕರಾಗಿರುವ ಬಗ್ಗೆ ಪರಿಶೀಲಿಸುವುದು. ೧೧  ಸಂಘದ ಉಪವಿಧಿಗಳನ್ನು ತಿದ್ದುಪಡಿ ಮಾಡುವುದು. ೧೨   ಸಂಘದ ನೌಕರರ, ಆಡಳಿತ ಮಂಡಳಿ ಸದಸ್ಯರ ಮತ್ತು ಪದಾಧಿಕಾರಿಗಳ ಸದಾಚಾರ ಸಂಹಿತೆ ರಚಿಸಿ ಅನುಮೋದಿಸುವುದು. ೧೩  ಸದಸ್ಯರನ್ನು ನೋಂದಣಿ ಮಾಡುವ ಮತ್ತು ತೆಗೆದು ಹಾಕುವ ಬಗ್ಗೆ ಟಿಪ್ಪಣಿ. ೧೪  ಸಂಘದ ಸದಸ್ಯರು ಮತ್ತು ನಿರ್ದೇಶಕರುಗಳು ಸಂಘದ ಸೇವೆಗಳನ್ನು ಉಪಯೋಗಿಸುವ ಬಗ್ಗೆ ವಿಮರ್ಶಿಸುವುದು. ೧೫  ಸಂಘದ ನಿರ್ದೇಶಕರುಗಳು ಮತ್ತು ಅವರ ಸಂಬಂಧಿಕರುಗಳಿಗೆ ನೀಡಿದ ಸಾಲಗಳು ಮತ್ತು ಮುಂಗಡಗಳು, ಸುಸ್ತಿಯಾಗಿರುವ ಬಗ್ಗೆ ಮತ್ತು ಸುಸ್ತಿಯಾದ ಮೊಬಲಗನ್ನು ವಸೂಲಿ ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ ಪರಿಶೀಲಿಸುವುದು. ೧೬  ವಿಚಾರಣೆ ಮತ್ತು ಪರಿವೀಕ್ಷಣಾ ವರದಿಗಳು ಯಾವುದಾದರೂ ಇದ್ದಲ್ಲಿ ಸದರಿ ವರದಿಯಲ್ಲಿ ನಮೂದಿಸಿರುವ ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಮತ್ತು ದೋಷನಿವಾರಣೆ ಮಾಡುವ ಬಗ್ಗೆ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮದ ಬಗ್ಗೆ ಪರಿಶೀಲನೆ ಮಾಡುವುದು. ವಿಚಾರಣಾ ವರದಿಯಲ್ಲಿನ ವಿಚಾರಣಾ ಫಲಗಳನ್ನು ನಿಷೇದಾತ್ಮಕವಾಗಿ ನಿರ್ಣಯ ಕೈಗೊಳ್ಳತಕ್ಕದ್ದಲ್ಲ. ೧೭   ಲೆಕ್ಕಪರಿಶೋಧಕರನ್ನು ನೇಮಕ ಮಾಡುವುದು, ವಸೂಲಾಗದೇ ಇರುವ ಸಾಲಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು. ೧೮  ಸಂಘದ ನಿರ್ದೇಶಕರುಗಳಿಗೆ ಹಾಗು ಪದಾಧಿಕಾರಿಗಳಿಗೆ ಅವರ ಕರ್ತವ್ಯಕ್ಕನುಗುಣವಾಗಿ ಅಥವಾ ಸಂಬಂಧಪಟ್ಟ ಸಭೆಗಳಿಗೆ ಹಾಜರಾತಿಯಾದ ಬಗ್ಗೆ ಪಾವತಿಸಬೇಕಾದ ಸಂಭಾವನೆ, ಪ್ರವಾಸ ಭತ್ಯೆ, ದಿನ ಭತ್ಯೆ ಮತ್ತು ಇತರೆ ಭತ್ಯೆಗಳ ಬಗ್ಗೆ ವಿಮರ್ಶಿಸುವುದು. ೧೯   ಇನ್ನಾವುದೇ ವಿಚಾರಗಳು ಸಭೆಯಲ್ಲಿ ಮಂಡಿಸಿದಲ್ಲಿ  

೨೮.     ವಿಶೇಷ ಸಾಮಾನ್ಯ ಸಭೆ :

ಸಂಘದ ವಿಶೇಷ ಸಾಮಾನ್ಯ ಸಭೆಯನ್ನು ಮಂಡಳಿಯು ಯಾವುದೇ ಸಮಯದಲ್ಲಿ ಕರೆಯಬಹುದು ಮತ್ತು ಅಂತಹ ಸಭೆಯನ್ನು ಸಂಘದ ಸದಸ್ಯರ ಪೈಕಿ ಐದನೇ ಒಂದರಷ್ಟು (೧/೫) ಸಂಖ್ಯೆಯ ಸದಸ್ಯರು ಅಥವಾ ನಿಬಂಧಕರವರು ಸಹಿ ಮಾಡಿ ಲಿಖಿತದಲ್ಲಿ ಸಲ್ಲಿಸಿದ ಕಡ್ಡಾಯ ಕೋರಿಕೆಯನ್ನು ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಕರೆಯತಕ್ಕದ್ದು. ಹಾಗೆ ಕರೆಯಲಾದ ಸಭೆಯಲ್ಲಿ ಆ ಸಭೆಯ ನೋಟೀಸಿನಲ್ಲಿ ಹೇಳಿರುವ ಕಾರ್ಯ ಕಲಾಪಗಳನ್ನು ಬಿಟ್ಟು ಯಾವುದೇ ಇತರ ಕಾರ್ಯಕಲಾಪಗಳ ಬಗ್ಗೆ ಚರ್ಚಿಸತಕ್ಕದ್ದಲ್ಲ.  

೨೯.     ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶೇಷ ಸಾಮಾನ್ಯ ಸಭೆಯ ನೋಟೀಸು :

೧.   ವಾರ್ಷಿಕ ಸಾಮಾನ್ಯ ಸಭೆಯಾಗಿದ್ದಲ್ಲಿ ಸದಸ್ಯರಿಗೆ ೧೫ ದಿನಗಳ ನೋಟೀಸನ್ನು ಮತ್ತು ವಿಶೇಷ ಸಾಮಾನ್ಯ ಸಭೆಯಾಗಿದ್ದಲ್ಲಿ ೧೦ ದಿನಗಳ ಸ್ಪಷ್ಟ ನೋಟೀಸನ್ನು ಕೊಡತಕ್ಕದ್ದು. ೨.   ವಾರ್ಷಿಕ ಸಾಮಾನ್ಯ ಸಭೆ/ವಿಶೇಷ ಸಾಮಾನ್ಯ ಸಭೆಯ ನೋಟೀಸ್ಸನ್ನು ಸದಸ್ಯರುಗಳಿಗೆ ಸಂಘದ ಮತ್ತು ಸಂಘವು ಹೊಂದಿರುವ ಶಾಖೆಗಳ ಸೂಚನಾ ಫಲಕಗಳಲ್ಲಿ ಅಂಟಿಸುವುದು. ೩.   ವಾರ್ಷಿಕ ಸಾಮಾನ್ಯ ಸಭೆ/ವಿಶೇಷ ಸಾಮಾನ್ಯ ಸಭೆಯ ನೋಟೀಸ್‌ನ್ನು ಸದಸ್ಯರುಗಳಿಗೆ ಸಂಘವು ಸಗಟಾಗಿ (bulk posting) ಅಂಚೆ ಮೂಲಕ ಕಳುಹಿಸುವುದು ಅಥವಾ ೪.   ಇ-ಮೇಲ್ ಮತ್ತು ಎಸ್.ಎಂ.ಎಸ್.ಮೂಲಕ ಕಳುಹಿಸುವುದು ಅಥವಾ ೫.   ಸಾಮಾನ್ಯ ಅಂಚೆಯ ಮೂಲಕ ಕಳುಹಿಸುವುದು ಮತ್ತು ಹೆಚ್ಚು ಪ್ರಸಾರದಲ್ಲಿರುವ ೧ (ಒಂದು) ಕನ್ನಡ ದಿನಪತ್ರಿಕೆ ಮತ್ತು ೧(ಒಂದು) ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಪ್ರಕಟಿಸತಕ್ಕದ್ದು.  

೩೦.     ಸಾಮಾನ್ಯ ಸಭೆ ಮತ್ತು ವಿಶೇಷ ಸಾಮಾನ್ಯ ಸಭೆಗೆ ಕೋರಂ :

(i)  ಸಂಘದ ಪ್ರತಿಯೊಂದು ಸಾಮಾನ್ಯ ಸಭೆ/ವಿಶೇಷ ಸಾಮಾನ್ಯ ಸಭೆಗೆ ಸಂಘದ ಮತ ಚಲಾಯಿಸಲು ಅರ್ಹರಿರುವ ಸದಸ್ಯರ ಶೇಕಡ ೧೦ ರಷ್ಟು ಅಥವಾ ಒಂದು ಸಾವಿರ ಇವೆರಡರಲ್ಲಿ ಯಾವುದು ಕಡಿಮೆಯೊ ಆ ಸಂಖ್ಯೆಯು ಕೋರಂ ಆಗಿರತಕ್ಕದ್ದು. (ii) ಸಭೆಗೆ ಗೊತ್ತುಪಡಿಸಿದ ಸಮಯದಿಂದ ಒಂದು ಗಂಟೆಯೊಳಗೆ, ಕೋರಂ ಇಲ್ಲವಾದಲ್ಲಿ, ಸಭೆಯನ್ನು ಸದಸ್ಯರ ಕೋರಿಕೆಯ ಮೇರೆಗೆ ಕರೆಯಲಾಗಿದ್ದರೆ, ಅದನ್ನು ವಿಸರ್ಜನೆಗೊಳಿಸತಕ್ಕದ್ದು. ಯಾವುದೇ ಇತರೆ ಸಂದರ್ಭದಲ್ಲಿ ಆ ಸಭೆಯನ್ನು ೭ ದಿವಸಗಳಿಗೆ ಮೀರದ ಮತ್ತೊಂದು ದಿನಾಂಕಕ್ಕೆ ಮುಂದೂಡತಕ್ಕದ್ದು, ಹಾಗೆ ಮುಂದೂಡಲಾದ ಸಭೆಯ ದಿನಾಂಕ, ಸ್ಥಳ, ಮತ್ತು ಸಮಯವನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಮುಂದೂಡಿದ ಸಭೆಗೂ ಕೋರಂ ಅವಶ್ಯವಾಗಿ ಇರತಕ್ಕದ್ದು. ಮುಂದೂಡಿದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಸೆಪ್ಟೆಂಬರ್ ೨೫ನೇ ದಿನಾಂಕದೊಳಗೆ ನಡೆಸತಕ್ಕದ್ದು.  

೩೧.     ಸಾಮಾನ್ಯ ಸಭೆಯ ಅಧ್ಯಕ್ಷತೆ :

ಸಂಘದ ಅಧ್ಯಕ್ಷರು ಅಥವಾ ಅವರ ಗೈರುಹಾಜರಿಯಲ್ಲಿ, ಉಪಾಧ್ಯಕ್ಷರು ಅಥವಾ ಸಾಮಾನ್ಯ ಸಭೆಯಲ್ಲಿ ಚುನಾಯಿತರಾದ ಯಾರೇ ಸದಸ್ಯರು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.  

೩೨.     ಸಾಮಾನ್ಯ ಸಭೆಗಳಲ್ಲಿ ಮತ ನೀಡುವುದು :

ಹಾಜರಿರುವ ಪ್ರತಿಯೊಬ್ಬ ಸಂಘದ ಸದಸ್ಯರು ಒಂದೇ ಒಂದು ಮತವನ್ನು ಹೊಂದಿರತಕ್ಕದ್ದು. ಎಲ್ಲ ವಿಷಯಗಳನ್ನು ಹಾಜರಿರುವ ಮತ್ತು ಮತ ನೀಡಲು ಅರ್ಹರಾದ ಸದಸ್ಯರ ಬಹುಮತದ ಆಧಾರದ ಮೇಲೆ ತೀರ್ಮಾನಿಸತಕ್ಕದ್ದು. ಮತಗಳು ಸಮನಾಗಿದ್ದರೆ ಚುನಾವಣೆ ಹೊರತುಪಡಿಸಿ, ಸಭೆಯ ಅಧ್ಯಕ್ಷರು ನಿರ್ಣಾಯಕ ಮತವನ್ನು ಚಲಾಯಿಸಲು ಅವಕಾಶವಿರತಕ್ಕದ್ದು.  

೩೩.     ಸಾಮಾನ್ಯ ಸಭೆಯನ್ನು ಮುಂದೂಡುವುದು :

ಸಂಘದ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿನ ಎಲ್ಲಾ ಕಾರ್ಯಕಲಾಪಗಳನ್ನು ಸಾಮಾನ್ಯ ಸಭೆ ನಡೆದ ದಿನಾಂಕದಂದು, ಅನಿವಾರ್ಯವಾದ ಕಾರಣಕ್ಕಾಗಿ ನಡೆಸಲಿಕ್ಕಾಗದಿದ್ದರೆ, ಕಾರ್ಯಕಲಾಪಗಳನ್ನು ಪೂರ್ಣ ಗೊಳಿಸದಿರುವುದಕ್ಕೆ ಕಾರಣಗಳನ್ನು ದಾಖಲಿಸಿ ಮತ್ತು ಸಭೆಯನ್ನು ಆ ಸಭೆಯ ದಿನಾಂಕದಿಂದ ೭ ದಿನಗಳಿಗೆ ಮೀರದ ಯಾವುದೇ ಸೂಕ್ತವಾದ ದಿನಾಂಕಕ್ಕೆ ಮುಂದೂಡಿ, ಹಾಗೆ ಮುಂದೂಡಿದ ಸಭೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಸ್ಪಷ್ಟವಾಗಿ ನಮೂದಿಸಿ ಸಾಮಾನ್ಯ ಸಭೆಯಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸತಕ್ಕದ್ದು. ಅಂತಹ ಮುಂದೂಡಿದ ಸಭೆಯ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿಲ್ಲ. ಮುಂದೂಡಿದ ಸಭೆಯನ್ನು ಸೆಪ್ಟಂಬರ್ ೨೫ನೇ ತಾರೀಖಿನೊಳಗೆ ನಡೆಸತಕ್ಕದ್ದು.  

೩೪.      ನಿರ್ಣಯಗಳನ್ನು ರದ್ದುಗೊಳಿಸುವುದು :

ಸಂಘದ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ ತರುವಾಯ ಸ್ಪಷ್ಟ ೬ ತಿಂಗಳ ಅವಧಿ ಮುಗಿಯದ ಹೊರತು, ಸಂಘದ ಸಾಮಾನ್ಯ ಸಭೆಯಲ್ಲಿ, ಆ ಹಿಂದಿನ ಸಭೆಯ ನಿರ್ಣಯವನ್ನು ರದ್ದುಗೊಳಿಸುವ ಯಾವುದೇ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ.  

೩೫.     ಆಡಳಿತ ಮಂಡಳಿ ಚುನಾವಣೆ :

೧.   ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ಸಹಕಾರಿ ಚುನಾವಣಾ ಪ್ರಾಧಿಕಾರದಿಂದ ನಡೆಸಲ್ಪಡತಕ್ಕದ್ದು. ೨.   ಸಂಘವು ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗುವ ಸಮಯದಿಂದ ಕಡೇ ಪಕ್ಷ ೬ ತಿಂಗಳ ಮೊದಲೇ ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು. ೩.   ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ಬೇಕಾದ ಪುಸ್ತಕ ಮತ್ತು ದಾಖಲೆಗಳನ್ನು ಚುನಾವಣಾ ವೇಳಾ ಪಟ್ಟಿಯ ಪ್ರಕಾರ ಒದಗಿಸತಕ್ಕದ್ದು. ೪.   ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಂಘವು ಎಲ್ಲಾ ವಿಧವಾದ ಸಹಾಯ ಮತ್ತು ಸಹಕಾರವನ್ನು ನೀಡತಕ್ಕದ್ದು. ೫.   ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು ಪ್ರತಿ ೫ ವರ್ಷಗಳಿಗೊಮ್ಮೆ ನಡೆಸತಕ್ಕದ್ದು. #ಅನುಕ್ರಮಣಿಕೆ  

ಅಧ್ಯಾಯ-VIII. ಸಂಘದ ವ್ಯವಹಾರಗಳ ನಿರ್ವಹಣೆ


೩೬.     ಸಾಮಾನ್ಯ ಸಭೆಗಳ ಅಧಿಕಾರ :

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ನಿಯಮಗಳ ಮತ್ತು ಸಂಘದ ನೋಂದಾಯಿತ ಉಪವಿಧಿಗಳ ಉಪನಿಬಂಧಗಳಿಗೊಳಪಟ್ಟು ಸಂಘದ ಅಂತಿಮ ಅಧಿಕಾರವು ಈ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿರುವಂತಹ ರೀತಿಯಲ್ಲಿ ಕರೆಯಲಾದ ಸಂಘದ ಸಾಮಾನ್ಯ ಸಭೆಯಲ್ಲಿ ನಿಹಿತವಾಗಿರತಕ್ಕದ್ದು.  

೩೭.     ಆಡಳಿತ ಮಂಡಳಿ :

(i)  ಸಂಘದ ವ್ಯವಹಾರಗಳ ಆಡಳಿತ ನಿರ್ವಹಣೆಯು ಸಹಕಾರಕಾಯ್ದೆ, ನಿಯಮಗಳು ಮತ್ತು ಸಂಘದ ನೋಂದಾಯಿತ ಉಪವಿಧಿಗಳ ಉಪಬಂಧಗಳಿಗನುಸಾರ ರಚಿತವಾದ ಮಂಡಳಿಯಲ್ಲಿ ನಿಹಿತವಾಗಿರತಕ್ಕದ್ದು. ಆಡಳಿತ ಮಂಡಳಿಯಲ್ಲಿ ೧೫ (ಹದಿನೈದು) ಸದಸ್ಯರು ಇರತಕ್ಕದ್ದು. ಆ ಪೈಕಿ ೧ (ಒಂದು) ಸ್ಥಾನ ಪರಿಶಿಷ್ಟ ಜಾತಿ, ೦೧ (ಒಂದು) ಸ್ಥಾನ ಪರಿಶಿಷ್ಟ ಪಂಗಡದ ಸದಸ್ಯರಿಗೆ, ೨ (ಎರಡು) ಸ್ಥಾನಗಳು ಮಹಿಳೆಯರಿಗೆ ಮತ್ತು ಸರ್ಕಾರ ಪಂಚಾಯತ್ ರಾಜ್ಯ ಇಲಾಖೆಯಿಂದ ಎ ಮತ್ತು ಬಿ ಪ್ರವರ್ಗಗಳು ಎಂಬುದಾಗಿ ವರ್ಗೀಕರಿಸಿರುವ ಅಧಿಸೂಚಿಸಬಹುದಾದ ಅಂಥ ವರ್ಗ ಅಥವಾ ವರ್ಗಗಳ ೨ (ಎರಡು) ಸ್ಥಾನಗಳು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು. ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ ಎರಡು ಸ್ಥಾನಗಳಲ್ಲಿ ಮೊದಲನೇ ಅವಧಿಗೆ ಎರಡು ಸ್ಥಾನಗಳನ್ನು ಎ ವರ್ಗಕ್ಕೆ ಮೀಸಲಿಡತಕ್ಕದು, ಎರಡನೇ ಮತ್ತು ಮೂರನೇ ಅವಧಿಗೆ ಒಂದು ಸ್ಥಾನವನ್ನುಎ ವರ್ಗಕ್ಕೆ ಹಾಗೂ ಒಂದು ಸ್ಥಾನವನ್ನುಬಿ ವರ್ಗಕ್ಕೆ ಮೀಸಲಿಡತಕ್ಕದ್ದು, ನಾಲ್ಕನೇ ಅವಧಿಗೆ ಎರಡು ಸ್ಥಾನಗಳನ್ನು ಎ ವರ್ಗಕ್ಕೆ ಮೀಸಲಿಡತಕ್ಕದು (ii) ಆಡಳಿತ ಮಂಡಳಿಯು ಸಂಘದ ದ್ಯೇಯೋದ್ದೇಶಗಳಿಗನುಗುಣವಾಗಿ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಹಾಗೂ ವಿತ್ತೀಯ ಕ್ಷೇತ್ರಗಳಲ್ಲಿ ಅನುಭವವುಳ್ಳ ವೃತ್ತಿಪರ ಸದಸ್ಯರಾದ ಗರಿಷ್ಠ ಇಬ್ಬರನ್ನು ಆಡಳಿತ ಮಂಡಳಿಯ ಸದಸ್ಯರಾಗಿ ಸಹಕರಣ(ಕೋ-ಆಪ್ಟ್) ಮಾಡಿಕೊಳ್ಳಬಹುದು. ಈ ರೀತಿ ಕೋ-ಆಪ್ಟ್ ಮಾಡಿಕೊಂಡ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ ಮತ್ತು ಇವರು ಪದಾಧಿಕಾರಿಗಳಾಗಿ ಆಯ್ಕೆಯಾಗುವಂತಿಲ್ಲ. (iii)     ಆಡಳಿತ ಮಂಡಳಿಯು ಸಂಘದ ಉದ್ದೇಶಗಳಲ್ಲಿ ಪರಿಣಿತರಾದ ಕಸುಬುದಾರ ಸದಸ್ಯರಿದ್ದಲ್ಲಿ ಅಂತಹ ೩ (ಮೂರು) ವ್ಯಕ್ತಿಗಳನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಡಿಕೊಳ್ಳಬಹುದು. ಈ ರೀತಿ ನೇಮಕ ಮಾಡಿಕೊಂಡ ಸದಸ್ಯರನ್ನು ಸಭೆಯ ಕೋರಂಗೆ ಪರಿಗಣಿಸುವಂತಿಲ್ಲ. (iv) ಕಸುಬುದಾರ ಮತ್ತು ವೃತ್ತಿಪರ ನಿರ್ದೇಶಕರುಗಳನ್ನು ಸಭೆಯ ಕೋರಂಗೆ ಪರಿಗಣಿಸುವಂತಿಲ್ಲ. (v)  ಸಂಘದ ಮಂಡಳಿಯ ಅಧಿಕಾರವು ಚುನಾಯಿತರಾದ ದಿನಾಂಕದಿಂದ ಐದು ವರ್ಷಗಳ ಅವಧಿಯಾಗಿರತಕ್ಕದ್ದು ಮತ್ತು ಕಸುಬುದಾರ ಮತ್ತು ವೃತ್ತಿಪರ ಸದಸ್ಯರು ಯಾರಾದರೂ ಇದ್ದರೆ, ಅವರನ್ನು ಹೊರತುಪಡಿಸಿ ಮಂಡಳಿಯ ಅವಧಿ ಮುಗಿಯುವ ಮೊದಲೇ ಚುನಾವಣೆಯನ್ನು ನಡೆಸತಕ್ಕದ್ದು. ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯು ನಿರ್ಗಮಿಸುವ ಆಡಳಿತ ಮಂಡಳಿಯ ಅವಧಿಯು ಮುಗಿದ ಕೂಡಲೇ ಪ್ರಭಾರವನ್ನು ವಹಿಸಿಕೊಳ್ಳತಕ್ಕದ್ದು.  

೩೮.     ಆಡಳಿತ ಮಂಡಳಿಯ ಸದಸ್ಯರಾಗಲು ಅನರ್ಹತೆ:

೧.   ಯಾರೇ ಸದಸ್ಯರು ಸಂಘದೊಂದಿಗೆ ಮಾಡಿಕೊಳ್ಳಲಾದ ಯಾವುದೇ ಕರಾರಿನಲ್ಲಿ ಅಥವಾ ಸಂಘವು ಖಾಸಗಿಯಾಗಿ ಅಥವಾ ಹರಾಜಿನ ಮೂಲಕ ಮಾಡಲಾದ ಯಾವುದೇ ಮಾರಾಟ ಖರೀದಿಯಲ್ಲಿ ಅಥವಾ ಆ ಕರಾರು, ಮಾರಾಟಖರೀದಿ ಅಥವಾ ವ್ಯವಹಾರದಲ್ಲಿ ಹಣಕಾಸು ಹಿತಾಸಕ್ತಿಯನ್ನು ಒಳಗೊಂಡ ಸಂಘದ (ಹಣ ಹೂಡಿಕೆ ಮತ್ತು ಸಾಲ ತೆಗೆದುಕೊಳ್ಳುವುದಲ್ಲದೆ) ಯಾವುದೇ ಕರಾರು ಅಥವಾ ವ್ಯವಹಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವರು ಹಿತಾಸಕ್ತಿಯನ್ನು ಹೊಂದಿದ್ದರೆ; ೨.   ಸಂಘ ಅಥವಾ ಸಂಘದ ಸದಸ್ಯನಾಗಿರುವ ಒಂದು ಸಹಕಾರ ಸಂಘ ನಡೆಸುವಂತಹ ವ್ಯವಹಾರವನ್ನು ನಡೆಸುತ್ತಿದ್ದರೆ; ೩.   ಸಂಘದ ಪರವಾಗಿ ಲೀಗಲ್ ಪ್ರಾಕ್ಟೀಷನರ್ ಆಗಿ ನಿಯೋಜಿತರಾಗಿದ್ದರೆ ಅಥವಾ ಸಂಘದ ವಿರುದ್ದ ಲೀಗಲ್ ಪ್ರಾಕ್ಟೀಷನರ್ ಆಗಿ ಉದ್ಯೋಗವನ್ನು ಅಂಗೀಕರಿಸಿದ್ದರೆ; ೪.   ಸಂಘದ ಅಥವಾ ಹಣಕಾಸು ಒದಗಿಸುವ ಬ್ಯಾಂಕಿನ ವೇತನ ಪಡೆಯುವ ನೌಕರರಾಗಿದ್ದರೆ; ೫.   ಅಂತಹ ಸಂಘದ ವೇತನ ಪಡೆಯುವ ನೌಕರರ ಹತ್ತಿರದ ಸಂಬಂಧಿಯಾಗಿದ್ದರೆ; ೬.   ಸಂಘದ ನೋಂದಾಯಿತ ಉಪವಿಧಿಯ ಮೇರೆಗೆ ಯಾವುದೇ ಅನರ್ಹತೆಗೆ ಗುರಿಯಾಗಿದ್ದರೆ; ಮಂಡಳಿಯ ಸದಸ್ಯರಾಗಲು ಅರ್ಹರಾಗತಕ್ಕದ್ದಲ್ಲ; ೭.   ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಕಲಂ ೨೯-ಸಿ ಅಡಿಯಲ್ಲಿ ಅನರ್ಹಗೊಂಡ ಸದಸ್ಯ.

೩೯.      ಅ) ಪದಾಧಿಕಾರಿಗಳ ಚುನಾವಣೆ :

(i)  ಸಂಘದ ಆಡಳಿತ ಮಂಡಳಿಯ ಸದಸ್ಯರ ಪೈಕಿ ಒಬ್ಬರುಅಧ್ಯಕ್ಷರನ್ನು ಮತ್ತು ಒಬ್ಬರು ಉಪಾಧ್ಯಕ್ಷರನ್ನು ೫ (ಐದು) ವರ್ಷಕ್ಕೊಮ್ಮೆ ಆಯ್ಕೆ ಮಾಡತಕ್ಕದ್ದು. ಇವರ ಅವಧಿಯು ಆಡಳಿತ ಮಂಡಳಿಯ ಅವಧಿಯು ಅಂತಿಮವಾಗುವವರೆವಿಗೂ ಇರತಕ್ಕದ್ದು. (ii) ಸಹಕಾರಿ ಚುನಾವಣಾ ಪ್ರಾಧಿಕಾರವು ಪದಾಧಿಕಾರಿಗಳ ಚುನಾವಣೆಯನ್ನು ಕಾಯಿದೆ ಮತ್ತು ನಿಯಮಗಳನ್ವಯ ನಡೆಸತಕ್ಕದ್ದು. (iii)     ಆಡಳಿತ ಮಂಡಳಿಯು ಪ್ರಾಧಿಕಾರಕ್ಕೆ ಬಂದ ದಿನಾಂಕದಿಂದ ೧೫ ದಿನಗಳ ಒಳಗಾಗಿ ಪದಾಧಿಕಾರಿಗಳ ಚುನಾವಣೆಯನ್ನು ನಡೆಸತಕ್ಕದ್ದು. (iv) ಪದಾಧಿಕಾರಿಗಳ ಚುನಾವಣೆಯು ಗೌಪ್ಯ ಮತದಾನದಿಂದ ನಡೆಸತಕ್ಕದ್ದು. ಆ)  ಪದಾಧಿಕಾರಿಗಳು ವಿರುದ್ದ ಅವಿಶ್ವಾಸ ನಿರ್ಣಯ: ಅ) ಸಂಘದ ಪದಾಧಿಕಾರಿಯು ಚುನಾಯಿತನಾಗಿ ಎರಡು ವರ್ಷಗಳ ನಂತರದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸತಕ್ಕದ್ದು. ಆ) ಪದಾಧಿಕಾರಿಯ ವಿರುದ್ಧ ಮಂಡಿಸುವ ಅವಿಶ್ವಾಸ ನಿರ್ಣಯದ ನೋಟಿಸ್‌ಗೆ ಚುನಾಯಿತ ನಿರ್ದೇಶಕರ ಪೈಕಿ ೧/೩ ರಷ್ಟು ಚುನಾಯಿತ ನಿರ್ದೇಶಕರ ಸಹಿಯೊಂದಿಗೆ ಸಂಘದ ಕಾರ್ಯದರ್ಶಿಗೆ ಸಲ್ಲಿಸಬೇಕು. ಸದರಿ ನೋಟಿಸ್‌ನ್ನು ಏಳು ದಿನಗಳೊಳಗಾಗಿ ಸಂಘದ ಕಾರ್ಯವ್ಯಾಫ್ತಿ ನಿಬಂಧಕರಿಗೆ ಸಲ್ಲಿಸತಕ್ಕದ್ದು. ಇ) ಸಂಘದ ಕಾರ್ಯವ್ಯಾಪ್ತಿಯ ನಿಬಂದಕರು ಸಂಘದ ಪದಾಧಿಕಾರಿಗಳ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ದಾಖಲಿಸುವ ಸಲುವಾಗಿ ನಡೆಯುವ ಆಡಳಿತ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಲು ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ವೃಂದಕ್ಕಿಂತ ಕಡಿಮೆ ದರ್ಜೆ ಇಲ್ಲದ ಅಧಿಕಾರಿಯನ್ನು ಏಳು ದಿನಗಳೊಳಗಾಗಿ ನೇಮಿಸತಕ್ಕದ್ದು. ಈ) ಕಾರ್ಯವ್ಯಾಪ್ತಿ ನಿಬಂಧಕರಿಂದ ನಿಯೋಜನೆಗೊಂಡ ಅಧಿಕಾರಿಯು ಅವಿಶ್ವಾಸ ನಿರ್ಣಯ ಗೊತ್ತುವಳಿ ಸಂಬಂಧ ನಡೆಯುವ ಆಡಳಿತ ಮಂಡಳಿ ಸಭೆ ದಿನಾಂಕ, ಸ್ಥಳ, ಸಮಯ ಹಾಗೂ ಸಭೆಯ ಕಾರ್ಯ ಸೂಚಿ ಒಳಗೊಂಡ ನೋಟಿಸ್‌ನ್ನು ಸಭೆ ನಡೆಯುವ ೧೫ (ಹದಿನೈದು) ದಿನಗಳ ಮೊದಲೆ ಸಂಘದ ಎಲ್ಲಾ ಚುನಾಯಿತ ನಿರ್ದೇಶಕರಿಗೆ ನೋಂದಾಯಿತ ಅಂಚೆಯ ಮೂಲಕ ಜಾರಿ ಮಾಡತಕ್ಕದ್ದು. ಉ)ಸದರಿ ಸಭೆಗೆ ೦೮(ಎಂಟು) ಜನ ನಿರ್ದೇಶಕರ ಕೋರಂ ಇರತಕ್ಕದ್ದು, ಒಂದು ವೇಳೆ ನಿಗದಿಪಡಿಸಿದ ಸಮಯದ ಒಂದು ಗಂಟೆ ಒಳಗಾಗಿ ಕೋರಂ ಇರದಿದ್ದರೆ ಸದರಿ ಸಭೆ ರದ್ದಾಗುತ್ತದೆ ಹಾಗೂ ಅವಿಶ್ವಾಸ ನಿರ್ಣಯದ ಮಂಡನೆಗಾಗಿ ನೀಡಿದ್ದ ನೋಟಿಸ್ ಸಹ ರದ್ದಾಗುತ್ತದೆ. ಊ)ಸಭೆಯು ಪ್ರಾರಂಭವಾದ ನಂತರ ನಿಯೋಜನೆಗೊಂಡ ಅಧಿಕಾರಿಯು ಸಂಘದ ಪದಾಧಿಕಾರಿಯ ವಿರುದ್ಧ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯದ ಗೊತ್ತುವಳಿಗೆ ಪರವಾಗಿರುವ ಅಥವಾ ವಿರುದ್ಧವಾಗಿರುವ ಬಗ್ಗೆ ರಹಸ್ಯ ಮತದಾನ ನಡೆಸತಕ್ಕದ್ದು. ಒಂದು ವೇಳೆ ೨/೩ ರಷ್ಟು ಚುನಾಯಿತ ನಿರ್ದೇಶಕರು ಸಂಘದ ಪದಾಧಿಕಾರಿಯ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಗೊತ್ತುವಳಿಯ ಪರವಾಗಿ ಮತ ಚಲಾಯಿಸಿದರೆ ಸದರಿ ಪದಾಧಿಕಾರಿಯ ಸ್ಥಾನವು ಖಾಲಿ ಬಿದ್ದಿದೆ ಎಂದು ತಿಳಿಯತಕ್ಕದ್ದು ಹಾಗೂ ಸದರಿ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ಸಂಘದ ಕಾರ್ಯದರ್ಶಿಯು ಕ್ರಮಕೈಗೊಳ್ಳತಕ್ಕದ್ದು. ಋ)ಒಂದು ವೇಳೆ ಪದಾಧಿಕಾರಿಯ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾದರೆ ಮುಂದಿನ ೦೧ (ಒಂದು) ವರ್ಷದ ಅವಧಿಗೆ ಅವಿಶ್ವಾಸ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ.

೪೦.     ಆಡಳಿತ ಮಂಡಳಿ ಸದಸ್ಯರ ಸಾಂದರ್ಭಿಕ ಖಾಲಿ ಸ್ಥಾನವನ್ನು ಭರ್ತಿ ಮಾಡುವುದು

ಆಡಳಿತ ಮಂಡಳಿಯ ಯಾವುದೇ ಸದಸ್ಯರ ರಾಜೀನಾಮೆ, ವಜಾ ಅಥವಾ ಮರಣದಂತಹ ಕಾರಣದಿಂದಾಗಿ ತೆರವಾಗುವ ನಿರ್ದೇಶಕರ ಸ್ಥಾನಗಳನ್ನು, ಒಂದೊಮ್ಮೆ ಆಡಳಿತ ಮಂಡಳಿಯ ಅಧಿಕಾರಾವಧಿಯ ಎರಡುವರೆ ವರ್ಷಕ್ಕಿಂತ ಹೆಚ್ಚು ಅವಧಿಯು ಬಾಕಿಯಿದ್ದರೆ ಆ ಸ್ಥಾನಗಳನ್ನು ಸಹಕಾರಿ ಚುನಾವಣಾ ಆಯೋಗವು ಚುನಾವಣೆಯ ಮುಖಾಂತರ ಚುನಾಯಿಸತಕ್ಕದ್ದು. ಆಡಳಿತ ಮಂಡಳಿಯ ಅಧಿಕಾರಾವಧಿಯಎರಡುವರೆ ವರ್ಷಕ್ಕಿಂತ ಕಡಿಮೆ ಅವಧಿಯು ಬಾಕಿಯಿದ್ದಲ್ಲಿ ಆ ಸ್ಥಾನಗಳನ್ನು ಆಡಳಿತ ಮಂಡಳಿಯು ಅದೇ ವರ್ಗಕ್ಕೆ ಸೇರಿದ ಸದಸ್ಯರನ್ನು ಸಹಕರಣ (Co-opt) ದಿಂದ ಭರ್ತಿ ಮಾಡತಕ್ಕದ್ದು.

೪೧.     ಆಡಳಿತ ಮಂಡಳಿಯ ಕರ್ತವ್ಯಗಳು ಮತ್ತು ಜವಾಬ್ಧಾರಿಗಳು :

ಸಂಘದ ವ್ಯವಹಾರಗಳನ್ನು ನಿಯಮಾನುಸಾರ ನಿರ್ವಹಿಸಲು ಆಡಳಿತ ಮಂಡಳಿಯು ಈ ಕೆಳಕಂಡ ಕರ್ತವ್ಯಗಳನ್ನು ಮತ್ತು ಜವಾಬ್ಧಾರಿಗಳನ್ನು ಹೊಂದಿರತಕ್ಕದ್ದು:- ೧.   ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದು ೨.   ಷೇರು ಕೋರಿಕೆ ಅರ್ಜಿಯನ್ನು ಪರಿಗಣಿಸುವುದು ೩.   ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮತ್ತು ನಿಧಿಗಳನ್ನು ಹೂಡಿಕೆಮಾಡುವುದು ೪.   ಎಲ್ಲಾ ವರ್ಗದ ಸದಸ್ಯರಿಗೆ ಕೈಸಾಲ ಮತ್ತುಇತರೆ ಎಲ್ಲಾ ವಿಧವಾದ ಸಾಲಗಳನ್ನು ನೀಡುವುದು ಮತ್ತು ಸಂಧರ್ಭಕ್ಕೆ ತಕ್ಕಂತೆ ಅವುಗಳನ್ನು ಇತ್ಯರ್ಥಗೊಳಿಸುವುದು. ೫.   ಸಾಲದ ಅರ್ಜಿಗಳನ್ನು ಪರಿಶೀಲಿಸುವುದು ಮತ್ತು ಉ ನಿಯಮಗಳ ಮತ್ತು ಪೂರಕ ನಿಯಮಗಳ ಉಪನಿಬಂಧಗಳಿಗನುಸಾರ ಸಾಲಗಳನ್ನು ಮಂಜೂರು ಮಾಡುವುದು. ಸದಸ್ಯರ ಸಾಲ ವಸೂಲಿಯಾಗಿರುವ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಸುಸ್ತಿದಾರರಾದ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳುವುದು. ೬.   ಸೇವಾ ನಿಯಮಗಳ ರೀತ್ಯಾ ನೇಮಕವಾದ ಸಂಘದ ವೇತನ ಪಡೆಯುವ ನೌಕರರಿಂದ ಭದ್ರತೆಗಳನ್ನು ಪಡೆಯುವುದು. ೭.   ಪದಾಧಿಕಾರಿಗಳನ್ನು ಆಯ್ಕೆ ಮಾಡಲುಕ್ರಮ ಕೈಗೊಳ್ಳುವುದು. ೮.  ಸಂಘದ ಉದ್ದೇಶಗಳನ್ನು ಈಡೇರಿಸುವಲ್ಲಿ ಸ್ಥಿರ ಮತ್ತು ಚರಾಸ್ತಿಗಳನ್ನು ಖರೀದಿಸಲು ಮತ್ತು ವಿಲೇವಾರಿ ಮಾಡುವುದು. ೯.   ಸಂಘದ ವೃಂದಬಲವನ್ನು ನಿಗದಿಪಡಿಸುವುದು ಹಾಗೂ ಸಿಬ್ಬಂದಿಗಳ ವಿದ್ಯಾರ್ಹತೆ, ವೇತನ ಶ್ರೇಣಿ ಮತ್ತುಇತರ ಭತ್ಯೆಗಳನ್ನು ಆಯಾ ಸಿಬ್ಬಂದಿಗಳಿಗೆ ಅನ್ವಯಿಸುವಂತೆ ನಿಗದಿಪಡಿಸುವುದು. ೧೦. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ೨೯ಜಿ ಅನ್ವಯ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಮತ್ತು ಇತರೆ ಸಿಬ್ಬಂದಿಗಳನ್ನು ನೇಮಕಮಾಡುವುದು. ೧೧. ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ನಡತೆ ಮತ್ತು ಶಿಸ್ತು ಕ್ರಮದ ಬಗ್ಗೆ ಒಳ ನಿಯಮಗಳನ್ನು ರಚಿಸುವುದು, ಆರೋಪಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸುವುದು, ಅವಶ್ಯವಿದ್ದಲ್ಲಿ ವಿಚಾರಣೆ ನಡೆಸಿ ರುಜುವಾತಾದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಅದಕ್ಕನುಗುಣವಾಗಿ ದಂಡನೆಗಳನ್ನು ವಿಧಿಸುವುದು. ೧೨.  ಸಂಘವು ತನ್ನ ಉದ್ದೇಶಗಳನ್ನು ಈಡೇರಿಸಲು ನಿರ್ದಿಷ್ಟವಾದಗುರಿಯನ್ನು ನಿಗದಿಪಡಿಸುವುದು. ೧೩. ವಾರ್ಷಿಕ ಆಯ-ವ್ಯಯಕ್ಕನುಗುಣವಾಗಿ ಸಂಘದ ಖರ್ಚುಗಳನ್ನು ಅನುಮೋದಿಸುವುದು. ೧೪. ಕಾಲಕಾಲಕ್ಕೆ ಸಂಘದ ಲೆಕ್ಕ-ಪುಸ್ತಕಗಳನ್ನು ನಿಗದಿತ ಸಮಯದೊಳಗೆ ಲೆಕ್ಕ ಪರಿಶೋಧನೆ ಮಾಡಿಸುವುದು. ೧೫. ಲೆಕ್ಕಪರಿಶೋಧನೆಯಲ್ಲಿ ಯಾವುದಾದರೂ ನೂನ್ಯತೆಗಳು ಕಂಡುಬಂದಲ್ಲಿ ಅವುಗಳನ್ನು ಸರಿ ಪಡಿಸಿಕೊಳ್ಳುವುದು ಮತ್ತು ಅನುಪಾಲನಾ ವರದಿಯನ್ನು ಸಲ್ಲಿಸುವುದು ಹಾಗು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸುವುದು. ೧೬. ಯಾವುದಾದರೂ ವಿಚಾರಣೆ ಅಥವಾ ಪರಿವೀಕ್ಷಣಾ ವರದಿಗಳಿದ್ದಲ್ಲಿ ಹಾಗು ಸದರಿ ವರದಿಗಳಲ್ಲಿ ಯಾವುದಾದರೂ ನೂನ್ಯತೆಗಳು ಕಂಡು ಬಂದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವುದು ಮತ್ತು ಅನುಪಾಲನಾ ವರದಿಯನ್ನು ಸಲ್ಲಿಸುವುದು ಹಾಗು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸುವುದು. ೧೭.  ವಾರ್ಷಿಕ ವರದಿಯನ್ನು, ವಾರ್ಷಿಕ ಹಣಕಾಸಿನ ತಃಖ್ತೆಗಳನ್ನು, ವಾರ್ಷಿಕ ಯೋಜನೆ ಮತ್ತು ಆಯ-ವ್ಯಯದ ಪಟ್ಟಿಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆಗಾಗಿ ಮಂಡಿಸುವುದು. ೧೮. ಕಾನೂನು ವ್ಯವಹರಣೆಗಳನ್ನು ಹೂಡುವುದು, ಪ್ರತಿ ರಕ್ಷಿಸಿಕೊಳ್ಳುವುದು ಅಥವಾ ರಾಜೀ ಮಾಡಿಕೊಳ್ಳುವುದು. ಯಾವುದೇ ವ್ಯಕ್ತಿಯು ಹಣದುರುಪಯೋಗ ಅಥವಾ ಸಂಘಕ್ಕೆ ನಷ್ಟ ಉಂಟು ಮಾಡಿದ ಸಿವಿಲ್ ಮತ್ತು ಕ್ರಿಮಿನಲ್ ಆರೋಪಗಳಿಗೆ ಹೊಣೆಗಾರನಾಗಿದ್ದಲ್ಲಿಅವರ ವಿರುದ್ಧ ಸಿವಿಲ್, ಕ್ರಿಮಿನಲ್ ಮತ್ತು ಶಿಸ್ತುಕ್ರಮಗಳನ್ನು ಜರುಗಿಸುವುದು. ೧೯.  ವಾರ್ಷಿಕ ಸರ್ವಸದಸ್ಯರ ಸಭೆಯನ್ನು ನಿಗದಿತ ಅವಧಿಯೊಳಗೆ ಕರೆಯುವುದು ಮತ್ತು ಸದಸ್ಯರ ಕೋರಿಕೆಯ ಮೇರೆಗೆ ಅಥವಾ ಅವಶ್ಯವಿದ್ದಲ್ಲಿ ವಿಶೇಷ ಸರ್ವಸದಸ್ಯರ ಸಭೆಯನ್ನು ಕರೆಯುವುದು. ೨೦. ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ನಿಬಂಧನೆಗಳನ್ನು ರೂಪಿಸುವುದು. ೨೧. ಕಾನೂನು ಮತ್ತು ನಿಯಮಗಳನ್ವಯ ಅಥವಾ ಸರ್ವಸದಸ್ಯರ ಸಭೆಯ ನಿರ್ಣಯದನ್ವಯ ಇನ್ನಿತರೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು. ೨೨.  ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಅರ್ಜಿಯನ್ನು ಪರ್ಯಾಲೋಚಿಸುವುದು ೨೩. ಷೇರುಗಳ ವರ್ಗಾವಣೆಗಾಗಿ ಅಥವಾ ಷೇರುಗಳ ಮರು ಪಾವತಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶಿಲಿಸುವುದು. ೨೪. ಸಂಘಕ್ಕೆ ಅಡಮಾನ ಮಾಡಿರುವ ಕಟ್ಟಡದ ಪರಿಶೀಲನೆಗೆ ಏರ್ಪಾಟು ಮಾಡುವುದು. ೨೫. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ, ೧೯೫೯ ರ ಕಲಂ ೨೭-ಬಿ ಯಲ್ಲಿನಅವಕಾಶದಂತೆ ಸಹಕಾರಿ ವರ್ಷವು ಅಂತ್ಯವಾದ ೬ (ಆರು) ತಿಂಗಳ ಒಳಗಾಗಿ ಕೆಳಕಂಡ ತಃಖ್ತೆಗಳನ್ನು/ದಾಖಲೆಗಳನ್ನು ನಿಬಂಧಕರಿಗೆ ಸಲ್ಲಿಸತಕ್ಕದ್ದು: (i)  ಸಂಘದ ಕಾರ್ಯಚಟುವಟಿಕೆಗಳ ಬಗೆಗಿನ ವಾರ್ಷಿಕ ವರದಿ; (ii) ಸಂಘದ ಲೆಕ್ಕ-ಪುಸ್ತಕಗಳ ಲೆಕ್ಕಪರಿಶೋಧನಾ ತಃಖ್ತೆಗಳು; (iii)     ಸರ್ವಸದಸ್ಯರ ಸಭೆಯಲ್ಲಿ ಅನುಮೋದಿಸಿದಂತೆ ಲಾಭಾಂಶವನ್ನು ವಿಲೇವಾರಿ ಮಾಡುವುದು; (iv) ಸಂಘದ ಸರ್ವಸದಸ್ಯರ ಸಭೆಯಲ್ಲಿ ಅನುಮೋದಿಸಿದ ಬೈಲಾದ ತಿದ್ದುಪಡಿಗಳ ಪಟ್ಟಿ; (v)  ಸರ್ವಸದಸ್ಯರ ಸಭೆಯನ್ನು ನಡೆಸುವ ದಿನಾಂಕ ಮತ್ತು ಆಡಳಿತ ಮಂಡಳಿಯ ಅವಧಿ ಮುಗಿದು ಚುನಾವಣೆ ನಡೆಸಬೇಕಾಗಿರುವ ಬಗ್ಗೆ; (vi) ಹಣ ದುರುಪಯೋಗ ಅಥವಾ ಸಂಘದ ನಿಧಿಗಳನ್ನು ಮೋಸದಿಂದ ದುರ್ವಿನಿಯೋಗ ಆಗಿದ್ದಲ್ಲಿ ಹಾಗು ಅಂತಹ ವ್ಯಕ್ತಿಗಳ ವಿರುದ್ಧ ತೆಗೆದುಕೊಂಡ ಸಿವಿಲ್, ಕ್ರಿಮಿನಲ್ ಮತ್ತು ಶಿಸ್ತುಕ್ರಮ: ಮತ್ತು (vii)     ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯನ್ವಯ ನಿಬಂಧಕರಿಗೆ ಬೇಕಾದ ಇನ್ನಿತರೇ ಮಾಹಿತಿಗಳು;

 ೪೨.    ಆಡಳಿತ ಮಂಡಳಿಯ ಸಭೆಗಳು :

(೧).    ಆಡಳಿತ ಮಂಡಳಿಯು ಸಂಘದ ವ್ಯವಹಾರಗಳನ್ನು ನಿರ್ವಹಿಸಲು ಕೊನೆ ಪಕ್ಷ ತಿಂಗಳಿಗೊಮ್ಮೆಯಾದರೂ ಸಭೆ ಸೇರತಕ್ಕದ್ದು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು, ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಸಭೆಯನ್ನು ಸಮಾವೇಶಗೊಳಿಸತಕ್ಕದ್ದು. ಸದಸ್ಯರಿಗೆ ಸಭೆಯ ಬಗ್ಗೆ ಕೊನೆ ಪಕ್ಷ ೭ ದಿನಗಳ ನೋಟೀಸನ್ನು ಸಭೆಯ ಕಾರ್ಯಸೂಚಿಯೊಂದಿಗೆ ನೀಡತಕ್ಕದ್ದು. ಅಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಅಧ್ಯಕ್ಷರ ಗೈರು ಹಾಜರಿಯಲ್ಲಿ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಸಾಮಾನ್ಯ ಬಹುಮತದ ಮೇಲೆ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳತಕ್ಕದ್ದು. ಸಮಾನ ಮತಗಳು ಇದ್ದರೆ ಅಧ್ಯಕ್ಷರು ನಿರ್ಣಾಯಕ ಮತವನ್ನು ಚಲಾಯಿಸತಕ್ಕದ್ದು. (೨).      ಸಭೆಯನ್ನು ಸಮಾವೇಶಗೊಳಿಸಲು ಸಾಕಷ್ಟು ಸಮಯ ಇಲ್ಲದಿರುವ ಯಾವುದೇ ತುರ್ತು ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿರುವ ವಿಷಯವನ್ನು ನಿರ್ದೇಶಕರಿಗೆ ಸುತ್ತೋಲೆ ಮೂಲಕ ತಿಳಿಸಿ, ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. (೩).      ಹಾಗೆ ಸುತ್ತೋಲೆ ಮೂಲಕ ತೆಗೆದುಕೊಂಡ ತೀರ್ಮಾನವನ್ನು ಸ್ಥಿರೀಕರಣಕ್ಕಾಗಿ ಮುಂದಿನ ಮಂಡಳಿಯ ಸಭೆಯ ಮುಂದೆ ಮಂಡಿಸತಕ್ಕದ್ದು. ಸುತ್ತೋಲೆ ಪರಿಕ್ರಮದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿದರೆ, ಆ ವಿಷಯವನ್ನು ಸುತ್ತೋಲೆ ಕ್ರಮದ ಮೂಲಕ ತೀರ್ಮಾನಿಸತಕ್ಕದ್ದಲ್ಲ. ಅದನ್ನು ಆಡಳಿತ ಮಂಡಳಿಯ ಸಭೆಯ ಮುಂದೆ ಮಂಡಿಸಿ ತೀರ್ಮಾನ ಕೈಗೊಳ್ಳತಕ್ಕದ್ದು. (೪).      ಆಡಳಿತ ಮಂಡಳಿಯ ಸಭೆಗಾಗಿ ೦೮ (ಎಂಟು) ಜನರ ಕೋರಂ ಇರತಕ್ಕದ್ದು ಮತ್ತು ಸಭೆಗೆ ನಿಗದಿಪಡಿಸಿದ ಸಮಯದ ಒಂದು ಗಂಟೆಯೊಳಗೆ ಕೋರಂ ಇರದಿದ್ದರೆ ಸಭೆಯನ್ನು ಮುಂದೂಡತಕ್ಕದ್ದು. ಈ ರೀತಿ ಮುಂದೂಡಿದ ಸಭೆಯನ್ನು ೭ ದಿನಗಳೊಳಗಾಗಿ ನಡೆಸತಕ್ಕದ್ದು. ಮುಂದೂಡಿದ ಸಭೆಗೆ ನಿಗಧಿಪಡಿಸಿದ ಕೋರಂಇರತಕ್ಕದ್ದು. ಕಸುಬುದಾರ ಮತ್ತು ವೃತ್ತಿಪರ ನಿರ್ದೇಶಕರುಗಳನ್ನು ಸಭೆಯ ಕೋರಂಗೆ ಪರಿಗಣಿಸುವಂತಿಲ್ಲ. ಈ ರೀತಿ ಮುಂದೂಡಿದ ಸಭೆಗೆ ಗೈರು ಹಾಜರಾದ ಸದಸ್ಯರಿಗೆ ಮಾತ್ರ ನೋಟೀಸ್ ಕಳುಹಿಸತಕ್ಕದ್ದು.  

೪೩.     ಆಡಳಿತ ಮಂಡಳಿಯ ಸದಸ್ಯರುಗಳ ಹಾಜರಾತಿ :

ಆಡಳಿತ ಮಂಡಳಿಯ ಸದಸ್ಯರು ಅನುಮತಿ ಪಡೆಯದೆ ಸತತವಾಗಿ ಆಡಳಿತ ಮಂಡಳಿಯ ಮೂರು ಸಭೆಗಳಿಗೆ ಗೈರು ಹಾಜರಾದರೆ, ಅವರನ್ನು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ ೨೯-ಸಿ ರನ್ವಯ ಕ್ರಮಕೈಗೊಳ್ಳಲು ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

೪೪.     ನಡವಳಿಗಳ ಪುಸ್ತಕ :

ಸಂಘದ ನಡೆವಳಿಗಳ ಪುಸ್ತಕವನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ನಿರ್ವಹಿಸತಕ್ಕದ್ದು ಮತ್ತು ಅದರಲ್ಲಿ ಹಾಜರಿರುವ ಸದಸ್ಯರುಗಳ ಹೆಸರುಗಳನ್ನು ಮತ್ತು ಮಾಸಿಕ ಲೆಕ್ಕಪತ್ರಗಳ ಅನುಮೋದನೆ ಸೇರಿದಂತೆ ಪ್ರತಿಯೊಂದು ಸಭೆಯ ನಡೆವಳಿಗಳನ್ನು ದಾಖಲು ಮಾಡತಕ್ಕದ್ದು ಮತ್ತು ಅದಕ್ಕೆ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಭೆಯಲ್ಲಿ ಹಾಜರಿರುವ ಆಡಳಿತ ಮಂಡಳಿಯ ಸದಸ್ಯರು ಸಹಿ ಮಾಡತಕ್ಕದ್ದು.  

೪೫.     ಆಡಳಿತ ಮಂಡಳಿಯ ಸದಸ್ಯರುಗಳಿಗೆ ಭತ್ಯೆಗಳು :

ಆಡಳಿತ ಮಂಡಳಿಯ ಮತ್ತು ಉಪ ಸಮಿತಿ ಸದಸ್ಯರುಗಳ ಸೇವೆ ಉಚಿತವಾಗಿರತಕ್ಕದ್ದು. ಕರ್ನಾಟಕ ಸಹಕಾರ ಸಂಘಗಳ ನಿಯಮ, ೧೯೬೦ ರಲ್ಲಿ ನಿಗದಿ ಪಡಿಸಿದ ಭತ್ಯೆಗಳಿಗಿಂತ ಹೆಚ್ಚಿನ ಭತ್ಯೆಯನ್ನು ಪಡೆಯುವಂತಿಲ್ಲ.  

೪೬.     ಅಧ್ಯಕ್ಷರು :

ಸಂಘದ ಅಧ್ಯಕ್ಷರು ಆಡಳಿತ ಮಂಡಳಿಯ ಎಲ್ಲಾ ಸಭೆಗಳ ಅಧ್ಯಕ್ಷತೆ ವಹಿಸತಕ್ಕದ್ದು. ಪರಂತು, ಆಡಳಿತ ಮಂಡಳಿಯ ಯಾವುದೇ ಸಭೆಯಲ್ಲಿ ಅವರು ಗೈರು ಹಾಜರಾದರೆ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಬಹುದು. ಅವರು ಕಾರ್ಯಕಲಾಪಗಳನ್ನು ನಡೆಸಿ ನಡೆವಳಿ ಪುಸ್ತಕದಲ್ಲಿ ನಡೆವಳಿಯನ್ನು ದಾಖಲು ಮಾಡತಕ್ಕದ್ದು.  

೪೭.     ಉಪಾಧ್ಯಕ್ಷರು :

ಅಧ್ಯಕ್ಷರು ಗೈರುಹಾಜರಾದಲ್ಲಿ ಉಪಾಧ್ಯಕ್ಷರು ಅವರ ಕಾರ್ಯಗಳನ್ನು ನಿರ್ವಹಿಸತಕ್ಕದ್ದು.  

೪೮.     ಮುಖ್ಯ ಕಾರ್ಯನಿರ್ವಹಣಾಧಿಕಾರಿ :

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಕಲಂ ೨೯ಜಿ ರನ್ವಯ ಸಂಘದ ಆಡಳಿತ ಮಂಡಳಿಯಿಂದ ಪೂರ್ಣ ಕಾಲಿಕ ನೇಮಕಗೊಂಡ ಕಾರ್ಯದರ್ಶಿಯು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾಗಿರತಕ್ಕದ್ದು.  

೪೯.     ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಕರ್ತವ್ಯಗಳು :

ಅ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಂಘದ ಮುಖ್ಯ ಆಡಳಿತಾಧಿಕಾರಿಯಾಗಿರತಕ್ಕದ್ದು ಮತ್ತು ಆಡಳಿತ ಮಂಡಳಿಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ಇತರ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು:- (i)      ಸಂಘದ ಎಲ್ಲ ನೌಕರರ ಮೇಲಿನ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಜವಾಬ್ಧಾರರಾಗಿರತಕ್ಕದ್ದು ಮತ್ತು ಕರ್ತವ್ಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಗತ್ಯ ಶಿಸ್ತಿನ ಕ್ರಮ ಜರುಗಿಸುವುದು ಸಂಘದ ದಿನನಿತ್ಯದ ಆಡಳಿತ ನಿರ್ವಹಣೆ ಮತ್ತು ವ್ಯವಹಾರಗಳಿಗೆ ಜವಾಬ್ಧಾರರಾಗಿರತಕ್ಕದ್ದು. (ii)   ಸಂಘದ ಅಧಿಕೃತ ಮತ್ತು ಸಾಮಾನ್ಯ ವ್ಯವಹಾರಗಳನ್ನು ನಡೆಸತಕ್ಕದ್ದು. (iii) ನೋಂದಾಯಿತ ಉಪವಿಧಿಗಳ ಉಪಬಂಧಗಳಿಗನುಸಾರವಾಗಿ ಬ್ಯಾಂಕು, ಲೆಕ್ಕಖಾತೆಗಳನ್ನು ನಿರ್ವಹಿಸಲು ಜವಾಬ್ಧಾರರಾಗಿರತಕ್ಕದ್ದು ಮತ್ತು ನಗದಿನ ಸುರಕ್ಷತಾ ಅಭಿರಕ್ಷಾ ವಿಧಾನಗಳನ್ನು ಮಾಡತಕ್ಕದ್ದು. (iv)   ಸಂಘದಲ್ಲಿ ಸ್ವೀಕೃತವಾದ ನಗದು ಹಣವನ್ನು ಪ್ರತಿದಿನದ ವಹಿವಾಟುಗಳಿಗಾಗಿ ನಗದು ಆಖೈರು ಶಿಲ್ಕು ಪ್ರತಿದಿನ ಗರಿಷ್ಠ ರೂ.೧,೦೦,೦೦೦/-(ಒಂದು ಲಕ್ಷಗಳ ವರೆಗೆಮಾತ್ರ) ಗಳವರೆಗೆ ಮಾತ್ರ ಉಳಿಸಿಕೊಂಡು ಉಳಿಕೆ ಮೊತ್ತವನ್ನು ಬ್ಯಾಂಕಿಗೆ ಜಮಾ ಮಾಡುವುದು. (v)      ಸಂಘಕ್ಕಾಗಿ ಮತ್ತು ಇದರ ಪರವಾಗಿ ಸಹಕಾರ ಸಂಘಗಳ ಎಲ್ಲಾ ದಸ್ತಾವೇಜುಗಳಿಗೆ ಸಹಿ ಮಾಡಿ ಅವುಗಳನ್ನು ಅನುಪ್ರಮಾಣಿಸತಕ್ಕದ್ದು ಮತ್ತು ಸಂಘದ ಶಾಖಾ ಕಛೇರಿಗಳಿಗೆ ಭೇಟಿ ನೀಡಿ ವರದಿಗಳನ್ನು ಮಂಡಳಿಗೆ ಸಲ್ಲಿಸುವುದು. (vi)   ಸಹಕಾರ ಸಂಘದ ಎಲ್ಲಾ ದಾಖಲೆಗಳ ಮತ್ತು ದಸ್ತಾವೇಜುಗಳ ಅಭಿರಕ್ಷಕರಾಗಿರತಕ್ಕದ್ದು ಮತ್ತು ಸಂಘದ ಲೆಕ್ಕಪುಸ್ತಕ ಮತ್ತು ದಾಖಲೆಗಳ ಸರಿಯಾದ ನಿರ್ವಹಣೆಗೆ ಮತ್ತುಕಾಯ್ದೆ, ನಿಯಮಗಳಿಗೆ ಮತ್ತು ಉಪವಿಧಿಗಳಿಗೆ ಅನುಸಾರವಾಗಿ ನಿಯತಕಾಲಿಕ ವಿವರಣಾ ಪತ್ರಗಳನ್ನು ನಿರ್ವಹಿಸತಕ್ಕದ್ದು ಮತ್ತು ವರದಿಗಳ ಅವಶ್ಯಕತೆಗೆ ಅನುಗುಣವಾಗಿ ಅವುಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಕಾಲದಲ್ಲಿ ಸಲ್ಲಿಸಲು ಏರ್ಪಾಡು ಮಾಡತಕ್ಕದ್ದು. (vii) ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಸಾಮಾನ್ಯ ಸಭೆ, ಆಡಳಿತ ಮಂಡಳಿ ಸಭೆ ಮತ್ತುಉಪಸಮಿತಿ ಸಭೆಗಳನ್ನು ಕರೆಯಲು ಜವಾಬ್ಧಾರನಾಗಿರತಕ್ಕದ್ದು ಮತ್ತು ಅಂತಹ ಸಭೆಗಳ ನಡೆವಳಿಗಳನ್ನು ದಾಖಲಿಸಲು ಮತ್ತು ನಿರ್ವಹಿಸಲು ಹೊಣೆಗಾರರಾಗಿರತಕ್ಕದ್ದು. (viii)          ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಈ ಉಪವಿಧಿಗಳಲ್ಲಿ ತಿಳಿಸಿರುವಂತೆ ೧೫ ದಿನಗಳ ನೋಟೀಸನ್ನು ನೀಡಿ ವಾರ್ಷಿಕ ಸಾಮಾನ್ಯ ಸಭೆ (Annual General Meeting) ಯನ್ನು ಕರೆಯತಕ್ಕದ್ದು. ಆದರೆಜರೂರು ಸಂದರ್ಭದಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ೧೦ ದಿನಗಳ ನೋಟೀಸನ್ನು ಕಳುಹಿಸಿ ಕರೆಯತಕ್ಕದ್ದು. (ix)   ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಭೆಯಲ್ಲಿಚರ್ಚಿಸಲಾಗುವ ವಿಷಯಗಳ ಕುರಿತ ನಡವಳಿಯನ್ನು ವಸ್ತುನಿಷ್ಠವಾಗಿ ಮತ್ತು ನಿಖರವಾಗಿ ನಿಗದಿತ ನಡೆವಳಿ ಪುಸ್ತಕದಲ್ಲಿ ದಾಖಲು ಮಾಡತಕ್ಕದ್ದು ಹಾಗೂ ಆ ಪುಸ್ತಕದಲ್ಲಿ ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಹಿ ಮಾಡತಕ್ಕದ್ದು. ಈ ರೀತಿ ನಡೆವಳಿ ಪುಸ್ತಕದಲ್ಲಿ ದಾಖಲಿಸಿದ ನಡೆವಳಿಯು ಅದರ ನಿಖರತೆಗೆ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದ್ದು. (x)      ಯಾರೇ ನಿರ್ದೇಶಕರು ಅಥವಾ ಯಾರೇ ಸದಸ್ಯರು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದ ಯಾವುದೇ ವಿಷಯದ ಬಗ್ಗೆ ಅವರ ಅಸಮ್ಮತಿ (Dissent) ವ್ಯಕ್ತಪಡಿಸಿದಲ್ಲಿ ಅದನ್ನು ವಸ್ತುನಿಷ್ಠವಾಗಿ ಹಾಗೂ ನಿಖರವಾಗಿ ನಡವಳಿ ಪುಸ್ತಕದಲ್ಲಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಯು ದಾಖಲಿಸತಕ್ಕದ್ದು. (xi)   ಕಾಯ್ದೆ ಕಲಂ ೨೯ ಜಿ (೬) ರಲ್ಲಿ ಹೇಳಿರುವಂತೆ ನಿಯತಕಾಲಿಕ ವರದಿಯನ್ನು ನಿಬಂಧಕರಿಗೆ ಮತ್ತು ಹಣಕಾಸು ಬ್ಯಾಂಕಿಗೆ ಅಥವಾ ಕ್ರೆಡಿಟ್ ಏಜೆನ್ಸಿಗೆ ಕಳುಹಿಸಿಕೊಡತಕ್ಕದ್ದು. ಸಾಮಾನ್ಯ ಸಭೆಯ ಮತ್ತು ಮಂಡಳಿ ಸಭೆಯ ನಡೆವಳಿಗಳ ಒಂದುದೃಢೀಕೃತ ಪ್ರತಿಯನ್ನು ಅಂತಹ ಸಭೆಗಳು ನಡೆದ ದಿನಾಂಕದಿಂದ ೧೫ ದಿನಗಳೊಳಗಾಗಿ ನಿಬಂಧಕರಿಗೆ ಮತ್ತು ಹಣಕಾಸು ಬ್ಯಾಂಕಿಗೆ ಅಥವಾ ಕ್ರೆಡಿಟ್ ಏಜೆನ್ಸಿಗೆ ಕಳುಹಿಸಿಕೊಡತಕ್ಕದ್ದು. (xii) ಕಾರ್ಯನೀತಿಗಳನ್ನು ಮತ್ತು ಧ್ಯೇಯೋದ್ಧೇಶಗಳನ್ನು ಹಾಗೂ ಕಾರ್ಯ ಯೋಜನೆಗಳನ್ನು ರೂಪಿಸಲು ಮಂಡಳಿಗೆ ನೆರವು ನೀಡತಕ್ಕದ್ದು. (xiii)          ಸಂಘದ ಕಾರ್ಯಗಳು ಮತ್ತು ಕಾರ್ಯಾಚರಣೆಗಳ ಬಗ್ಗೆ ಅಗತ್ಯ ಮಾಹಿತಿ ಒದಗಿಸುವುದು ಮತ್ತು ಆ ಬಗ್ಗೆ ಮೌಲ್ಯ ನಿರ್ಧಾರ ಮಾಡತಕ್ಕದ್ದು. (xiv) ಸಂಘದ ಪರವಾಗಿ ದಾವೆ ಹೂಡುವುದು, ಕೋರ್ಟು-ಕಛೇರಿ ವ್ಯವಹಾರಗಳಲ್ಲಿ ಪ್ರತಿನಿಧಿಸುವುದು ಮತ್ತು ದಾವೆಗೆ ಗುರಿಯಾಗುವುದು. (xv)   ಕಾಯ್ದೆ, ನಿಯಮಗಳು ಅಥವಾ ಉಪವಿಧಿಗಳ ಮೇರೆಗೆ ಅವರಿಗೆ ವಿಧಿಸುವಂತಹ ಅಥವಾ ಅವರಿಗೆ ವಹಿಸಿದಂತಹ ಪ್ರದತ್ತವಾದ ಇತರ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಅಧಿಕಾರಗಳನ್ನು ಚಲಾಯಿಸುವುದು. (xvi) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಂಘದ ಮತ್ತು ಇತರ ಮಂಡಳಿಯ ಸಭೆಗಳನ್ನು ಒಳಗೊಂಡು ಸಂಘದ ಪ್ರತಿಯೊಂದು ಸಭೆಗಳಲ್ಲಿ ಪಾಲ್ಗೊಳ್ಳಬಹುದು ಆದರೆ ಯಾವುದೇ ವಿಷಯದ ಮೇಲೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. (xvii)          ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಂಘದ ಪ್ರತಿಯೊಬ್ಬ ಸದಸ್ಯರಿಗೆ ಸಂಘದ ಹೆಸರು, ಅವರ ಪೂರ್ಣ ಹೆಸರು, ಸದಸ್ಯತ್ವದ ಸಂಖ್ಯೆ, ವಯಸ್ಸು ಮತ್ತು ಸದಸ್ಯರ ವಾಸ ಸ್ಥಳದ ವಿಳಾಸವನ್ನು ಸೂಚಿಸುವ ಗುರುತಿನ ಚೀಟಿಯನ್ನು ನೀಡತಕ್ಕದ್ದು. ಸಂಘದ ಸದಸ್ಯರು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿದ ಗುರುತಿನ ಚೀಟಿಯ ಮೇಲೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಂಘದ ಮುದ್ರೆಯೊಂದಿಗೆ ಮತ್ತು ಸದಸ್ಯರು ಸಹಿ ಮಾಡಿದ್ದನ್ನು ಚೀಟಿಯ ಮೇಲೆ ದೃಢೀಕರಿಸತಕ್ಕದ್ದು. (xviii)        ಆಡಳಿತ ಮಂಡಳಿಯ ಸಭೆಯಲ್ಲಿ ಕಾಯಿದೆ, ಕಾನೂನು ಮತ್ತು ಸಂಘದ ಉಪವಿಧಿಗಳ ವಿರುದ್ದವಾಗಿ ಮಂಡಳಿಯು ನಿರ್ಣಯಕೈಗೊಂಡಲ್ಲಿ ಅಂತಹ ನಿರ್ಣಯಗಳನ್ನು ಅನುಷ್ಠಾನಗೊಳಿಸಬಾರದು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಸಭೆಯು ತೆಗೆದುಕೊಂಡ ಅಂತಹ ನಿರ್ಣಯಗಳನ್ನು ಸಂಘದ ಕಾರ್ಯವ್ಯಾಪ್ತಿಯ ನಿಬಂಧಕರಿಗೆ ವರದಿ ಮಾಡತಕ್ಕದ್ದು. #ಅನುಕ್ರಮಣಿಕೆ  

ಅಧ್ಯಾಯ-IX. ಸಿಬ್ಬಂದಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು


೫೦.     ಸಂಘದ ಸಿಬ್ಬಂದಿಯ ನೇಮಕಾತಿ :

ಅ) ಸಂಘಕ್ಕೆ ಮಂಜೂರಾಗಿರುವ ವೃಂದ ಬಲದ ಮಿತಿಯಲ್ಲಿ, ಒಂದು ಸಮಿತಿಯ ಉಸ್ತುವಾರಿಯಲ್ಲಿ, ವೃತ್ತಿಪರತೆ ಮತ್ತು ಪಾರದರ್ಶಕತೆ ನಿಯಮಗಳನ್ನು ಪಾಲಿಸಿ, ನೇಮಕಾತಿ ನಡೆಸತಕ್ಕದ್ದು. ಈ ಸಮಿತಿಯು ಸಹಕಾರ ಸಂಘಗಳ ೧೯೬೦ರ ನಿಯಮಾವಳಿಗಳ ನಿಯಮ ೧೭-ಎ ರ ಅವಕಾಶದಲ್ಲಿ ತಿಳಿಸಿರುವಂತೆ ನೇರ ನೇಮಕಾತಿಗಾಗಿ ಸಮಿತಿಯನ್ನು ರಚಿಸಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸತಕ್ಕದ್ದು.

೫೧.     ಸಿಬ್ಬಂದಿ ವೃಂದ ಸಂಖ್ಯೆ ಮತ್ತು ನೌಕರರ ವೇತನ ಶ್ರೇಣಿಗಳು

೧. ಸಹಕಾರ ಸಂಘಗಳ ೧೯೬೦ರ ನಿಯಮ ೧೭ರ ಅವಕಾಶಗಳಿಗೆ ಒಳಪಟ್ಟು ಪ್ರತಿ ಸಂಘದ ಮಂಡಲಿಯು ಈ ಕೆಳಕಾಣಿಸಿದ ರೀತಿಯ ನೌಕರರ ವೃಂದಬಲವನ್ನು ನಿರ್ಧರಿಸತಕ್ಕದ್ದು. ಅ) ಮುಖ್ಯ ಕಾರ್ಯನಿರ್ವಹಣಾಧಿಕಾರಿ/ಕಾರ್ಯದರ್ಶಿ ಆ) ಪ್ರಥಮ ದರ್ಜೆ ಸಹಾಯಕ ಇ) ದ್ವಿತೀಯ ದರ್ಜೆ ಸಹಾಯಕ ಈ) ಸ್ಟೆನೋಗ್ರಾಫರ್ ಉ) ಬೆರಳಚ್ಚುಗಾರ/ಕಂಪ್ಯೂಟರ್‌ ಆಪರೇಟರ್/ಡೇಟಾಎಂಟ್ರಿ ಆಪರೇಟರ್ ಊ) ಅಕೌಂಟೆಂಟ್ ಋ) ಮಾರಾಟ ಸಹಾಯಕ ಎ) ಡ್ರೈವರ್ ಏ) ಅಟೆಂಡರ್ ೨. ಸಿಬ್ಬಂದಿ ವೆಚ್ಚದ ಅನುಪಾತವು ಹಿಂದಿನ ವರ್ಷಾಂತ್ಯಕ್ಕೆ ಇದ್ದ ದುಡಿಯುವ ಬಂಡವಾಳ ಅಥವಾ ವಹಿವಾಟಿನ ಶೇಕಡಾ ೨ರಷ್ಟನ್ನು ಮೀರತಕ್ಕದ್ದಲ್ಲ. ವಿವರಣೆಗಳು: ಈ ನಿಯಮದ ಉದ್ದೇಶಕ್ಕಾಗಿ:- (ಎ)      ಸಿಬ್ಬಂದಿ ವೆಚ್ಚ ಎಂದರೆ ಸಂಘದ ಎಲ್ಲಾ ನೌಕರರ ವೇತನಗಳು, ತುಟ್ಟಿ ಭತ್ಯೆ ಮತ್ತು ಇತರೆ ಭತ್ಯೆಗಳು, ಪ್ರಯಾಣ ಭತ್ಯೆಗಳು, ರಜೆ ವೇತನ, ಗ್ರ್ಯಾಚುಯಿಟಿ, ಭವಿಷ್ಯನಿಧಿ, ವಂತಿಗೆಗಳು ಮತ್ತು ಅಂಥ ಇತರೆ ಸಂಬಂಧಿತ ಎಲ್ಲಾ ಖರ್ಚುಗಳು. (ಬಿ) ದುಡಿಯುವ ಬಂಡವಾಳ ಎಂದರೆ, ಕಟ್ಟಡಗಳಲ್ಲಿ ಮತ್ತು ಇತರೆ ಸ್ಥಿರ ಸ್ವತ್ತುಗಳಲ್ಲಿ ತೊಡಗಿಸಿರುವ ನಿಧಿಗಳನ್ನು ಹೊರತುಪಡಿಸಿ, ಒಟ್ಟು ಪಾವತಿಯಾದ ಷೇರು ಬಂಡವಾಳ, ಕಾಯ್ದಿಟ್ಟ ನಿಧಿ, ಇತರೆ ನಿಧಿಗಳು, ಠೇವಣಿಗಳು, ಪಡೆದ ಸಾಲಗಳು ಮತ್ತು ವಿತರಣೆಯಾಗದ ಲಾಭಗಳು. (ಸಿ) ವಹಿವಾಟು ಎಂದರೆ, ಉದ್ದರಿ ಮಾರಾಟಗಳನ್ನು ಮತ್ತು ದಲ್ಲಾಳಿ ಮಾರಾಟಗಳನ್ನು ಒಳಗೊಂಡಂತೆ ವರ್ಷದಲ್ಲಿ ಮಾಡಿದ ಮಾರಾಟಗಳು ಆದರೆ ಸರ್ಕಾರದ ಸಾರ್ವಜನಿಕ ವಿತರಣೆಯ ವ್ಯವಸ್ಥೆಯ ಅಡಿಯಲ್ಲಿ ನಿಯಂತ್ರಿತ ಸರಕುಗಳ ಮಾರಾಟದ ಶೇಕಡಾ ೫೦ ರಷ್ಟನ್ನು ಮಾರಾಟಗಳ ವಹಿವಾಟಿನಿಂದ ಹೊರಗಿಡತಕ್ಕದ್ದು.

೫೨.     ಮಾನವ ಸಂಪನ್ಮೂಲ ಅಭಿವೃದ್ಧಿ ನೀತಿ:

ಸಂಘದ ಮಂಡಳಿಯು ತನ್ನ ವ್ಯವಹಾರದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಪಾರದರ್ಶಕ ಮಾನವ ಸಂಪನ್ಮೂಲ ಅಭಿವೃದ್ಧಿ ನೀತಿಯನ್ನು ರೂಪಿಸತಕ್ಕದ್ದು ಮತ್ತು ಸಾಮಾನ್ಯ ಸಭೆಯ ಅನುಮೋದನೆ ಪಡೆಯತಕ್ಕದ್ದು. ೫೩. ನೇರ ನೇಮಕಾತಿ: ಎ) ಸಂಘಕ್ಕೆ ಮಂಜೂರಾಗಿರುವ ವೃಂದ ಬಲಕ್ಕೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವಾಗ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿರುವ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವೇತನ ಶ್ರೇಣಿ, ನೇಮಕಾತಿ ಪ್ರಕ್ರಿಯೆಯ ಹಂತಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡಂತೆ ಹೊರಡಿಸಿರುವ ಅಧಿಸೂಚನೆಯನ್ನು ಎರಡು ಕನ್ನಡ ದಿನ ಪತ್ರಿಕೆ ಹಾಗೂ ಒಂದು ಆಂಗ್ಲ ದಿನ ಪತ್ರಿಕೆಯಲ್ಲಿ ಪ್ರಕಟಿಸತಕ್ಕದ್ದು. ಬಿ) ಸಂಘಕ್ಕೆ ಅನುಮೋದನೆಯಾಗಿರುವ ವೃಂದ ಬಲದಲ್ಲಿನ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಿಕೊಳ್ಳುವಾಗ ನೇಮಕಾತಿ ಪ್ರಕ್ರಿಯೆಯನ್ನು ನಿಯಮ ೧೮ರಲ್ಲಿ ನಮೂದಿಸಿರುವಂತೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸತಕ್ಕದ್ದು. ಇ) ಸಂಘದ ಆಡಳಿತ ಮಂಡಳಿಯ ಪದಾವಧಿಯು ಮುಕ್ತಾಯವಾಗುವ ೦೩ (ಮೂರು) ತಿಂಗಳ ಪೂರ್ವದಲ್ಲಿ ಸಂಘದಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿಗಾಗಿ ಪ್ರಕ್ರಿಯೆಯನ್ನು ನಡೆಸತಕ್ಕದ್ದಲ್ಲ.  

೫೪.     ನೇರ ನೌಕರಿ ಭರ್ತಿಗೆ ವಯೋಮಿತಿ:

ಸಂಘದ ಯಾವುದೇ ಸೇವೆಯ ಹುದ್ದೆಗೆ ನೇರ ನೌಕರಿ ಭರ್ತಿಯ ನೇಮಕಾತಿಗೆ ಪ್ರತಿಅಭ್ಯರ್ಥಿಗೆ ಹದಿನೆಂಟು ವರ್ಷ ವಯಸ್ಸು ತುಂಬಿರತಕ್ಕದ್ದು ಹಾಗೂ ಅರ್ಜಿಯನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ನಿಯಮ ೧೮ ರಲ್ಲಿ ನಿಗದಿ ಪಡಿಸಿರುವ ಗರಿಷ್ಠ ವಯಸ್ಸು ಮೀರದಂತೆ ಇರತಕ್ಕದ್ದು.  

೫೫.     ರಜೆ ಸೌಕರ್ಯಗಳು:

೧)   ರಜೆಯನ್ನು ಹಕ್ಕಿನಂತೆ ಕ್ಲೇಮು ಮಾಡಲಾಗದು, ಯಾವನೇ ನೌಕರನು ರಜೆಯ ಮುಂದುವರಿಕೆಯಲ್ಲಿ ಅಥವಾ ಅನ್ಯಥಾ ಪೂರ್ವ ಮಂಜೂರಾತಿಯಿಲ್ಲದೆ ಉದ್ದೇಶಪೂರ್ವಕವಾಗಿ ಗೈರು ಹಾಜರಾದರೆ ಅವನು ಶಿಸ್ತಿನ ಕ್ರಮಕ್ಕೆ ಗುರಿಯಾಗಲು ಬಾಧ್ಯನಾಗಿರತಕ್ಕದ್ದು. ೨) ಒಂದು ಕ್ಯಾಲೆಂಡರು ವರ್ಷದಲ್ಲಿ ಒಬ್ಬ ನೌಕರನಿಗೆ ಹನ್ನೆರಡು ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಸಾಂದರ್ಭಿಕ ರಜೆಯನ್ನು ವರ್ಷದಿಂದ ವರ್ಷಕ್ಕೆ ಒಟ್ಟುಗೂಡಿಸಿ ಕೊಳ್ಳಲು ಅಥವಾ ಮುಂದಕ್ಕೊಯ್ಯಲಾಗದು. ಸಾಮಾನ್ಯವಾಗಿ ಒಂದು ಸಲಕ್ಕೆ, ಮಧ್ಯಂತರದಲ್ಲಿ ರಜೆಗಳು ಸಾರ್ವತ್ರಿಕ ರಜೆಗಳು ಸೇರಿದಂತೆ, ಏಳು ದಿನಗಳಿಗಿಂತ ಹೆಚ್ಚಾಗಿ ಸಾಂದರ್ಭಿಕ ರಜೆಯನ್ನು ಅನುಮತಿಸತಕ್ಕುದಲ್ಲ. ೩) ಎ)    ಒಬ್ಬ ನೌಕರನು ಒಂದು ಕ್ಯಾಲೆಂಡರು ವರ್ಷದಲ್ಲಿ ಮೂವತ್ತು ಪೂರ್ಣ ವೇತನದಗಳಿಕೆ ರಜೆಗೆ ಹಕ್ಕುಳ್ಳವನಾಗಿರತಕ್ಕದ್ದು. ಯಾವುದೇ ನೌಕರನು ಕ್ಯಾಲೆಂಡರ್ ವರ್ಷದ ಮಧ್ಯದಲ್ಲಿ ನೇಮಕವಾದಾಗ, ಪ್ರತಿ ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳ ಸೇವೆಗೆ ಎರಡುವರೆ ದಿನಗಳ ದರದಂತೆ ಗಳಿಕೆ ರಜೆಯನ್ನು ಜಮಾ ಮಾಡತಕ್ಕದ್ದು. ಗಳಿಕೆ ರಜೆಯನ್ನು ಗರಿಷ್ಟ ೩೦೦ ದಿನಗಳ ಅವಧಿಯವರೆಗೆ ಒಟ್ಟು ಗೂಡಿಸಿಕೊಳ್ಳಬಹುದು. ಒಬ್ಬ ನೌಕರನಿಗೆ, ಆತನ ಹಕ್ಕಿನಲ್ಲಿ ರಜೆ ಇದ್ದಲ್ಲಿ ಒಂದು ಬಾರಿಗೆ ಅರವತ್ತು ದಿನಗಳವರೆಗೆ ಗಳಿಕೆ ರಜೆಯನ್ನು ಮಂಜೂರು ಮಾಡಬಹುದು. ಬಿ)  ಸೇವೆಯಿಂದ ನಿವೃತ್ತನಾಗಲಿರುವಅಥವಾ ಸೇವೆಗೆ ರಾಜೀನಾಮೆಕೊಟ್ಟ ನೌಕರನಿಗೆ ಪ್ರತಿ ಪೂರ್ಣಗೊಂಡಕ್ಯಾಲೆಂಡರ್ ತಿಂಗಳ ಸೇವೆಗೆ ಎರಡೂವರೆ ದಿನಗಳ ದರದಲ್ಲಿ ನಿವೃತ್ತಿಅಥವಾರಾಜೀನಾಮೆ ದಿನಾಂಕದವರೆಗೆ ಗಳಿಕೆರಜೆಯನ್ನು ಜಮಾ ಮಾಡತಕ್ಕದ್ದು; ಸಿ)  ಸೇವೆಯಲ್ಲಿರುವಾಗ ಮೃತನಾದಅಥವಾ ಸೇವೆಯಿಂದ ವಜಾಗೊಳಿಸಲ್ಪಟ್ಟ ಅಥವಾ ಸೇವೆಯಿಂದತೆಗೆದುಹಾಕಲ್ಪಟ್ಟ ನೌಕರನಿಗೆಆತನು ಸೇವೆಯಲ್ಲಿ ಮೃತನಾದಅಥವಾ ಸೇವೆಯಿಂದ ವಜಾಗೊಳಿಸಲ್ಪಟ್ಟ ಅಥವಾತೆಗೆದುಹಾಕಲ್ಪಟ್ಟಕ್ಯಾಲೆಂಡರ್ ತಿಂಗಳ ಹಿಂದಿನ ಕ್ಯಾಲೆಂಡರ್ ತಿಂಗಳ ಅಂತ್ಯದವರೆಗೆ ಪ್ರತಿ ಪೂರ್ಣಗೊಂಡಕ್ಯಾಲೆಂಡರ್ ತಿಂಗಳ ಸೇವೆಗೆ ಎರಡುವರೆ ದಿನಗಳ ದರದಲ್ಲಿ ಗಳಿಕೆರಜೆಯನ್ನು ಜಮಾ ಮಾಡತಕ್ಕದ್ದು: ಡಿ)  ಒಂದು ಬ್ಲಾಕ್‌ಅವಧಿಯಎರಡು ವರ್ಷಗಳಲ್ಲಿ ಒಂದು ಸಲ ನಗದೀಕರಣಕ್ಕಾಗಿ ನೌಕರನು ಮೂವತ್ತು ದಿವಸಗಳ ಗಳಿಕೆರಜೆಯನ್ನು ನಗದೀಕರಿಸಲುಒಪ್ಪಿಸಲುಅನುಮತಿಸಬಹುದು. ರಜೆಯನ್ನು ಒಪ್ಪಿಸಿದ ತಿಂಗಳಿನಲ್ಲಿ ದಿವಸಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ, ಒಪ್ಪಿಸಿದ ರಜೆಯ ಪ್ರತಿ ದಿನಕ್ಕೆ ವೇತನದ ೧/೩೦ರ ದರದಂತೆ, ಒಪ್ಪಿಸಿದ ರಜೆಗೆ ಸಮನಾದ ವೇತನವನ್ನು ಲೆಕ್ಕಾಚಾರ ಮಾಡತಕ್ಕದ್ದು. ಗಳಿಕೆ ರಜೆಯ ನಗದೀಕರಣದ ಸೌಲಭ್ಯವು ದಿನಗೂಲಿ ಆಧಾರದ ಮೇಲೆ ಅಥವಾ ಪೂರ್ಣವಾಗಿ ಹಂಗಾಮಿ ಆಧಾರದ ಮೇಲೆ ಅಥವಾಗುತ್ತಿಗೆಆಧಾರದ ಮೇಲೆ ನೇಮಕಾತಿ ಹೊಂದಿದ ವ್ಯಕ್ತಿಗಳಿಗೆ ಅನ್ವಯಿಸತಕ್ಕದ್ದಲ್ಲ. ೪.   ಒಬ್ಬ ನೌಕರನಿಗೆ ಅವನ ನಿವೃತ್ತಿಗೆ ಮೊದಲು ಅವನ ಲೆಕ್ಕದಲ್ಲಿ ರಜೆ ಬಾಕಿಯಿದ್ದರೆ ಇನ್ನೂರ ನಲವತ್ತು ದಿನಗಳ ಗರಿಷ್ಠ ಮಿತಿಗೊಳಪಟ್ಟು ಪೂರ್ಣ ವೇತನದ ಮೇಲೆ ಗಳಿಕೆ ರಜೆಯನ್ನು ಮಂಜೂರು ಮಾಡಬಹುದು. ಸಂಸ್ಥೆಯ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಒಬ್ಬ ನೌಕರನ ಸೇವೆಯನ್ನು ಬಿಟ್ಟು ಕೊಡಲಾಗದಿದ್ದರೆ, ಇನ್ನೂರ ನಲವತ್ತು ದಿನಗಳ ಗರಿಷ್ಠ ಮಿತಿಗೆ ಒಳಪಟ್ಟು ಆತನ ಹಕ್ಕಿನಲ್ಲಿರುವ ಗಳಿಕೆ ರಜೆಯನ್ನು ನಗದೀಕರಿಸಲು ಅನುಮತಿಸಿ ರಜೆ ವೇತನದ ಸಮನಾದ ಹಣವನ್ನು ಕೊಡತಕ್ಕದ್ದು. ೫.   ಸಂಘದ ವಿವಾಹಿತ ಮಹಿಳಾ ನೌಕರರಿಗೆ ಪೂರ್ಣ ವೇತನದ ಮೇಲೆ ನೂರಎಂಭತ್ತು ದಿನಗಳ ಅವಧಿಯ ಪ್ರಸೂತಿರಜೆಯನ್ನು ಮಂಜೂರು ಮಾಡಬಹುದು. ಅಂಥಾ ರಜೆಯು ನೌಕರಳ ಇಚ್ಚೆಯ ಮೇರೆಗೆ ನಿರೀಕ್ಷಿತ ಹೆರಿಗೆ ದಿನಾಂಕಕ್ಕೆ ಪೂರ್ವದ ಮೂವತ್ತು ದಿನಗಳಿಗೆ ಹೆಚ್ಚಿಲ್ಲದ ಅವಧಿಯನ್ನು ಒಳಗೊಂಡಿರತಕ್ಕದ್ದು. ಯಾವುದೇ ಸಂದರ್ಭದಲ್ಲಿ ಪ್ರಸೂತಿ ರಜೆಯು ಪ್ರಸವದ ದಿನಾಂಕದಿಂದ ಆರು ತಿಂಗಳುಗಳನ್ನು ಮೀರತಕ್ಕದಲ್ಲ. ಪರಂತು, ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ವಿವಾಹಿತ ಮಹಿಳಾ ನೌಕರರಿಗೆ ಯಾವುದೇ ಪ್ರಸೂತಿ ರಜೆಯನ್ನು ಮಂಜೂರು ಮಾಡತಕ್ಕುದಲ್ಲ. ೬.   ಸಂಘದ ವಿವಾಹಿತ ಪುರುಷ ನೌಕರರಿಗೆ ಪೂರ್ಣ ವೇತನದ ಮೇಲೆ ಹದಿನೈದು ದಿನಗಳ ಅವಧಿಯ ಪಾಲನಾ ರಜೆಯನ್ನು ಮಂಜೂರು ಮಾಡಬಹುದು. ೭.   ಈ ನಿಯಮಗಳ ಮೇರೆಗೆ ಗಳಿಸಿದ ಮತ್ತು ಅನುಮತಿಸಲಾದ ಇತರ ಎಲ್ಲ ರಜೆಯ ಜೊತೆಗೆ ಒಬ್ಬ ನೌಕರನಿಗೆ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ ಒಂದು ವರ್ಷದವರೆಗೆ ಸಂಬಳವಿಲ್ಲದ ರಜೆ ಯನ್ನು ಮಂಜೂರು ಮಾಡಬಹುದು. ೮.  ರಜೆಯನ್ನು ಮಂಜೂರು ಮಾಡಲು ಸಕ್ಷಮನಾದ ಪ್ರಾಧಿಕಾರವು ಅದನ್ನು ರದ್ದುಗೊಳಿಸಬಹುದು.  

೫೬.     ಗ್ರ್ಯಾಚುಯಿಟಿ:

೧.   ಸಂಘದ ಮಂಡಳಿಯು, ನಿವೃತ್ತನಾದ ಅಥವಾ ರಾಜೀನಾಮೆ ಕೊಟ್ಟ ನೌಕರನಿಗೆ ಅಥವಾ ಅವನ ಮರಣದ ನಂತರ ಅವನ ನಾಮಿನಿಗಳಿಗೆ ಅಥವಾ ವಿಧಿಬದ್ಧ ವಾರಸುದಾರರಿಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಗ್ರ್ಯಾಚುಯಿಟಿಯನ್ನು ಮಂಜೂರು ಮಾಡತಕ್ಕದ್ದು. ಅ) ಒಬ್ಬ ನೌಕರನು ಅವನ ಖಾಯಂ ನೇಮಕದ ದಿನಾಂಕದಿಂದ ಐದು ವರ್ಷಗಳೊಳಗೆ ಸೇವೆಯನ್ನು ತೊರೆದಾಗ, ಅವನು ಈ ಸೌಲಭ್ಯದ ಬಗ್ಗೆ ಯಾವುದೇ ಕ್ಲೇಮು ಹೊಂದಿರತಕ್ಕದ್ದಲ್ಲ ಆ) ಐದರಿಂದ ಹತ್ತು ವರ್ಷಗಳ ಸೇವೆ ಸಲ್ಲಿಸಿರುವ ಒಬ್ಬ ನೌಕರನು ಸೇವೆಗೆ ರಾಜೀನಾಮೆ ಕೊಟ್ಟಾಗ ಅಥವಾ ಸೇವೆಯಿಂದ ನಿವೃತ್ತನಾದಾಗ ಅಥವಾ ಸೇವೆಯಲ್ಲಿರುವಾಗ ಮೃತನಾದಾಗ, ಆತನು ಸಲ್ಲಿಸಿರುವ ಸೇವೆಯ ಪ್ರತಿಯೊಂದು ವರ್ಷಕ್ಕೆ, ಸಂದರ್ಭಾನುಸಾರ, ರಾಜೀನಾಮೆ ಅಥವಾ ನಿವೃತ್ತಿಯ ಅಥವಾ ಮರಣದ ದಿನಾಂಕದಂದು ಅವನು ಪಡೆಯುತ್ತಿದ್ದ ತಿಂಗಳ ವೇತನದ ಅರ್ಧದಷ್ಟನ್ನು ಮೀರದ ಗ್ರ್ಯಾಚುಯಿಟಿ. ಇ)  ಹತ್ತು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಒಬ್ಬ ನೌಕರನು ರಾಜೀನಾಮೆ ಕೊಟ್ಟಾಗ ಅಥವಾ ಸೇವೆಯಿಂದ ನಿವೃತ್ತನಾದಾಗ ಅಥವಾ ಸೇವೆಯಲ್ಲಿರುವಾಗ ಮೃತನಾದಾಗ, ಆತನು ಸಲ್ಲಿಸಿರುವ ಸೇವೆಯ ಪ್ರತಿಯೊಂದು ವರ್ಷಕ್ಕೆ, ಸಂದರ್ಭಾನುಸಾರ, ರಾಜೀನಾಮೆ ಅಥವಾ ನಿವೃತ್ತಿಯ ಅಥವಾ ಮರಣದ ದಿನಾಂಕದಂದು ಅವನು ಪಡೆಯುತ್ತಿದ್ದ ತಿಂಗಳ ವೇತನವನ್ನು ಮೀರದ ಗ್ರ್ಯಾಚುಯಿಟಿ. ೨. ಯಾವುದೇ ಸಂದರ್ಭದಲ್ಲಿ, ಯಾವುದೇ ನೌಕರನಿಗೆ ಕೊಡಬಹುದಾದ ಗ್ರ್ಯಾಚುಯಿಟಿಯ ಗರಿಷ್ಠ ಮೊಬಲಗು ಹದಿನಾರೂವರೆ ತಿಂಗಳ ವೇತನಅಥವಾ ಹತ್ತು ಲಕ್ಷ ರೂ.ಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಮೀರತಕ್ಕದ್ದಲ್ಲ. ಸೂಚನೆ: - ವೇತನದ ಎಂದರೆ, ನೌಕರನು ಪಡೆದ ಕೊನೆಯ ಮಾಸಿಕ ಸಂಬಳ.  

೫೭.     ವರ್ಗಾವಣೆ ಮತ್ತು ಪದೋನ್ನತಿ:

೧.   ಯಾವುದೇ ಹುದ್ದೆಯ ನೇರ ಭರ್ತಿಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನುಳ್ಳ ಮತ್ತು ಆ ಹುದ್ದೆಯಲ್ಲಿ ಕನಿಷ್ಠಪಕ್ಷ ಐದು ವರ್ಷಗಳ ಸಮರ್ಪಕ ಸೇವೆಯನ್ನು ಸಲ್ಲಿಸಿರುವ ಒಬ್ಬ ನೌಕರನು ಸಂಘದ ಕೇಡರ್ ಮತ್ತು ನೇಮಕಾತಿ ನಿಯಮಗಳನ್ವಯ ಉನ್ನತ ಹುದ್ದೆಗೆ ಪದೋನ್ನತಿಗಾಗಿ ಪರಿಗಣಿಸಲು ಅರ್ಹನಾಗಿರತಕ್ಕದ್ದು. ೨.   ಮುಖ್ಯ ಕಾರ್ಯ ನಿರ್ವಾಹಕನು ಮತ್ತು ಇತರ ಸಕ್ಷಮ ಪ್ರಾಧಿಕಾರವು ಒಬ್ಬ ನೌಕರನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ವರ್ಗಾವಣೆ ಮಾಡಬಹುದು.  

೫೮.     ಸೇವಾ ಪುಸ್ತಕ:

ಅಧಿಕಾರಿಯ ಮುಖ್ಯ ಕಾರ್ಯ ನಿರ್ವಾಹಕನು ಪ್ರತಿ ನೌಕರನ ಸೇವೆಗಳ ದಾಖಲೆಯನ್ನು, ಆತನು ಗಳಿಸಿದ ಮತ್ತು ಉಪಯೋಗಿಸಿಕೊಂಡ ರಜೆಯ ವಿವರಗಳ ಸಹಿತ ನಿರ್ವಹಿಸತಕ್ಕದ್ದು. ಕಾಲಕಾಲಕ್ಕೆ ಹುದ್ದೆ ಮತ್ತು ಸಂಬಳದಲ್ಲಿ ಆಗುವ ಬದಲಾವಣೆಗಳನ್ನು, ವರ್ಗಾವಣೆಗಳನ್ನು ಮತ್ತು ಸೇವೆಗೆ ಸಂಬಂಧಪಟ್ಟ ಇತರ ಎಲ್ಲ ವಿಷಯಗಳನ್ನು ಸೇವಾ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ಸದರಿ ಪುಸ್ತಕದಲ್ಲಿನ ನಮೂದುಗಳನ್ನು ಮುಖ್ಯ ಕಾರ್ಯ ನಿರ್ವಾಹಕನ ಸಂಬಂಧದಲ್ಲಿ ಅಧ್ಯಕ್ಷನು ಮತ್ತುಇತರ ನೌಕರರ ಸಂಬಂಧದಲ್ಲಿ ಮುಖ್ಯ ಕಾರ್ಯ ನಿರ್ವಾಹಕನು ದೃಢೀಕರಿಸತಕ್ಕದ್ದು.  

೫೯.     ಅಧಿಕೃತ ಮಾಹಿತಿಯ ಬಳಕೆ:

ಯಾವುದೇ ನೌಕರನು, ಮಂಡಳಿಯು ಸಾಮಾನ್ಯವಾಗಿಅಥವಾ ವಿಶೇಷವಾಗಿ ಅಧಿಕಾರ ನೀಡಿದಅಥವಾ ಅನುಮತಿಸಿದ ಹೊರತು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾವನೇಇತರ ವ್ಯಕ್ತಿಗೆಅಥವಾ ಸಂಸ್ಥೆಗೆ ಅಥವಾ ಪತ್ರಿಕೆಗಳಿಗೆ ಅಥವಾ ವಿದ್ಯುನ್ಮಾನ ಮಾಧ್ಯಮಗಳಿಗೆ ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ತನ್ನ ವಶಕ್ಕೆ ಬಂದಿರುವ ಅಥವಾ ಅಂಥ ಕರ್ತವ್ಯಗಳನ್ನು ನಿರ್ವಹಿಸುವಾಗ ಅಧಿಕೃತ ಮೂಲಗಳಿಂದಾಗಲಿ ಅಥವಾ ಅನ್ಯಥಾ ಆಗಲಿ ಅವನು ತಯಾರಿಸಿದ ಅಥವಾ ಸಂಗ್ರಹಿಸಿದ ಯಾವುದೇ ದಾಖಲೆಗಳನ್ನು ಅಥವಾದಸ್ತಾವೇಜನ್ನುಕೊಡತಕ್ಕದ್ದಲ್ಲಅಥವಾ ಮಾಹಿತಿಯನ್ನು ತಿಳಿಸತಕ್ಕದ್ದಲ್ಲ. ೬೦.  ಹಣಕಾಸು ಸಂಬಂಧ: ಯಾವುದೇ ನೌಕರನು, ತನ್ನಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಅವನ ಸಂಪರ್ಕಕ್ಕೆ ಬರುವ ವ್ಯಕ್ತಿಗಳೊಡನೆ ಅಥವಾ ಸಂಸ್ಥೆಗಳೊಡನೆ ಹಣಕಾಸು ವಹಿವಾಟನ್ನು ಹೊಂದಿರತಕ್ಕದ್ದಲ್ಲ. ಅಥವಾ ಅವನು ತನ್ನಅಧಿಕೃತ ಸಾಮರ್ಥ್ಯದಲ್ಲಿ ವ್ಯವಹರಿಸಬಹುದಾದಂಥ ಯಾವುದೇ ವ್ಯಕ್ತಿಯಿಂದ ಯಾವುದೇ ದಾನವನ್ನು, ಕೊಡುಗೆಯನ್ನು ಅಥವಾ ಬಹುಮಾನವನ್ನು ತನ್ನ ಪರವಾಗಿ ಅಥವಾ ಇತರ ಯಾವುದೇ ವ್ಯಕ್ತಿಯ ಪರವಾಗಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸ್ವೀಕರಿಸತಕ್ಕದ್ದಲ್ಲ. ಪರಂತು ಒಬ್ಬ ನೌಕರನು ತನ್ನ ಠೇವಣಿಗಳ, ಉಳಿತಾಯಗಳ, ವಿಮಾ ಪಾಲಿಸಿಗಳ ಅಥವಾ ಇತರ ದಸ್ತಾವೇಜುಗಳ ಭದ್ರತೆಯ ಮೇಲೆ ಇತರ ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಈ ನಿಯಮವು ಅನ್ವಯವಾಗತಕ್ಕದ್ದಲ್ಲ.  

೬೧.     ಕರಾರು ಇತ್ಯಾದಿಗಳಲ್ಲಿ ಹಿತಾಸಕ್ತಿಯನ್ನು ಹೊಂದಿರುವುದಕ್ಕೆ ನಿಷೇಧ:

೧.   ಒಂದು ಸಂಘದ ಯಾವುದೇ ನೌಕರನು, ಅಂಥ ನೌಕರನಾಗಿರುವುದರ ಹೊರತಾಗಿ, ಅನ್ಯಥಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ:- ಎ)  ಸಂಘದೊಡನೆ ಮಾಡಿಕೊಂಡ ಯಾವುದೇ ಕರಾರಿನಲ್ಲಿ ಅಥವಾ ಬಿ)  ಸಂಘವು ಖರೀದಿಸಿದ ಅಥವಾ ಮಾರಾಟ ಮಾಡಿದ ಯಾವುದೇ ಸ್ವತ್ತಿನಲ್ಲಿ; ಅಥವಾ ಸಿ)   ಸಂಘದಲ್ಲಿ ಹಣ ಹೂಡಿಕೆ ಅಥವಾ ಸಹಕಾರಿಯಿಂದ ತೆಗೆದುಕೊಂಡ ಸಾಲ ಆಥವಾ ವೇತನ ಪಡೆಯುವ ನೌಕರನಿಗೆ ಕೊಡ ಮಾಡುವ ನಿವಾಸ ಸೌಕರ್ಯದ ಹೊರತಾಗಿ, ಸಂಘದ ಯಾವುದೇ ಇತರ ವ್ಯವಹಾರದಲ್ಲಿ-ಯಾವುದೇ ಹಿತಾಸಕ್ತಿಯನ್ನು ಹೊಂದಿರತಕ್ಕದ್ದಲ್ಲ. ೨.   ಸಂಘದ ಯಾವುದೇ ನೌಕರನು, ಸಂಘದ ಬಾಕಿಗಳ ವಸೂಲಿಯ ಸಂಬಂಧದಲ್ಲಿ ಮಾರಾಟವಾಗುವ ಯಾವೊಬ್ಬ ಸದಸ್ಯನ ಸ್ವತ್ತನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಖರೀದಿಸತಕ್ಕದ್ದಲ್ಲ.  

೬೨.     ರಾಜಕೀಯದಲ್ಲಿ ಅಥವಾ ಚುನಾವಣೆಗಳಲ್ಲಿ ಭಾಗವಹಿಸುವುದು:

ಸಂಘದ ಯಾವುದೇ ನೌಕರನು- ಎ)  ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದೊಡನೆ ಅಥವಾ ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ಸಂಸ್ಥೆಯೊಡನೆ ಅನ್ಯಥಾ ಜೊತೆಗೂಡತಕ್ಕದ್ದಲ್ಲ. ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಗೆ ಚಂದಾ ನೀಡತಕ್ಕದ್ದಲ್ಲ ಅಥವಾ ಇತರ ಯಾವುದೇ ರೀತಿಯಲ್ಲಿ ಸಹಾಯ ಮಾಡತಕ್ಕದ್ದಲ್ಲ. ಬಿ)  ಸಂಸತ್ ಸದಸ್ಯನಾಗಿ ಅಥವಾ ರಾಜ್ಯ ವಿಧಾನಮಂಡಲದ ಸದಸ್ಯನಾಗಿ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯನಾಗಿ ಅಥವಾ ಯಾವುದೇ ಪಂಚಾಯತ್‌ರಾಜ್ ಸಂಸ್ಥೆಯ ಸದಸ್ಯನಾಗಿ ಅಥವಾ ಮಂಡಳಿಯ ಸದಸ್ಯನಾಗಿ ಚುನಾಯಿತನಾಗಲು ಚುನಾವಣೆಯಲ್ಲಿ ಸ್ಪರ್ಧಿಸತಕ್ಕದ್ದಲ್ಲ ಮತ್ತು ಚುನಾಯಿತ ನಾಗತಕ್ಕದ್ದಲ್ಲ. ಸಿ)   ಸಂಸತ್ತು ಅಥವಾ ರಾಜ್ಯ ವಿಧಾನಮಂಡಲ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಅಥವಾ ಯಾವುದೇ ಪಂಚಾಯತ್‌ರಾಜ್ ಸಂಸ್ಥೆಯ ಅಥವಾ ಮಂಡಳಿಯ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸತಕ್ಕದ್ದಲ್ಲ. ಅಥವಾ ಮತಗಳನ್ನು ಯಾಚಿಸತಕ್ಕದ್ದಲ್ಲ ಅಥವಾ ಅನ್ಯಥಾ ಯಾವುದೇ ರೂಪದಲ್ಲಿ ಶ್ರಮಿಸತಕ್ಕದ್ದಲ್ಲ ಅಥವಾ ಪ್ರಭಾವ ಬೀರತಕ್ಕದ್ದಲ್ಲ. ಪರಂತು, ಅಂಥ ಚುನಾವಣೆಯಲ್ಲಿ ಸಂಘದ ಯಾವುದೇ ನೌಕರನು ಮತ ನೀಡಲು ಹಕ್ಕುಳ್ಳವನಾಗಿದ್ದರೆ ತನ್ನ ಹಕ್ಕನ್ನು ಚಲಾಯಿಸಬಹುದು.  

೬೩.     ದಂಡನೆಗಳು:

೧.   ಉಪವಿಧಿ ೫೯ ರಿಂದ ೬೨ರವರೆಗಿನ ಉಪಬಂಧಗಳನ್ನು ಉಲ್ಲಂಘಿಸುವ ಯಾವುದೇ ನೌಕರನು ಮಂಡಳಿಯು ನಿರ್ಧರಿಸಬಹುದಾದ ದಂಡನೆಗೆ ಗುರಿಯಾಗಲು ಬದ್ಧನಾಗಿರತಕ್ಕದ್ದು. ೨.   ಯಾವುದೇ ನೌಕರನು ಸಮರ್ಪಕ ಮತ್ತು ಸಮರ್ಥನೀಯ ಕಾರಣಕ್ಕಾಗಿ ದಂಡನೀಯವಾಗಬಹುದು. ಮಂಡಳಿಯು ಅಥವಾ ಅದರಿಂದ ಪ್ರಾಧಿಕೃತನಾದ ಅಧ್ಯಕ್ಷ ಅಥವಾ ಮುಖ್ಯ ಕಾರ್ಯ ನಿರ್ವಾಹಕನು ಸಂಘದ ನೌಕರರನ್ನು ದಂಡಿಸಲು, ಜುಲ್ಮಾನೆ ವಿಧಿಸಲು, ವೇತನ ಹೆಚ್ಚಳವನ್ನು ತಡೆಹಿಡಿಯಲು, ಅಮಾನತ್ತುಗೊಳಿಸಲು, ದರ್ಜೆಯಲ್ಲಿ ಇಳಿಸಲು, ಸೇವೆಯಿಂದ ತೆಗೆದು ಹಾಕಲು ಅಥವಾ ವಜಾ ಮಾಡಲು ಸಕ್ಷಮ ಪ್ರಾಧಿಕಾರವಾಗಿರತಕ್ಕದ್ದು. ೩.   ಯಾವುದೇ ನೌಕರನಿಗೆ ಆತನ ವಿರುದ್ಧ ಮಾಡಲಾದ ದುರ್ನಡತೆಯ ಆರೋಪಗಳನ್ನು ಆತನಿಗೆ ಲಿಖಿತದಲ್ಲಿ ತಿಳಿಸಿ, ಆತನನ್ನು ಸಮರ್ಥಿಸಿಕೊಳ್ಳಲು ಆತನಿಗೆ ಯುಕ್ತ ಅವಕಾಶ ನೀಡಿ, ನಿಯಮಾನುಸಾರ ವಿಚಾರಣೆಯನ್ನು ಮಾಡದ ಹೊರತು ಯಾವುದೇ ಬಗೆಯ ದಂಡನೆಯನ್ನು ವಿಧಿಸತಕ್ಕದ್ದಲ್ಲ.  

೬೪.      ಅಪೀಲು:

ಸಂಘದ ಸಕ್ಷಮ ಪ್ರಾಧಿಕಾರವು ವಿಧಿಸಿದ ದಂಡನಾ ಆದೇಶದಿಂದ ಬಾಧಿತನಾದ ಯಾವುದೇ ನೌಕರನು, ಅಂಥ ಸಂಘದ ಅಂಥ ಪ್ರಾಧಿಕಾರದ ಅತಿ ನಿಕಟ ವರಿಷ್ಠ ಪ್ರಾಧಿಕಾರಕ್ಕೆ, ದಂಡನಾ ಆದೇಶವು ತಲುಪಿದ ದಿನಾಂಕದಿಂದ ಅರವತ್ತು ದಿನಗಳೊಳಗೆ, ಅಪೀಲನ್ನು ಸಲ್ಲಿಸಬಹುದು.  

೬೫.     ಸೇವಾ ಷರತ್ತುಗಳು :

೧.   ಯಾವುದೇ ನೌಕರನ ಸೇವೆಯ ಷರತ್ತುಗಳು, ಹಕ್ಕುಗಳು ಮತ್ತು ಬಾಧ್ಯತೆಗಳು ಸಂಘದ ಮಾರ್ಗಸೂಚಿಯಂತೆ ಮತ್ತು ಸಾಮಾನ್ಯ ಸಭೆಯು ಅನುಮೋದನೆಯಂತೆ ಸಾಮಾನ್ಯ ಸೇವಾ ನಿಯಮಗಳನ್ನು ಅನುಸರಿಸುತ್ತದೆ. ಈ ಸಾಮಾನ್ಯ ನಿಯಮಗಳು ಕೆಳಕಂಡ ವಿಷಯಗಳನ್ನು ವ್ಯಾಪ್ತಿಸಿರತಕ್ಕದ್ದು. ಅ)  ವೇತನ ಶ್ರೇಣಿಗಳ ನಿರ್ಧಾರ ಮತ್ತು ಭದ್ರತೆಗಳು. ಆ)  ವರ್ಗಾವಣೆ ಮತ್ತು ತರಬೇತಿ. ಇ)  ನೌಕರರಕಾರ್ಯನಿರ್ವಹಣೆ ಮತ್ತು ಶಿಸ್ತು ಪಾಲನೆ. ಈ)  ರಜೆ ಮತ್ತುಇತರ ಸವಲತ್ತುಗಳು. ಉ)  ರಾಜೀನಾಮೆ ಮತ್ತು ನಿವೃತ್ತಿ ಊ) ಅನುಚಿತ ವರ್ತನೆಗೆ ಶಿಸ್ತುಕ್ರಮ ಮತ್ತು ಶಿಕ್ಷೆ. ಋ)  ಬಡ್ತಿ ವೇತನಾಭಿವೃದ್ದಿ ಮತ್ತು ಸೇವಾ ಮುಕ್ತಾಯ. ಎ) ಅನಾರೋಗ್ಯ ಮತ್ತು ಇತರ ಸಂತಾಪನೀಯ ಸಂದರ್ಭದಲ್ಲಿ ನೀಡಬಹುದಾದ ವಿಶೇಷ ಸವಲತ್ತುಗಳು. #ಅನುಕ್ರಮಣಿಕೆ  

ಅಧ್ಯಾಯ-X. ಲೆಕ್ಕಪತ್ರಗಳ ನಿರ್ವಹಣೆ


೬೬.     ಲೆಕ್ಕಪತ್ರಗಳ ನಿರ್ವಹಣೆ :

ಸಂಘವು ಈ ಕೆಳಕಂಡ ಲೆಕ್ಕಪತ್ರಗಳ ಪುಸ್ತಕಗಳು, ದಾಖಲಾತಿಗಳು ಮತ್ತು ರಿಜಿಸ್ಟರುಗಳನ್ನು ನಿರ್ವಹಿಸತಕ್ಕದ್ದು. ೧.   ಸದಸ್ಯರ ರಿಜಿಸ್ಟರು ೨.   ಷೇರು ರಿಜಿಸ್ಟರು ೩.   ನಾಮ ನಿರ್ದೇಶಕ ರಿಜಿಸ್ಟರು ೪.   ರಶೀದಿ ಪುಸ್ತಕ ೫.   ವೋಚರ್ ಪುಸ್ತಕ ೬.   ನಗದು ಪುಸ್ತಕ ೭.   ಜನರಲ್ ಲೆಡ್ಜರ್ ೮.  ಸ್ಥಿರಾಸ್ತಿಗಳ ರಿಜಿಸ್ಟರ್ ೯.   ಬಂಡವಾಳ ಹೂಡಿಕೆ ರಿಜಿಸ್ಟರ್ ೧೦. ಸಾಲದ ರಿಜಿಸ್ಟರ್ ೧೧. ಅಡಮಾನ ರಿಜಿಸ್ಟರ್ ೧೨.  ಪೀಠೋಪಕರಣ, ಅಳವಡಿಕೆಗಳು ಮತ್ತುಇತರೆ ಸಾಧನ ಸಲಕರಣೆಗಳ ರಿಜಿಸ್ಟರ್ ೧೩. ಗ್ರಂಥಾಲಯ ರಿಜಿಸ್ಟರ್ ೧೪. ಸರ್ವ ಸದಸ್ಯರ ಸಭೆಯ ಕಾರ್ಯ ಕಲಾಪಗಳ ಪುಸ್ತಕ ೧೫. ನಿರ್ದೇಶಕರ ಮಂಡಳಿಯ ಕಾರ್ಯ ಕಲಾಪಗಳ ಪುಸ್ತಕ ೧೬. ಲೆಕ್ಕ ಪರಿಶೋಧನೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ ಅನುಪಾಲನಾ ರಿಜಿಸ್ಟರ್.  

೬೭.     ದಸ್ತಾವೇಜುಗಳು :

ಸಂಘವು ಈ ಕೆಳಕಂಡ ದಸ್ತಾವೇಜುಗಳನ್ನು ಇಡತಕ್ಕದ್ದು: ೧.   ಸದಸ್ಯತ್ವದ ಅರ್ಜಿ ೨.   ಸದಸ್ಯರ ರಾಜೀನಾಮೆ ಪತ್ರ ೩.   ಬಂಡವಾಳದ ಮೇಲಿನ ಷೇರುಗಳ ಹಿತಾಸಕ್ತಿಯ ವರ್ಗಾವಣೆಗೆ ಸಂಬಂಧಿಸಿದ ಅರ್ಜಿ. ೪.   ನೋಂದಣಿ ಪ್ರಾಧಿಕಾರಿಯ ಜೊತೆಗೆ ಮಾಡುವ ಪತ್ರ ವ್ಯವಹಾರ ೫.   ಸ್ವತ್ತಿನ ಹಸ್ತಾಂತರ ಪತ್ರ ೬.   ಮುಚ್ಚಳಿಕೆ ಮತ್ತು ಕರಾರು ಪತ್ರಗಳು ೭.   ಇಂದಿನವರೆಗೆ ತಿದ್ದುಪಡಿಗಳ ಸಹಿತ ನೋಂದಾಯಿತಉಪನಿಯಮದ ಪ್ರತಿ ೮.  ನೋಂದಣಿ ಪ್ರಮಾಣಪತ್ರ ೯.   ಪ್ರತಿಯೊಬ್ಬ ಸದಸ್ಯರ ಸಾಲದ ಅರ್ಜಿ ಮಂಜೂರಾತಿ ಮತ್ತು ದಸ್ತಾವೇಜುಗಳು ೧೦. ನಿಯತಕಾಲಿಕ ವಿವರಣ ಪಟ್ಟಿಗಳು ೧೧. ಲೆಕ್ಕಪರಿಶೋಧನೆ ಅನುಪಾಲನಗಳು ಮತ್ತು ಲೆಕ್ಕಪರಿಶೋಧನಾ ವರಧಿಗಳು ೧೨.  ಆಡಳಿತ ಮಂಡಳಿ ಸಭೆ ನೋಟೀಸ್ ಮತ್ತು ಕಾರ್ಯಸೂಚಿ ೧೩. ಸರ್ವ ಸದಸ್ಯರ ಸಭೆಯ ನೋಟೀಸ್ ಮತ್ತು ಕಾರ್ಯಸೂಚಿ ೧೪. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು ಇವುಗಳ ಪ್ರತಿಗಳು ೧೫. ಸಂಘಕ್ಕೆ ಸಂಬಂಧಪಟ್ಟ ನಿಬಂಧಕರು ಅಥವಾ ಲೆಕ್ಕ ಪರಿಶೋಧನಾ ನಿರ್ದೇಶಕರು ಅಥವಾ ಯಾರೇ ಇತರರು ಹೊರಡಿಸಿದ/ನೀಡಿದ ನಿರ್ದೇಶನಗಳನ್ನು ಒಳಗೊಂಡ ಕಡತ.  

೬೮.     ಲೆಕ್ಕಪರಿಶೋಧನೆ:

(i)  ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ ೬೩ ರನ್ವಯ ಸರ್ವಸದಸ್ಯರ ಸಭೆಯಲ್ಲಿ ಲೆಕ್ಕ ಪರಿಶೋಧನಾ ನಿರ್ದೇಶಕರು ನಿಗದಿಪಡಿಸಿದ ಪಟ್ಟಿಯಲ್ಲಿನ ಯಾವುದಾದರೊಬ್ಬ ಲೆಕ್ಕ ಪರಿಶೋಧಕರನ್ನು ಅಥವಾ ಲೆಕ್ಕ ಪರಿಶೋಧನಾ ಸಂಸ್ಥೆಯನ್ನು ಸಂಘದ ಲೆಕ್ಕಪರಿಶೋಧನೆ ಮಾಡಲು ಸಹಕಾರ ವರ್ಷದ ಅವಧಿಗೆ ನೇಮಿಸಿಕೊಳ್ಳತಕ್ಕದ್ದು. (ii) ಆಡಳಿತ ಮಂಡಳಿಯು ವಾರ್ಷಿಕ ಆರ್ಥಿಕ ತಃಖ್ತೆಗಳನ್ನು ಅಂದರೆ ಜಮಾ-ಖರ್ಚು, ಲಾಭ-ನಷ್ಟ ಮತ್ತು ಆಸ್ತಿ-ಜವಾಬ್ದಾರಿ ತಃಖ್ತೆಗಳನ್ನು ಹಾಗು ಅದಕ್ಕೆ ಸಂಬಂಧಿಸಿದ ಷೆಡ್ಯೂಲ್‌ಗಳನ್ನು ಮತ್ತು ಆರ್ಥಿಕ ತಃಖ್ತೆಗಳನ್ನು ತಯಾರು ಮಾಡಿ ಲೆಕ್ಕ ಪರಿಶೋಧಕರು ಅಥವಾ ಲೆಕ್ಕ ಪರಿಶೋಧನಾ ಸಂಸ್ಥೆಗೆ ಸಹಕಾರ ವರ್ಷವು ಮುಗಿದ ೩೦ ದಿನಗಳೊಳಗಾಗಿ ಸಲ್ಲಿಸತಕ್ಕದ್ದು. (iii)     ಸಂಘದ ಲೆಕ್ಕ ಪತ್ರಗಳನ್ನು ತಪಾಸಣೆ ಮಾಡಲು ವಾರ್ಷಿಕ ಮಹಾ ಸಭೆಯಲ್ಲಿ ಪ್ರತಿ ವರ್ಷವೂ ನಿಗದಿಪಡಿಸಿದ ಸಂಭಾವನೆಯ ಮೇಲೆ ಆಂತರಿಕ ಲೆಕ್ಕತಪಾಸಿಗರನ್ನು, ನಿರ್ದೇಶಕ ಮಂಡಳಿಯವರು ಅರ್ಹರಾದವರನ್ನು ನೇಮಕ ಮಾಡಿಕೊಳ್ಳುವುದು. (iv) ಆಂತರಿಕ ಲೆಕ್ಕ ತಪಾಸಿಗರ ಅರ್ಹತೆಗಳು: ಉಪವಿಧಿಗಳಡಿಯಲ್ಲಿ ನೇಮಕ ಮಾಡಿಕೊಳ್ಳುವ ಆಂತರಿಕ ಲೆಕ್ಕ ತಪಾಸಿಗರು ಕನಿಷ್ಟ ಪಕ್ಷ ಈ ಕೆಳಗಿನ ಅರ್ಹತೆಗಳಲ್ಲಿ ಒಂದನ್ನಾದರೂ ಹೊಂದಿರತಕ್ಕದ್ದು. ೧)   ಸಹಕಾರ ಮತ್ತು ಸಹಕಾರಿ ಲೆಕ್ಕದಲ್ಲಿ ಡಿಪ್ಲೋಮೋ ೨)   ಚಾರ್ಟಡ್‌ಅಕೌಂಟೆಂಟ್ ೩)   ಸಹಕಾರಇಲಾಖೆಯ ಮತ್ತು ಲೆಕ್ಕಪರಿಶೋಧನಾಇಲಾಖೆಯ ನಿವೃತ್ತ ಸಹಾಯಕ, ಉಪಸಂಯುಕ್ತ/ನಿಬಂಧಕರ, ಹಾಗೂ ಲೆಕ್ಕ ಪರಿಶೋಧನಾ ನಿರ್ದೇಶಕರು.  

(v)        ಆಂತರಿಕ ಲೆಕ್ಕ ತಪಾಸಿಗರ ಕರ್ತವ್ಯಗಳು:

೧)   ಪ್ರತಿ ತ್ರೈಮಾಸಿಕ ಅವಧಿಗೆ ಸಂಘದ ಲೆಕ್ಕ ಪತ್ರಗಳನ್ನು ತಪಾಸಣೆ ಮಾಡುವುದು ಮತ್ತು ನಿರ್ದೇಶಕ ಮಂಡಳಿ ನಿಗದಿಪಡಿಸಿದ ನಮೂನೆಯಲ್ಲಿ ತಮ್ಮ ಅಭಿಪ್ರಾಯದೊಂದಿಗೆ ತಪಾಸಣಾ ವರದಿಯನ್ನು ಆಡಳಿತ ಮಂಡಳಿಯ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡುವುದು. ಸೂಚನೆ: ಈ ಉಪವಿಧಿಗಳ ಉದ್ದೇಶಕ್ಕಾಗಿ ವಾರ್ಷಿಕ ವರದಿಯಲ್ಲಿ ಸೂಚನೆಯನ್ನು ನೀಡಿದರೆ ಸಾಕಾಗುತ್ತದೆ. ೨)   ನಿಬಂಧಕರು ಆಗಿಂದಾಗ್ಗೆ ನಿಗದಿಗೊಳಿಸುವ ಮಾದರಿಯಲ್ಲಿ ಸಂಘದ ಬಾಕಿ ಮತ್ತು ಸಂಯಾತ್ಮಕ ಸಾಲಗಳನ್ನು ತೀರ್ಮಾನಿಸುವುದು. ೩)   ಪ್ರತಿ ವರ್ಷ ಮಾರ್ಚ್ ೩೧ ನೇ ತಾರೀಖಿಗೆ ಅಂತ್ಯವಾಗುವ ಹಿಂದಿನ ವರ್ಷದ ಸಂಘದ ಕಾರ್ಯಕಾರಿ ಬಗ್ಗೆ ಮತ್ತು ಆ ಸಾಲಿನ ಆಸ್ತಿ ಜವಾಬ್ದಾರಿ ಪಟ್ಟಿಯ ಮೇಲೆ ಒಂದು ಸಂಕ್ಷಿಪ್ತ ವರದಿಯನ್ನು ಪ್ರತಿ ವರ್ಷವೂ ಮೇ ತಿಂಗಳ ೧೪ನೇ ತಾರೀಖು ಅಥವಾ ಅದಕ್ಕೂ ಮುಂದೆ ಸಿದ್ಧಪಡಿಸಿ ಅವುಗಳನ್ನು ಆಡಳಿತ ಮಂಡಳಿಗೆ ವಾರ್ಷಿಕ ಸದಸ್ಯರ ಸಭೆಯ ಮುಂದೆ ಮಂಡಿಸಲು ಅನುಕೂಲವಾಗುವಂತೆ ನೀಡುವುದು. ೪)   ನೇಮಕವಾದ ಲೆಕ್ಕ ತಪಾಸಿಗರು ತಮ್ಮ ನೇಮಕವಾದ ದಿನಾಂದಿಂದ ಮೂರು(೩) ತಿಂಗಳೊಳಗಾಗಿ ಸಂಘದ ಲೆಕ್ಕಗಳನ್ನು ತಪಾಸಣೆ ಮಾಡಿ ತಮ್ಮ ಪ್ರಧಾನ ತಪಾಸಣಾ ವರದಿಯನ್ನು ಮತ್ತು ಮುಂದಿನ ತಪಾಸಣಾ ವರದಿಗಳನ್ನು ಸಂಬಂಧಪಟ್ಟ ಮಂಡಳಿಗೆ ನೀಡದೆ ಇದ್ದಲ್ಲಿ ಆಡಳಿತ ಮಂಡಳಿಯ ಲೆಕ್ಕ ತಪಾಸಿಗರಿಗೆ ಸೂಕ್ತ ಸೂಚನೆ ನೀಡಿದ ನಂತರಅವರನ್ನು ಆ ಸ್ಥಾನದಿಂದತೆಗೆದು ಹಾಕಬಹುದು. ಮತ್ತುಅವರ ಸ್ಥಾನದಲ್ಲಿ ಅಗತ್ಯ ಅರ್ಹತೆಯುಳ್ಳವರನ್ನು ತೆಗೆದು ಹಾಕಿದ ಅವಧಿಗೆ ಸರ್ವ ಸದಸ್ಯರ ಸಭೆಯಲ್ಲಿ ಮಂಜೂರು ಮಾಡಿದ ಸಂಭಾವನೆಗೆ ಮೀರಿದಂತೆ ಹೊಸ ಲೆಕ್ಕ ತಪಾಸಿಗರನ್ನು ನೇಮಕ ಮಾಡಿ ಕೊಳ್ಳಬಹುದು.  

(vi)       ಮಧ್ಯಾಂತರದಲ್ಲಿ ತೆರವಾದ ಸ್ಥಾನಗಳು:

ಲೆಕ್ಕ ತಪಾಸಿಗರ ಮರಣ, ರಾಜೀನಾಮೆ ಅಥವಾ ಇನ್ನಾವುದೇ ಕಾರಣದಿಂದ ಆ ಸಾಲಿನಲ್ಲಿ ತೆರವಾಗುವ ಸ್ಥಾನಗಳಿಗೆ ನಿರ್ದೇಶಕ ಮಂಡಳಿಯು ನೇಮಕ ಮಾಡಬೇಕು. ಲೆಕ್ಕ ತಪಾಸಿಗರ ಅವಧಿ ಮುಗಿಯುವುದಕ್ಕೆ ಮೊದಲೇ ತನ್ನ ಸ್ಥಾನಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಯವರಿಗೆ ಸಲ್ಲಿಸಿ ಅದು ಆಡಳಿತ ಮಂಡಳಿಯಿಂದ ಅಂಗೀಕೃತವಾದರೆ ಆ ಸ್ಥಾನವು ತೆರವಾಗಿದೆಯೆಂದು ಭಾವಿಸತಕ್ಕದ್ದು. #ಅನುಕ್ರಮಣಿಕೆ  

ಅಧ್ಯಾಯ-XI. ನಿವ್ವಳ ಲಾಭಾಂಶದ ವಿತರಣೆ :


೬೯.      ನಿವ್ವಳ ಲಾಭಾಂಶದ ವಿತರಣೆ :

ಕರ್ನಾಟಕ ಸಹಕಾರ ಸಂಘಗಳ ನಿಯಮಗಳು ೧೯೬೦ರ ೨೨ನೆಯ ನಿಯಮದಲ್ಲಿ ಅವಕಾಶ ಮಾಡಿರುವ ರೀತಿಯಲ್ಲಿ ಸಂಘದ ನಿವ್ವಳ ಲಾಭವನ್ನು ನಿರ್ಧರಿಸತಕ್ಕದ್ದು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಕಲಂ ೫೭ ರಂತೆ ಸಂಘದ ನಿವ್ವಳ ಲಾಭವನ್ನು ಕೆಳಗೆ ತಿಳಿಸಿದಂತೆ ಸಾಮಾನ್ಯ ಸಭೆಯಲ್ಲಿ ಹಂಚಿಕೆ ಮಾಡತಕ್ಕದ್ದು. ೧.   ಕಾಯ್ದೆ ಕಲಂ ೫೭(೨) ರ ರೀತ್ಯಾ ಯಾವುದೇ ಸಾಲಿನಲ್ಲಿ ತನ್ನ ನಿವ್ವಳ ಲಾಭದಿಂದ ಶೇಕಡ ೨೫ಕ್ಕೆ ಕಡಿಮೆಯಿಲ್ಲದ ಮೊಬಲಗನ್ನು ಮೀಸಲು ನಿಧಿಗೆ ವರ್ಗಾಯಿಸತಕ್ಕದ್ದು. ೨.   ಕಾಯ್ದೆ ಕಲಂ ೫೭(೨-ಎ) ರನ್ವಯ ಮತ್ತು ನಿಯಮ ೨೦ ರಲ್ಲಿ ಸೂಚಿಸಿರುವ ದರದಂತೆ ಸಂಘವು ನಿವ್ವಳ ಲಾಭದ ಉಳಿದ ಶಿಲ್ಕಿನಿಂದ ಕರ್ನಾಟಕರಾಜ್ಯ ಸಹಕಾರಿ ಮಹಾಮಂಡಳ, ಬೆಂಗಳೂರು, ಇವರು ನಿರ್ವಹಿಸುವ ಶಿಕ್ಷಣ ನಿಧಿಗೆ ನೀಡತಕ್ಕದ್ದು. ೩.   ಕಾಯ್ದೆ ಕಲಂ ೫೭(೨-ಬಿ) ರ ರೀತ್ಯಾ ಸಹಕಾರ ಶಿಕ್ಷಣ ನಿಧಿಗೆ ವಂತಿಗೆಯನ್ನು ನೀಡಲು ಸಂಘವು ವಿಫಲವಾದಲ್ಲಿ ತನ್ನ ಸದಸ್ಯರಿಗೆ ಲಾಭಾಂಶವನ್ನು ಪಾವತಿ ಮಾಡತಕ್ಕದ್ದಲ್ಲ. ೪.   ಕಾಯ್ದೆ ಕಲಂ ೫೭(೩) ರ ರೀತ್ಯಾ ನಂತರ ಉಳಿಯುವ ನಿವ್ವಳ ಲಾಭದ ಶಿಲ್ಕನ್ನು ಈ ಕೆಳಗಿನ ಎಲ್ಲಾ ಅಥವಾ ಯಾವುದಾದರೂ ಉದ್ದೇಶಗಳಿಗೆ ಉಪಯೋಗಿಸಬಹುದು. ಅವುಗಳೆಂದರೆ:-
  1. ಬೆಲೆ ಏರು ಪೇರು ನಿಧಿಗೆ ಶೇಕಡ ೧೦ರಷ್ಟು.
  2. ಶೇಕಡ ೧೦% ಕ್ಕೆ ಕಡಿಮೆ ಇಲ್ಲದಂತೆ ಕರಡು ಸಾಲದ (ಹೋಕುಬಾಕಿ) ನಿಧಿಗೆ.
iii. ಶೇಕಡ ೧೫% ಕ್ಕೆ ಮೀರದಂತೆ ಕಟ್ಟಡ ನಿಧಿಗೆ
  1. ಶೇಕಡ ೧೦% ಕ್ಕೆ ಮೀರದಂತೆ ಸಾಮಾನ್ಯಕ್ಷೇಮ ನಿಧಿಗೆ
  2. ಶೇಕಡ ೫% ಕ್ಕೆ ಮೀರದಂತೆ ಸಿಬ್ಬಂದಿ ಕ್ಷೇಮ ನಿಧಿಗೆ
  3. ಶೇಕಡ ೫% ಕ್ಕೆ ಮೀರದಂತೆ ಜ್ಯುಬಿಲಿ ನಿಧಿಗೆ
vii. ಶೇಕಡ ೧೦% ಕ್ಕೆ ಮೀರದಷ್ಟು ಮೊಬಲಗನ್ನು ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆಗಳಿಗೆ.   ೫.   ಸಂಘದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ನೌಕರರಿಗೆಅವರ ೨ ತಿಂಗಳ ವೇತನಕ್ಕೆ ಮೀರದಷ್ಟು ಬೋನಸ್‌ನ್ನು ಕಾಯ್ದೆಯಲ್ಲಿನ ಅವಕಾಶಗಳಂತೆ ಪಾವತಿಸಬಹುದಾಗಿದೆ. ೬.   ಕಾಯ್ದೆ ಕಲಂ ೫೭(೪) ರಂತೆ ಈ ಮೇಲ್ಕಂಡ ಬಾಬ್ತುಗಳಿಗೆ ಹಂಚಿಕೆ ಮಾಡಿದ ನಂತರ ಲಭ್ಯವಾಗುವ ಒಟ್ಟು ನಿವ್ವಳ ಲಾಭದಲ್ಲಿನ ಉಳಿದ ಶಿಲ್ಕಿನಿಂದ ಸದಸ್ಯರಿಗೆ ಅವರು ಸಂಘಕ್ಕೆ ಪಾವತಿ ಮಾಡಿರುವ ಷೇರು ಬಂಡವಾಳದ ಮೇಲೆ ಶೇಕಡ ೨೫ಕ್ಕೆ ಮೀರದಷ್ಟು ಲಾಭಾಂಶವನ್ನು ಪಾವತಿ ಮಾಡಬಹುದು. ೭.   ಉಳಿದ ಮೊಬಲಗನ್ನು ಸಂಘದ ಮೀಸಲು ನಿಧಿಗೆ ವರ್ಗಾಯಿಸತಕ್ಕದ್ದು.  

೭೦.     ಮೀಸಲು ನಿಧಿಯನ್ನು ತೊಡಗಿಸುವುದು:-

ಹಿಂದಿನ ಮಾರ್ಚ್ ೩೧ ರಂದುಇದ್ದಂತಹ ಮೀಸಲು ನಿಧಿಯನ್ನು ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಿದಂತೆ, ಯಾವುದೇ ಸಹಕಾರ ಬ್ಯಾಂಕ್‌ಗಳಲ್ಲಿ, ಷೆಡ್ಯೂಲ್ ಬ್ಯಾಂಕ್‌ಗಳಲ್ಲಿ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಹಾಗೂ ಮಾನ್ಯತೆ ಪಡೆದ ಭದ್ರತಾ ಪತ್ರಗಳಲ್ಲಿ ಠೇವಣಿ ಮಾಡಬಹುದು.   #ಅನುಕ್ರಮಣಿಕೆ  

ಅಧ್ಯಾಯ-XII. ಇತರೆ


೭೧.     ಸದಸ್ಯರು ತನ್ನ ಸ್ವಂತ ಖಾತೆಯ ಮಾಹಿತಿ ಪಡೆಯುವ ಹಕ್ಕುಗಳು:

(i)  ಕಾಯಿದೆಯ ಕಲಂ ೧೯-ಎ ಅನ್ವಯ ಸಂಘದ ಪ್ರತಿಯೊಬ್ಬ ಸದಸ್ಯರಿಗೆ ಅವರೊಂದಿಗಿನ ವ್ಯವಹಾರದ ಬಗ್ಗೆ ಸಂಘದಲ್ಲಿ ನಿರ್ವಹಿಸಿರುವ ಪುಸ್ತಕಗಳು, ಮಾಹಿತಿ ಮತ್ತು ಲೆಕ್ಕ ತಃಖ್ತೆಗಳ ಪರಿಶಿಲನೆಗೆ ಮುಕ್ತ ಅವಕಾಶವಿರತಕ್ಕದ್ದು. (ii) ಸಂಘದ ಕೆಲಸದ ವೇಳೆಯಲ್ಲಿ ಸದಸ್ಯರು ತಮ್ಮ ಖಾತೆಗಳ ಪರಿಶೀಲನೆಯ ಜೊತೆಗೆ ಸಂಘದಲ್ಲಿ ನಿರ್ವಹಿಸಿರುವ ದಾಖಲೆಗಳ ಪ್ರತಿಗಳನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಅಂತಹ ಸದಸ್ಯರು ನಿಯಮದಲ್ಲಿ ನಮೂದಿಸಿರುವ ದಾಖಲೆಗಳನ್ನು ಪಡೆಯಲು ನಿಯಮಗಳಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಪಾವತಿಸಿ ಪಡೆಯತಕ್ಕದ್ದು.

೭೨.     ಉಪನಿಬಂಧನೆಗಳ ತಿದ್ದುಪಡಿ ವಿಧಾನ :

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಿಗೊಳಪಟ್ಟು ಸಂಘದ ಉಪ ನಿಯಮಗಳನ್ನು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಹಾಜರಿದ್ದ ಸದಸ್ಯರ ಪೈಕಿ ಕನಿಷ್ಟ ೨/೩ (ಮೂರನೇ ಎರಡು) ರಷ್ಟು ಬಹುಮತ ಬಂದಲ್ಲಿ ತಿದ್ದುಪಡಿ ಮಾಡಬಹುದು. ಆದರೆ ಈ ತಿದ್ದುಪಡಿ ಸೂಚನಾ ಪತ್ರವನ್ನು ಸದಸ್ಯರಿಗೆ ಹದಿನೈದು ದಿವಸಗಳ ಮುಂಚಿತವಾಗಿ ಕೊಟ್ಟಿರಬೇಕು. ಉಪ ನಿಯಮಗಳ ಸೇರ್ಪಡೆಗಳು, ರದ್ದತಿಗಳು ಮತ್ತು ತಿದ್ದುಪಡಿಗಳು ಕಾರ್ಯವ್ಯಾಪ್ತಿ ನಿಬಂಧಕರವರಿಂದ ನೊಂದಣಿಯಾದ ದಿನದಿಂದ ಜಾರಿಯಲ್ಲಿ ಬರುವುವು.  

೭೩.     ರಹಸ್ಯಗಳನ್ನು ಕಾಪಾಡುವುದು :

ಆಡಳಿತ ಮಂಡಳಿಯ ಪ್ರತಿಯೊಬ್ಬ ಸದಸ್ಯನು ಮತ್ತು ಸಂಘದ ಪ್ರತಿಯೊಬ್ಬ ನೌಕರನು ಕರ್ತವ್ಯಕ್ಕೆ ಹಾಜರಾಗುವ ಮೊದಲು ನಿರ್ದೇಶಕ ಮಂಡಳಿಯು ನಿಗಧಿಪಡಿಸಿದ ನಮೂನೆಯಲ್ಲಿ ಸದಸ್ಯರೊಡನೆ ವ್ಯವಹರಿಸುವುದನ್ನು ಮತ್ತು ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಗೌಪ್ಯವಾಗಿಡುವೆನೆಂದು ಘೋಷಣಾ ಪತ್ರವನ್ನು ಕೊಡತಕ್ಕದ್ದು ಮತ್ತು ತನ್ನ ಕರ್ತವ್ಯ ನಿರ್ವಹಣೆ ಸಮಯದಲ್ಲಿ ತಿಳುವಳಿಕೆಗೆ ಬರುವಂತಹ ವಿಷಯಗಳನ್ನು ಬಹಿರಂಗ ಪಡಿಸತಕ್ಕದ್ದಲ್ಲ. ನಿರ್ದೇಶಕ ಮಂಡಳಿಯುವರು ಅಥವಾ ಇತರೆ ಅಧಿಕಾರವುಳ್ಳವರು ಇಚ್ಛಿಸಿದಾಗ ಅಥವಾ ಉಪವಿಧಿಗಳಲ್ಲಿ ಅವಕಾಶವಿದ್ದಾಗ ಮಾತ್ರ ಅಂತಹ ಸದಸ್ಯನು ಮತ್ತು ಉದ್ಯೋಗಿಯು ಅಂತಹ ವಿಷಯಗಳನ್ನು ತಿಳಿಸುವುದು.  

೭೪.      ಇತರ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯತ್ವ :

ಸಂಘವು ಕೆಳಕಂಡ ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಪಡೆಯಬಹುದು. (i)  ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಬೆಂಗಳೂರು. (ii) ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿಯಮಿತ, ಬೆಂಗಳೂರು. (iii)     ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾ ಮಂಡಳಿ ನಿಯಮಿತ, ಬೆಂಗಳೂರು. (iv) ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರ ಸಂಘಕ್ಕೆ ಅನುಕೂಲಕರವಾದ ಉದ್ದೇಶವನ್ನು ಹೊಂದಿರುವ ಇತರ ಸಂಸ್ಥೆಗಳು.

೭೫.     ಸಾಮಾನ್ಯ ಮುದ್ರೆ:

ಸಂಘ ಒಂದು ಸಾಮಾನ್ಯ ಮುದ್ರೆಯನ್ನು ಹೊಂದಿರತಕ್ಕದ್ದು, ಅಧ್ಯಕ್ಷರು ಹಾಗು ಕಾರ್ಯದರ್ಶಿಯವರು ಸಹಿ ಮಾಡಿರುವ ದಾಖಲೆಗಳಿಗೆ ಸಂಘದ ಸಾಮಾನ್ಯ ಮುದ್ರೆಯನ್ನು ಹಾಕತಕ್ಕದ್ದು.

೭೬.     ಉಪನಿಬಂಧನೆಗಳ ಪ್ರಕಾರ ಮುನ್ಸೂಚನೆ:

ಷೇರುದಾರರು, ಠೇವಣಿದಾರರು ಮತ್ತುಇತರಗ್ರಾಹಕರು ಸಂಘಕ್ಕೆ ಕೊಟ್ಟಿರುವ ಅವರ ವಿಳಾಸಕ್ಕೆ ಸಂಘದವರು ಮುನ್ಸೂಚನೆ ಮತ್ತು ಇತರ ಎಲ್ಲಾ ಸೂಚನಾ ಪತ್ರಗಳನ್ನು ಕೊಟ್ಟಿದ್ದರೆ ಅಥವಾ ಅಂಚೆ ಮೂಲಕ ಕಳುಹಿಸಿದ್ದರೆ ಅಂತಹ ಪತ್ರಗಳು ತಲುಪಿವೆ ಎಂದು ಭಾವಿಸತಕ್ಕದ್ದು. ವಿಳಾಸದಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ಅಂತಹವರು ಕೂಡಲೇ ಸಂಘಕ್ಕೆ ತಿಳಿಸುವುದು ಅವರ ಆಧ್ಯ ಕರ್ತವ್ಯ.  

೭೭.      ಸಂಕೀರ್ಣ:

ಈ ಉಪನಿಯಮಗಳಲ್ಲಿ ನಮೂದಿಸದೇ ಇರುವ ಯಾವ ವಿಷಯಗಳನ್ನಾದರೂ ಸಹಕಾರ ಸಂಘಗಳ ಕಾಯಿದೆ ೧೯೫೯ ರ ಹಾಗೂ ಸಹಕಾರ ಸಂಘಗಳ ನಿಯಮಗಳು ೧೯೬೦ ರ ನಿಯಮಗಳಿಗನುಗುಣವಾಗಿ ತೀರ್ಮಾನಿಸತಕ್ಕದ್ದು ಮತ್ತು ಸಹಕಾರ ಸಂಘಗಳ ನಿಬಂಧಕರಿಂದ ಸಲಹೆ ಪಡೆಯತಕ್ಕದ್ದು.
#ಅನುಕ್ರಮಣಿಕೆ
     

ಪ್ರವರ್ತಕರುಗಳು


ಕ್ರ.ಸಂ  ಪ್ರವರ್ತಕರ ಹೆಸರು ಸಹಿ
೧. ವೀರಕ್ಯಾತಯ್ಯ ಎನ್  
೨. ನೇತ್ರಾವತಿ  
೩. ರಜಾಕ್ ಸಾಬ್ ಎಂ ಟೇಲರ್  
೪. ಮಂಜುನಾಥ ಬಿ ಸಿ  
೫. ರಾಘವೇಂದ್ರ ಜನಿವಾರ  
೬. ಯಶವಂತಕುಮಾರ್  
೭. ಮೋಹನ್ ಕುಮಾರ್ ಕೆ ಎನ್  
೮. ಗಂಗಾಧರ ಹೆಚ್ ಆರ್  
೯. ನಾಗೇಶ್ ಹೆಚ್ ಕೆ  
೧೦. ಶಿವಾಜಿ ವಿ ಮಾನೆ  
೧೧. ಸಂಗೀತಾ ಸುತಾರ್  
೧೨. ರವಿ ಗಾದ್ರಿ  
೧೩. ವೆಂಕಣ್ಣ ಕಂಬಾರ್  
೧೪. ಪತ್ರಪ್ಪ ಅಂಗಡಿ  
೧೫. ಕಂಡ್ಯಪ್ಪ  
೧೬. ಆದಪ್ಪ  
೧೭. ದತ್ತಾತ್ರೇಯಾ ಪೋಲಿಸ್ ಪಾಟೀಲ್  
೧೮. ಬೀರಲಿಂಗ  
೧೯. ಕಿರಣ್ ಸುರಂಜನ್  
#ಅನುಕ್ರಮಣಿಕೆ

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು