Sunday, July 12, 2026

ಸಹಕಾರ ಸಂಘದ 8ನೇ ವಾರ್ಷಿಕ ಸರ್ವಸದಸ್ಯರ ಸಭೆ

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (ರಿ)

Reg No:OTS-2/293/HOT/52921/2018-19 Date: 14-02-2020

#41/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097

Email: ksecsb.kar@gmail.com          ಸಂಘದ ದೂರವಾಣಿ ಸಂಖ್ಯೆ: 8867360940

ಮಂಜುನಾಥ ಬಿ ಸಿ                                          ಖಂಡೆಪ್ಪ                                                       ಆನಂದ ಹೆಚ್‌ ಎನ್

ಅಧ್ಯಕ್ಷರು- 9900449861                       ಉಪಾಧ್ಯಕ್ಷರು- 9663642397                    ಮುಖ್ಯಕಾರ್ಯನಿರ್ವಾಹಕ- 9916737293

       

ಸಂಖ್ಯೆ: ಕರಾಅನೌಸಸನಿ/ವಾಸ/2026-27/232                                 ದಿನಾಂಕ: 12-07-2026.

 

ಸಭಾ ಸೂಚನಾ ಪತ್ರ

 

ವಿಷಯ: 8ನೇ ಸರ್ವಸದಸ್ಯರ ಸಭೆಯನ್ನು ಆಯೋಜಿಸಿರುವ ಕುರಿತು.

 

ಉಲ್ಲೇಖ: ಆಡಳಿತ ಮಂಡಲಿಯ ಸಭೆ ಸಂಖ್ಯೆ 3. ನಿರ್ಣಯ ಸಂಖ್ಯೆ:    7. ದಿನಾಂಕ: 30.06.2026.

**********

ಸದರಿ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಸದಸ್ಯರಿಗೆ ತಿಳಿಯಪಡಿಸುತ್ತಿರುವುದೇನೆಂದರೆ, ಸಹಕಾರ ಸಂಘದ 8ನೇ ಸರ್ವ ಸದಸ್ಯರ ಸಭೆಯನ್ನು ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಬಿ ಸಿ ರವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ನಡೆಸಲು ಉಲ್ಲೇಖಿತ ಆಡಳಿತ ಮಂಡಳಿಯ 3ನೇ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದರಿ ಸಭೆಗೆ ಸಂಘದ ಎಲ್ಲಾ ಸದಸ್ಯರು ತಪ್ಪದೆ ಹಾಜರಾಗಬೇಕೆಂದು ತಮ್ಮಲ್ಲಿ ಕೋರಲಾಗಿದೆ.

ಸಭಾ ದಿನಾಂಕ: 09-08-2026, ಭಾನುವಾರ.

ಸಮಯ: ಬೆಳಗ್ಗೆ 10:00 ಗಂಟೆ.

ಸ್ಥಳ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಸಭಾಂಗಣ, ಬೆಂಗಳೂರು-560020.

 

ಸಭಾ ಚರ್ಚಾರ್ಹ ವಿಷಯಗಳು ಮತ್ತು ಅನುಮೋದನೆಗೆ ಕೋರಿಕೆಗಳು:

ಪ್ರಮುಖ ವರದಿಗಳನ್ನು ಮಂಡಿಸಿ, ಪರಿಯಾಲೋಚನೆಗೆ ಅವಕಾಶ ಕಲ್ಪಿಸಿ ಅನುಮೋದನೆಗೆ ಕೋರಲಾಗುವುದು.

1. 7ನೇ ಸರ್ವಸದಸ್ಯರ ಸಭಾ ನಡಾವಳಿ.

2. 8ನೇ ಸರ್ವ ಸದಸ್ಯರ ಸಭಾ ಸೂಚನಾ ಪತ್ರವನ್ನು ಓದುವುದು ಮತ್ತು ದಾಖಲಿಸಲು ಅನುಮೋದನೆ ಪಡೆಯುವುದು.

3. 2025-26ನೇ ಸಾಲಿನ ಆಡಳಿತ ವರದಿ.

4. ಸಹಕಾರ ಸಂಘದ 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

5. 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿಸಿದ ಕ್ರಮವಿಡಬೇಕಾದ ಕಂಡಿಕೆಗೆ ಸಿದ್ಧಪಡಿಸಲಾದ ಅನುಪಾಲನಾ ವರದಿ.

6. 2026-27ನೇ ಸಾಲಿನ ಪೂರ್ಣ ವರ್ಷದ ಮುಂಗಡ ಪತ್ರ.

7. 2025-26ನೇ ಸಾಲಿನ ಸಹಕಾರ ಸಂಘದ ನಿವ್ವಳ ಲಾಭ ವಿಲೇವಾರಿಯ ಪ್ರಸ್ಥಾವನೆ.

8. ಚಾಲ್ತಿಯಲ್ಲಿರುವ ಸಾಲದ ಮಂಜೂರಾತಿ, ಆವರ್ತಕ-ನಿಶ್ಚಿತ-ಉಳಿತಾಯ ಠೇವಣಿಗಳ ಹಾಗೂ ಸದಸ್ಯರ ಮರಣೋತ್ತರ ಪರಿಹಾರ ನಿಧಿ  ನಿಯಮಾವಳಿಗಳ ಮುಂದುವರಿಕೆಗೆ ನಿರ್ಣಯಗಳ ಮಂಡನೆ ಮತ್ತು ಅನುಮೋದನೆ ಪಡೆಯುವುದು.

9. ಅಧ್ಯಕ್ಷರ ಅನುಮತಿಯ ಮೇರೆಗೆ ಸದಸ್ಯರಿಂದ ಸಲ್ಲಿಕೆಯಾಗುವ ಪ್ರಶ್ನೆಗಳ/ಸಲಹೆಗಳ ಮಂಡನೆ.

10. ಅಧ್ಯಕ್ಷರಿಂದ ಮಂಡಿಸುವ ಪ್ರಮುಖ ನಿರ್ಣಯಗಳು.


ಸೂಚನೆಗಳು:

1. ಸಭೆಗೆ ಬರುವ ಸದಸ್ಯರು ಕಡ್ಡಾಯವಾಗಿ ಸಂಘದ ಸದಸ್ಯತ್ವ ಗುರುತಿನ ಚೀಟಿ ತರಬೇಕು. ಗುರುತಿನ ಚೀಟಿ ಇಲ್ಲದಿದ್ದರೆ ₹50 ಪಾವತಿಸಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ನೀಡಿ ಹೊಸ ಗುರುತಿನ ಚೀಟಿ ಪಡೆಯಬೇಕು. ಷೇರು ಪ್ರಮಾಣ ಪತ್ರ ಕಳೆದುಕೊಂಡಿದ್ದರೆ ₹50 ಪಾವತಿಸಿ ನಕಲಿ ಪ್ರಮಾಣ ಪತ್ರ ಪಡೆಯಬಹುದು. ಗುರುತಿನ ಚೀಟಿ ಇಲ್ಲದವರಿಗೆ ಸಭೆಗೆ ಪ್ರವೇಶವಿಲ್ಲ.

2. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡ 75 ಅಥವಾ ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕವನ್ನು ನೀಡುತ್ತಿದ್ದು, ನಿಗದಿತ ಅರ್ಜಿ ಹಾಗೂ ದಾಖಲೆಗಳನ್ನು ಸದಸ್ಯರು ಸಲ್ಲಿಸುವುದು. ಪ್ರೋತ್ಸಾಹಕವನ್ನು ಪಡೆಯಲು ಕಡ್ಡಾಯವಾಗಿ  ಸದಸ್ಯರು ಪ್ರೋತ್ಸಾಹಕ್ಕೆ ಅರ್ಹವಾದ ಮಕ್ಕಳೊಂದಿಗೆ ಸಭೆಗೆ ಹಾಜರಾಗಬೇಕು. ಪ್ರೋತ್ಸಾಹಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31.07.2026.

3. ಸದಸ್ಯರು ಸಲಹೆ, ಸೂಚನೆಗಳು ಅಥವಾ ಪ್ರಶ್ನೆಗಳನ್ನು ದಿನಾಂಕ 01-08-2026 ಸಂಜೆ 5:30 ಒಳಗಾಗಿ ಲಿಖಿತ ರೂಪದಲ್ಲಿ / ಮಿಂಚಂಚೆ ಮೂಲಕ ಕಛೇರಿಗೆ ಕಳುಹಿಸಬೇಕು. ತಡವಾಗಿ ಲಭ್ಯವಾಗುವ ಸಲಹೆಗಳನ್ನು ಅಥವಾ  ಸೂಚನೆಗಳನ್ನು ಅಥವಾ ಪ್ರಶ್ನೆಗಳನ್ನು ಅಮಾನ್ಯ ಎಂದು ಪರಿಗಣಿಸಲಾಗುವುದು.

4. ದಿನಾಂಕ 08-08-2026 ಶನಿವಾರ ಸಂಜೆಯಿಂದ 09-08-2026 ಭಾನುವಾರ ಸಂಜೆಯ ತನಕ ಬೆಂಗಳೂರು ಹೊರತುಪಡಿಸಿ ಹೊರಗಿನ ಜಿಲ್ಲೆಗಳ ಸದಸ್ಯರಿಗೆ ಮಾತ್ರ  ತಂಗಲು ಗಾಂಧಿಭವನದಲ್ಲಿ  ಅವಕಾಶವಿದ್ದು, ದಿನಾಂಕ 01.08.2026 ಒಳಗಾಗಿ  ತಂಗಲು ಅಗತ್ಯವಿರುವ ಸದಸ್ಯರು ಕೋರಿಕೆ ಸಲ್ಲಿಸುವುದು.

5. ಸದಸ್ಯರಿಗೆ ಲಾಭಾಂಶವನ್ನು Netbanking ಮೂಲಕ  ಪಾವತಿಸಲು ಸಹಕಾರ ಸಂಘವು ಕ್ರಮವಹಿಸಿರುವ ಹಿನ್ನೆಲೆಯಲ್ಲಿ ಸದಸ್ಯರುಗಳು Bank Passbook ನೀಡುವುದು.

6. ನೋಂದಣಿಗಾಗಿ ಮತ್ತು ಸಭೆಯ ಹೆಚ್ಚಿನ ಮಾಹಿತಿಗಾಗಿ:

ಅ. ಶ್ರೀ ಖಂಡೆಪ್ಪ, ಉಪಾಧ್ಯಕ್ಷರು Mobile: 9663642397

ಆ. ಶಾಲಿನಿ ಎಂ ಪಿ. Mobile: 9738279009

ಇ. E-mail: ksecsb.kar@gmail.com

********

ಸಂಘದ 8ನೇ ಮಹಾಸಭೆಯಲ್ಲಿ ಸದಸ್ಯರೆಲ್ಲರು ಭಾಗವಹಿಸುವ ಮೂಲಕ ಸಭೆಯನ್ನು ಮತ್ತು ವೇದಿಕೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. 

ಗೌರವಪೂರ್ವಕ ವಂದನೆಗಳೊಂದಿಗೆ,

ಇಂತಿ ತಮ್ಮ ನಂಬುಗೆಯ,

Untitled

                                                                          

(ಆನಂದ ಹೆಚ್ ಎನ್)        

            ಮುಖ್ಯ ಕಾರ್ಯನಿರ್ವಹ

 

 


 

ಕಾರ್ಯಕ್ರಮದ ಪಟ್ಟಿ:

1. ನಿರೂಪಣೆ ಮೂಲಕ ಸಭೆಯ ಆರಂಭ.

2. 2025-26ನೇ ಸಾಲಿನ ಮೃತ ಸದಸ್ಯರಿಗೆ ಸಂತಾಪ ಸಲ್ಲಿಕೆ.

3. ಪ್ರಾರ್ಥನೆ.

4. ನಾಡಗೀತೆ ಪ್ರಸ್ತುತಿ.

5. ಸ್ವಾಗತ ಭಾಷಣ.

6. ಪ್ರಾಸ್ತಾವಿಕ ನುಡಿ.

7. ಅತಿಥಿಗಳಿಂದ ಕಾರ್ಯಕ್ರಮದ ಉದ್ಘಾಟನೆ.

8. ಸಹಕಾರ ಸಂಘದಲ್ಲಿ ಅತಿ ಹೆಚ್ಚು ಷೇರುಗಳನ್ನು, ಠೇವಣಿಗಳನ್ನು ಹೊಂದಿದ ಮತ್ತು ಸಹಕಾರ ಸಂಘಕ್ಕೆ ಹೆಚ್ಚು ಸದಸ್ಯತ್ವ ಒದಗಿಸಿದ ಸದಸ್ಯರುಗಳಿಗೆ ನೆನಪಿನ ಕಾಣಿಕೆ ವಿತರಣೆ.

9. 2025-26ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಸದಸ್ಯರಿಗೆ ಅಭಿನಂದನೆ ಸಲ್ಲಿಕೆ.

10. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹಕ ನೀಡಿಕೆ.

11. 7ನೇ ಸರ್ವಸದಸ್ಯರ ಸಭಾ ನಡಾವಳಿ ಮಂಡನೆ.

12.  8ನೇ ಸರ್ವ ಸದಸ್ಯರ ಸಭಾ ಸೂಚನಾ ಪತ್ರವನ್ನು ಓದುವುದು ಮತ್ತು ದಾಖಲಿಸಲು ಅನುಮೋದನೆ ಪಡೆಯುವುದು.

13. 2025-26ನೇ ಸಾಲಿನ ಆಡಳಿತ ವರದಿ ಮಂಡನೆ ಹಾಗೂ ಅನುಮೋದನೆಗೆ ಕೋರಿಕೆ.

14. ಸಹಕಾರ ಸಂಘದ 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡನೆ ಮತ್ತು ಅನುಮೋದನೆಗೆ ಕೋರಿಕೆ.

15. 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿಸಿದ ಕ್ರಮವಿಡಬೇಕಾದ ಕಂಡಿಕೆಗೆ ಅನುಪಾಲನಾ ವರದಿ ಮಂಡನೆ ಮತ್ತು ಅನುಮೋದನೆ ಕೋರುವುದು.

16. 2026-27ನೇ ಸಾಲಿನ ಪೂರ್ಣ ವರ್ಷಕ್ಕೆ ಮುಂಗಡ ಪತ್ರ ಮಂಡನೆ ಹಾಗೂ ಅನುಮೋದನೆ ಕೋರುವುದು.

17. 2025-26ನೇ ಸಾಲಿನ ಸಹಕಾರ ಸಂಘದ ನಿವ್ವಳ ಲಾಭ ವಿಲೇವಾರಿ ಪ್ರಸ್ಥಾವನೆಯ ಮಂಡನೆ ಮತ್ತು ಅನುಮೋದನೆ ಪಡೆಯುವುದು.

18. ಚಾಲ್ತಿಯಲ್ಲಿರುವ ಸಾಲದ ಮಂಜೂರಾತಿ, ಆವರ್ತಕ-ನಿಶ್ಚಿತ-ಉಳಿತಾಯ ಠೇವಣಿಗಳ ಹಾಗೂ ಸದಸ್ಯರ ಮರಣೋತ್ತರ ಪರಿಹಾರ ನಿಧಿ  ನಿಯಮಾವಳಿಗಳ ಮುಂದುವರಿಕೆಗೆ ನಿರ್ಣಯಗಳ ಮಂಡನೆ ಮತ್ತು ಅನುಮೋದನೆ ಪಡೆಯುವುದು.

19. ಸದಸ್ಯರಿಂದ  ಸಲ್ಲಿಕೆಯಾಗುವ ಸಲಹೆ/ಪ್ರಶ್ನೆ/ಸೂಚನೆಗಳನ್ನು ಒಳಗೊಂಡ  ಪತ್ರಗಳ ಮಂಡನೆ ಹಾಗೂ ಚರ್ಚೆ.

20. ಅಧ್ಯಕ್ಷರಿಂದ ಮಂಡಿಸುವ ಪ್ರಮುಖ ನಿರ್ಣಯಗಳು, ಚರ್ಚೆ ಹಾಗೂ ನಿರ್ಣಯಗಳ ಅನುಮೋದನೆ.

21. ವಂದನಾರ್ಪಣೆ.

*********

 


ಹೆಚ್ಚು ಓದಿದ ವಿಷಯಗಳು