ನಿಶ್ಚಿತ ಠೇವಣಿ (FD) ನಿಯಮಾವಳಿಗಳು

ಸಹಕಾರ ಸಂಘದ ಆಡಳಿತ ನಿಯಮಾವಳಿಯ III ನೇ ಅಧ್ಯಾಯದ ೧೧ನೇ ಉದ್ದೇಶವನ್ನು ಈಡೇರಿಸಿಕೊಳ್ಳಲು ಹಾಗೂ V ನೇ ಅಧ್ಯಾಯದ 21ನೇ ನಿಯಮಾನುಸಾರ ಸಂಘದ ನಿಧಿಯನ್ನು ವೃದ್ಧಿಸುವುದಕ್ಕಾಗಿ ಸರ್ವ ಸದಸ್ಯರ 2 ನೇ ಸಭೆಯಲ್ಲಿ ಅನುಮೋದನೆ ಪಡೆದು ಆಡಳಿತ ಮಂಡಳಿಯ 14 ನೇ ಸಭೆಯಲ್ಲಿ ಚರ್ಚಿಸಿ ಈ ಮುಂದಿನಂತೆ ನಿಶ್ಚಿತ ಠೇವಣಿ (Fixed Deposit) ಉಪ ನಿಯಮವನ್ನು 01-01-2021 ರಿಂದ ಅನುಷ್ಠಾನಗೊಳಿಸಲಾಗಿದೆ.

1. ಸಂಘದ ಸದಸ್ಯರಿಂದ, ಸಹ ಸದಸ್ಯರಿಂದ, ನಾಮಮಾತ್ರ ಸದಸ್ಯರಿಂದ ಮತ್ತು ಆಡಳಿತ ಮಂಡಳಿಯಿಂದ ಅನುಮೋದಿಸಲ್ಪಟ್ಟ ಸದಸ್ಯರಲ್ಲದ ಠೇವಣಿದಾರರಿಂದ ನಿಶ್ಚಿತ ಠೇವಣಿಗಳನ್ನು ಸ್ವೀಕರಿಸಲಾಗುವುದು.
2. ಈ ಠೇವಣಿಯ ಕನಿಷ್ಠ ಅವಧಿ ಮೂರು ವರ್ಷ ಗರಿಷ್ಠ ಹತ್ತು ವರ್ಷ. ಹೂಡಿಕೆಯ ಕನಿಷ್ಠ ಮೊತ್ತ 10,000 ರೂಗಳು. ಗರಿಷ್ಠಕ್ಕೆ ಮಿತಿ ಇರುವುದಿಲ್ಲ.
3. ನಿಶ್ಚಿತ ಠೇವಣಿಗೆ ವಾರ್ಷಿಕ ಶೇಕಡ 7 ರಷ್ಟು ಬಡ್ಡಿಯನ್ನು ನೀಡಲಾಗುವುದು. ಅದಾಗ್ಯೂ, ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಆಡಳಿತ ಮಂಡಳಿಯು ಪರಿಷ್ಕರಿಸುವ ಬಡ್ಡಿ ದರವನ್ನು ಸ್ವೀಕರಿಸಲು ಠೇವಣಿದಾರರು ಬದ್ಧರಾಗಿರಬೇಕು.
4. ಠೇವಣಿಯನ್ನು ವಾಯಿದೆಗೂ ಮುಂಚಿತವಾಗಿ ರದ್ದುಪಡಿಸಿಕೊಳ್ಳಲು ಇಚ್ಛಿಸುವ ಠೇವಣಿದಾರನು ಕೋರಿಕೆ ಪತ್ರವನ್ನು ಠೇವಣಿ ತೆರೆದ ಎಂಟು ತಿಂಗಳ ಬಳಿಕ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗೆ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಮೂರು ತಿಂಗಳ ಒಳಗೆ ಠೇವಣಿ ಮೇಲಿನ ವಾರ್ಷಿಕ ಬಡ್ಡಿ ದರದಲ್ಲಿ ಶೇಕಡ 5 ರಷ್ಟನ್ನು ಕಡಿತಗೊಳಿಸಿ ಬಾಕಿ ಬಡ್ಡಿ ಮತ್ತು ಠೇವಣಿ ಮೊತ್ತವನ್ನು ಪಾವತಿಸಲಾಗುವುದು. ಅದಾಗ್ಯೂ ಠೇವಣಿ ತೆರೆದ ಎಂಟು ತಿಂಗಳ ಒಳಗೆ ಠೇವಣಿಯನ್ನು ರದ್ದುಪಡಿಸಿಕೊಂಡಲ್ಲಿ ಠೇವಣಿಯ ಮೊತ್ತದಲ್ಲಿ ಷೇಕಡ ೫ರಷ್ಟು ಮೊತ್ತವನ್ನು ಹಿಡಿದುಕೊಂಡು ಉಳಿದ ಮೊತ್ತವನ್ನು ನೀಡಲಾಗುವುದು.
5. ಠೇವಣಿ ತೆರೆದ ಠೇವಣಿದಾರರಿಗೆ ಪ್ರಮಾಣಪತ್ರವನ್ನು ಹಾಗೂ ಠೇವಣಿಯಿಂದ 10,000 ರೂಗಳಿಗಿಂತ ಹೆಚ್ಚು ಬಡ್ಡಿ ಗಳಿಸುವ ಠೇವಣಿದಾರರಿಗೆ ಬಡ್ಡಿ ಪ್ರಮಾಣಪತ್ರವನ್ನು ನೀಡಲಾಗುವುದು.
6. ನಿಶ್ಚಿತ ಠೇವಣಿಗೆ ತೊಡಗಿಸಿದ ಮೊತ್ತದ ಆಧಾರದಲ್ಲಿ ಸಾಲ ಪಡೆಯಲು ಇಚ್ಛಿಸುವ ಠೇವಣಿದಾರನಿಗೆ ಶೇಕಡ 75 ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುವುದು.
7. ನೀಡುವ ಸಾಲಕ್ಕೆ ಶೇಕಡ 12 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸಲಾಗಿದೆ. ಠೇವಣಿದಾರ ಠೇವಣಿ ಅರ್ಜಿಯಲ್ಲಿ ನಮೂದಿಸಿದ ಅವಧಿಯೊಳಗೆ ಅಥವಾ ಆಡಳಿತ ಮಂಡಳಿಯು ಸೂಚಿಸುವ ಅವಧಿಯ ಒಳಗೆ ಸಾಲವನ್ನು ಬಡ್ಡಿ ಸಹಿತ ಮರುಪಾವತಿಸಬೇಕು. ಮರುಪಾವತಿಸದಿದ್ದಲ್ಲಿ, ಈ ಠೇವಣಿ ಖಾತೆಗೆ ಜಮೆಯಾದ ಮೊತ್ತದ ಮೇಲಿನ ಹಕ್ಕನ್ನು ಠೇವಣಿದಾರ ಕಳೆದುಕೊಳ್ಳುವನು.
8. ಠೇವಣಿದಾರನು ಮರಣವಾದಲ್ಲಿ, ಠೇವಣಿಯ ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ನೀಡಲಾಗುವುದು. ಠೇವಣಿಯ ಮೊತ್ತದ ಆಧಾರದಲ್ಲಿ ಸಾಲವನ್ನು ಪಡೆದಿದ್ದಲ್ಲಿ, ಅದನ್ನು ಜಪ್ತಿ ಮಾಡಿಕೊಳ್ಳಲಾಗುವುದು.
9. ಈ ಠೇವಣಿಯನ್ನು ಹೊಂದಲು ಇಚ್ಛಿಸುವ ಆಸಕ್ತ ಸದಸ್ಯರು ಕೆಳಗಿನ ಕೊಂಡಿಯಲ್ಲಿ ನೀಡಿರುವ ನಮೂನೆಯನ್ನು ಭರ್ತಿಗೊಳಿಸಬೇಕು ಅಥವಾ ನಿಗದಿತ ನಮೂನೆಯನ್ನು ಭರ್ತಿಗೊಳಿಸಿ ಸಲ್ಲಿಸಬೇಕು. ಕಂತಿನ ಮೊತ್ತವನ್ನು ಜಿಲ್ಲಾ ಉಸ್ತುವಾರಿ ನಿರ್ದೇಶಕರಿಗೆ ಅಥವಾ ಪರಿಚಯವಿರುವ ಆಡಳಿತ ಮಂಡಳಿಯ ಒಬ್ಬ ಪದಾಧಿಕಾರಿಗೆ ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವರಿಗೆ ನೀಡಬಹುದು ಅಥವಾ ಸಹಕಾರ ಸಂಘದ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು.
ಅ. ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸುವವರಿಗೆ ನಮೂನೆಯ ಕೊಂಡಿ
ಆ. ಅಂಚೆ ಮೂಲಕ ನೋಂದಾಯಿಸಿಕೊಳ್ಳುವವರು ಈ ಕೊಂಡಿಯಲ್ಲಿ ನೀಡಿರುವ ಸದರಿ ಯೋಜನೆಯ ನಿಗದಿತ ನಮೂನೆಯನ್ನು ಮುದ್ರಿಸಿಕೊಂಡು ಭರ್ತಿಗೊಳಿಸಿ ಸಲ್ಲಿಸಬೇಕು.
10. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ: ಜಿಲ್ಲಾ ನಿರ್ದೇಶಕರನ್ನು ಅಥವಾ ಮೊಬೈಲ್ ಸಂಖ್ಯೆ: 8867360940 / e-mail: ksecsb.kar@gmail.com ಸಂಪರ್ಕಿಸಿ.

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು