ಸಾಲ ಮಂಜೂರು ಮತ್ತು ವಸೂಲಾತಿ ನಿಯಮಗಳು


ಸಾಲ ಮಂಜೂರಾತಿ ಮತ್ತು ವಸೂಲು ನಿಯಮಗಳು, 2022

ಆಡಳಿತ ಮಂಡಳಿಯ ಸಭೆ-7

ದಿನಾಂಕ: 13-09-2020.

ಸಭಾ ನಿರ್ಣಯ: 1

ಈ ಸಭೆಯಲ್ಲಿ ಚರ್ಚಿಸಿ ಸಾಲ ಮಂಜುರಾತಿ ಮತ್ತು ವಸೂಲು ನಿಯಮಗಳನ್ನು 14-09-2020ರಿಂದ ಅನುಷ್ಠಾನಗೊಳಿಸಲಾಗಿದೆ.

ಕಾಲಕಾಲಕ್ಕೆ ಆಡಳಿತ ಮಂಡಳಿಯು ತನ್ನ ಸಭೆಗಳಲ್ಲಿ ಹಾಗೂ ಮಹಾ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳಂತೆ ಈ ನಿಯಮಗಳನ್ನು ಸಕಾಲಿಕವಾಗಿ ತಿದ್ದುಪಡಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ. ಪರಿಷ್ಕೃತ ನಿಯಮಗಳನ್ನು ದಿನಾಂಕ: 27-02-2022ರಂದು ಆಡಳಿತ ಮಂಡಳಿಯ ತನ್ನ 13ನೇ ಸಭೆಯಲ್ಲಿ ಚರ್ಚಿಸಿ ಮರುಪ್ರಕಟಿಸಲಾಗಿದೆ.

1. ಸಾಲದ ಮೊತ್ತ ಮತ್ತು ಬಡ್ಡಿ:

ಅ. ಕನಿಷ್ಠ 12ರಿಂದ ಗರಿಷ್ಠ 36 ಕಂತುಗಳಲ್ಲಿ ಕನಿಷ್ಠ 25000ರೂಗಳಿಂದ ಗರಿಷ್ಠ 100000 (ಒಂದು ಲಕ್ಷ) ರೂಗಳ ಮೊತ್ತವನ್ನು ಸಾಲವನ್ನಾಗಿ ವಿತರಿಸಲಾಗುವುದು.

ಆ. ಸಾಲಕ್ಕೆ ವಾರ್ಷಿಕ ಶೇಕಡ 16ರಷ್ಟು ಬಡ್ಡಿ ದರವನ್ನು ವಿಧಿಸಲಾಗಿದೆ.

ವಿವರಣೆ: ಪ್ರಸ್ತುತ ಸದರಿ ಸಹಕಾರ ಸಂಘದ ಆಡಳಿತ ನಿಯಮ 25ರಂತೆ ಕನಿಷ್ಟ 25,000 ದಿಂದ ಗರಿಷ್ಟ 50,000 ರೂಗಳವರೆಗೂ ಸಾಲ ನೀಡಲು ಅವಕಾಶವಿದೆ. ೩ನೇ ಮಹಾ ಸಭೆಯಲ್ಲಿ ಸಾಲ ವಿತರಣೆಯ ಮೊತ್ತವನ್ನು 1,00,000 ರೂಗಳಿಗೆ ಹೆಚ್ಚಿಸಲು ಆಡಳಿತ ಮಂಡಳಿ ಒಪ್ಪಿಗೆ ಪಡೆದಿದೆ.

2. ಶುಲ್ಕ:

ಅ. ಸಾಲ ಪಡೆಯಲು ಅರ್ಹವಾದ ಸದಸ್ಯರು ಸಾಲ ಮಂಜೂರಾತಿ ಆದೇಶವನ್ನು ಪಡೆದುಕೊಳ್ಳುವ ಮುಂಚೆ 200ರೂಗಳನ್ನು ಪಾವತಿಸತಕ್ಕದ್ದು.

ಆ. ಮರಣ ನಿಧಿ ಪರಿಹಾರ ಯೋಜನೆಗೆ ಸಾಲ ಪಡೆಯುವವರು ನೋಂದಣಿಯಾಗಿರತಕ್ಕದ್ದು.

3. ಸಾಲ ಪಡೆಯುವವರು ಹಾಗೂ ಜಾಮೀನುದಾರರು   ಈ ನಿಯಮದಲ್ಲಿ ಲಗತ್ತಿಸಿರುವ ನಿಗದಿತ ಅರ್ಜಿಯನ್ನು ಭರ್ತಿಗೊಳಿಸಬೇಕು ಮತ್ತು ಅರ್ಜಿಯೊಡನೆ ಈ ಕೆಲವು ದಾಖಲಾತಿಗಳನ್ನು ನೀಡಬೇಕು.

ಅ. ಸಹಕಾರ ಸಂಘದ ಗುರುತಿನ ಚೀಟಿ.

ಆ. ಸಾಲಕ್ಕೆ ಅರ್ಜಿಸಲ್ಲಿಸುವ ದಿನಾಂಕಕ್ಕೆ ಮೂರು ತಿಂಗಳಷ್ಟು ಬ್ಯಾಂಕ್‌ ವ್ಯವಹಾರವನ್ನು ಒಳಗೊಂಡಿರುವ ಬ್ಯಾಂಕ್ ಖಾತೆಯ ಪಾಸ್ಬುಕ್‌ ಅಥವಾ bank statement ಪ್ರತಿ.

ಇ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಪ್ರತಿ.

ಈ. ಇತ್ತೀಚಿನ ವೇತನ ಪ್ರತಿ.

ಉ. ಇತ್ತೀಚಿನ ನಾಲ್ಕು ಪಾಸ್ಪೋರ್ಟ್‌ ಅಳತೆಯ ಭಾವಚಿತ್ರಗಳು. (ಸಾಲ ಪಡೆಯುವ ಸದಸ್ಯರಿಗೆ ಅನ್ವಯಿಸುವುದು)

4. ಜಾಮೀನುದಾರರ ಹೊಣೆಗಾರಿಕೆಗಳು:

ಅ. ಪ್ರಾಥಮಿಕ ಸದಸ್ಯತ್ವ ಪಡೆದ ಒಬ್ಬ ಸದಸ್ಯ ಸಾಲ ಪಡೆಯಲಿಚ್ಛಿಸುವ ಪ್ರಾಥಮಿಕ ಸದಸ್ಯರ ಅಥವಾ ಸಹ ಸದಸ್ಯರ ಪೈಕಿ ಒಬ್ಬರಿಗೆ ಮಾತ್ರ ಖಾತ್ರಿಯಾಗಿರಬೇಕು.

ಆ. ಸಾಲದ ಅರ್ಜಿಯಲ್ಲಿ ನಿಗದಿಪಡಿಸಿರುವ ಷರತ್ತುಗಳಿಗೆ ಅನುಗುಣವಾಗಿ ಸಾಲ ಪಡೆದ ಯಾವುದೇ ಸದಸ್ಯ ಸಾಲವನ್ನು ನಿಗದಿತ ಅವಧಿಯಲ್ಲಿ ತೀರಿಸದೆ ಇದ್ದಲ್ಲಿ ಅಥವಾ ಸಾಲ ಪಡೆದ ವ್ಯಕ್ತಿ ಕೆಲಸ ಕಳೆದುಕೊಂಡಲ್ಲಿ ಅಥವಾ ಮೃತ ಪಟ್ಟಲ್ಲಿ, ಸಾಲ ಪಡೆದ ವ್ಯಕ್ತಿಯ ಜಾಮೀನುದಾರ ಸಾಲವನ್ನು ತೀರಿಸಲು ಸಮಾನ ಹೊಣೆಗಾರಿಕೆಯನ್ನು ಹೊಂದಿರತಕ್ಕದ್ದು.


5. ಅರ್ಜಿ ಸಲ್ಲಿಕೆ ಮತ್ತು ಸಾಲ ಮಂಜೂರಾತಿ ಪ್ರಕ್ರಿಯೆ:

ಅ. ಸಾಲ ಪಡೆಯಲಿಚ್ಛಿಸುವ ಸದಸ್ಯರು ಭರ್ತಿಗೊಂಡ ಅರ್ಜಿ ಹಾಗೂ ದಾಖಲಾತಿಗಳನ್ನು ಕಛೇರಿಯ ವಿಳಾಸಕ್ಕೆ  ಅಂಚೆ ಮೂಲಕ ಕಳುಹಿಸಬೇಕು ಅಥವಾ ಜಿಲ್ಲಾ ಉಸ್ತುವಾರಿ ನಿರ್ದೇಶಕರ ಮೂಲಕ ಅಥವಾ ನೇರವಾಗಿ ಕಛೇರಿಗೆ ಬಂದು ಸಲ್ಲಿಸಬಹುದು.

ಆ. ಆಡಳಿತ ಮಂಡಳಿಯು ತಿಂಗಳಿಗೊಮ್ಮೆ ಸಹಕಾರ ಸಂಘದ ಆಡಳಿತ ನಿಯಮದ 42ನೇ ನಿಯಮದಂತೆ ಸಭೆ ಸೇರಿ ಅನುಕ್ರಮವಾಗಿ ಸ್ವೀಕರಿಸಿದ ಸಾಲದ ಅರ್ಜಿಗಳನ್ನು ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

ಇ. ಸಾಲ ಸ್ವೀಕೃತಿಗೆ ಅರ್ಹವಾದ ಸದಸ್ಯರು ಕಛೇರಿಗೆ ಹಾಜರಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಂದ ಸಾಲ ಮಂಜೂರಾತಿ ಆದೇಶವನ್ನು ಪಡೆಯಬೇಕು ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಾಲ ಮಂಜೂರಾತಿ ಆದೇಶವನ್ನು ಅಂಚೆ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದಾಗ ಸಾಲ ಮಂಜೂರಾತಿ ಸ್ವೀಕರಿಸಿದ್ದರ ಕುರಿತು ಫಲಾನುಭವಿ ಮಾಹಿತಿ ನೀಡಬೇಕು.

ಈ. ಆಡಳಿತ ಮಂಡಳಿಯು ನಿರ್ಧರಿಸುವ ಸಮುಚಿತ ಮಾರ್ಗದ ಮೂಲಕ ಫಲಾನುಭವಿಯು ಸಾಲವನ್ನು ಮರುಪಾವತಿಸಬೇಕು.

ಉ. ಸಾಲವನ್ನು ಕೋರಿ ಅರ್ಜಿ ಸಲ್ಲಿಸುವ ಸದಸ್ಯರು ಸಾಲವನ್ನು ಪಡೆಯದಿರುವ ಕುರಿತು CEO ರವರಿಗೆ ಮಾಹಿತಿ ನೀಡಬೇಕು. ಸಾಲವು ನಿರ್ದಿಷ್ಟ ಅವಧಿಯಲ್ಲಿ ಮಂಜೂರುಗೊಳಿಸುವ ಕಾಲದಲ್ಲಿ ಸಾಲ ಕೋರಿಕೆ ಸಲ್ಲಿಸಿದ ಸದಸ್ಯರು ಸಾಲ ನಿರ್ದಿಷ್ಟ ತಿಂಗಳಲ್ಲಿ ಬೇಡ ಎಂದಲ್ಲಿ ಜೇಷ್ಠತೆಯನ್ನು ಕಳೆದುಕೊಳ್ಳುವನು. ಗರಿಷ್ಠ ಮೂರು ತಿಂಗಳ ಅವಧಿಯ ತನಕವೂ ಒಬ್ಬ ಸದಸ್ಯ ಸಾಲ ನಿರಾಕರಿಸಲು ಅರ್ಹನಿರುತ್ತಾನೆ. ಈ ಅವಧಿ ಮೀರಿದ್ದಲ್ಲಿ ಮತ್ತೊಮ್ಮೆ ನೂತನ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಊ. ಸಹಕಾರ ಸಂಘದ ಸದಸ್ಯತ್ವ ಪಡೆದ ದಿನಾಂಕದಿಂದ ಮೂರು ತಿಂಗಳುಗಳ ಕಾಲ ಸಾಲ ಪಡೆಯಲು ಸದಸ್ಯರು ಅರ್ಹರಾಗುವುದಿಲ್ಲ. ಅದಾಗ್ಯೂ ಯಾರೇ ಸದಸ್ಯರು ಸಾಲಕ್ಕೆ ಅರ್ಜಿಯನ್ನು ಸಲ್ಲಿಸದಿದ್ದಲ್ಲಿ ನಿಗದಿತ ಮೂರು ತಿಂಗಳ ಅವಧಿಯನ್ನು ಮೊಟಕುಗೊಳಿಸಿ ಸಾಲವನ್ನು ಮಂಜೂರುಗೊಳಿಸಲು ಆಡಳಿತ ಮಂಡಳಿಯು ವಿವೇಚನಾ ಅಧಿಕಾರವನ್ನು ಹೊಂದಿರುತ್ತದೆ.

ಋ. ಈಗಾಗಲೇ  ಸಹಕಾರ ಸಂಘದಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅಂತಹ ಸದಸ್ಯರು ಮತ್ತೊಮ್ಮೆ ಸಾಲ ಪಡೆದುಕೊಳ್ಳಲು ಕನಿಷ್ಠ ಅವಧಿಯು ಒಂದು ವರ್ಷವಾಗಿರತಕ್ಕದ್ದು. ಹೊಸ ಅರ್ಜಿ ಮತ್ತು ದಾಖಲಾತಿಗಳೊಂದಿಗೆ ಅವರು ಸಾಲಕ್ಕಾಗಿ ಕೋರಬಹುದು. ತುರ್ತು ಸನ್ನಿವೇಶಗಳಲ್ಲಿ ಆಡಳಿತ ಮಂಡಳಿಯು ಈ ನಿಯಮಕ್ಕೆ ವಿನಾಯಿತಿ ನೀಡಿ ಸಾಲವನ್ನು ಮಂಜೂರು ಮಾಡಬಹುದು.

6. ಪ್ರಶಂಸನೆಗಳು ಮತ್ತು ದಂಡನೆಗಳು:

ಅ. ನಿಗದಿತ ವೇಳೆಯಲ್ಲಿ ಸಾಲ ಹಾಗೂ ಬಡ್ಡಿಯನ್ನು ಪಾವತಿಸುವ ಸದಸ್ಯರಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯು ಮೂರು ತಿಂಗಳಿಗೊಮ್ಮೆ ಪ್ರಶಂಸನೀಯ ಸಂದೇಶವನ್ನು ಕಳುಹಿಸಬಹುದು. ಒಂದು ವೇಳೆ ಸಾಲ ಪಡೆದವರು ಕಾಲಕಾಲಕ್ಕೆ ಅಸಲು+ಬಡ್ಡಿಯ ಮೊತ್ತವನ್ನು ಮರುಪಾವತಿಸದಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಆಯಾ ಸಾಲಗಾರರ ಜಾಮೀನುದಾರರಿಗೆ ಹಾಗೂ ಜಿಲ್ಲಾ ಉಸ್ತುವಾರಿ ನಿರ್ದೇಶಕರಿಗೆ ಎಚ್ಚರಿಕೆಯ ಸೂಚನೆಯನ್ನು ಕಳುಹಿಸತಕ್ಕದ್ದು. ಅದಾಗ್ಯೂ, ನಿಗದಿತ ಅವಧಿಯಲ್ಲಿ ಸಾಲ ಪಡೆದವರು ಸಾಲವನ್ನು ಮರುಪಾವತಿಸದಿದ್ದಲ್ಲಿ ಕಾನೂನು ಕ್ರಮವನ್ನು ಜರುಗಿಸಲಾಗುವುದು.

ಆ. ಯಾವುದೇ ಕಂತಿನ ಮೊತ್ತವನ್ನು ಪಾವತಿಸಲು ಸಾಲ ಪಡೆದವರು ವಿಫಲರಾದಲ್ಲಿ ನಿರ್ದಿಷ್ಟ ಕಂತಿನ ಮೊತ್ತಕ್ಕೆ ಶೇಕಡ ಎರಡರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸತಕ್ಕದ್ದು.


7. ಲಾಭ ವಿತರಣೆ:

ಅ. ಗಳಿಸಿದ ಬಡ್ಡಿಯ ಲಾಭವನ್ನು ಶೇಕಡ 25ರಷ್ಟನ್ನು ಮೀಸಲು ನಿಧಿಗೆ, 2ರಷ್ಟು ಶಿಕ್ಷಣ ನಿಧಿಗೆ, 10ರಷ್ಟು ಬೆಲೆ ಏರು ಪೇರು ನಿಧಿಗೆ, ಶೇಕಡ 10% ಕ್ಕೆ ಕಡಿಮೆ ಇಲ್ಲದಂತೆ ಕರಡು ಸಾಲದ (ಹೋಕುಬಾಕಿ) ನಿಧಿಗೆ, ಶೇಕಡ 15% ಕ್ಕೆ ಮೀರದಂತೆ ಕಟ್ಟಡ ನಿಧಿಗೆ, ಶೇಕಡ 10% ಕ್ಕೆ ಮೀರದಂತೆ ಸಾಮಾನ್ಯಕ್ಷೇಮ ನಿಧಿಗೆ, ಶೇಕಡ 5% ಕ್ಕೆ ಮೀರದಂತೆ ಸಿಬ್ಬಂದಿ ಕ್ಷೇಮ ನಿಧಿಗೆ, ಶೇಕಡ 5% ಕ್ಕೆ ಮೀರದಂತೆ ಜ್ಯುಬಿಲಿ ನಿಧಿಗೆ, ಶೇಕಡ 10% ಕ್ಕೆ ಮೀರದಷ್ಟು ಮೊಬಲಗನ್ನು ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆಗಳಿಗೆ ಹಾಗೂ ಸಿಬ್ಬಂದಿಗೆ ನೀಡಬಹುದಾದ ಬೌನಸ್‌ ಇವುಗಳನ್ನು ಗಮನದಲ್ಲಿರಿಸಿಕೊಂಡು ಯಾವೆಲ್ಲಾ ನಿಧಿಗಳಿಗೆ ಹಂಚಿಕೆ ಮಾಡಲು ಅವಕಾಶವನ್ನು ಕಲ್ಪಿಸಿಕೊಳ್ಳಲಾಗಿದೆಯೋ ಅಂತವುಗಳಿಗೆ ಆಡಳಿತ ಮಂಡಳಿಯು ನಿಗದಿಪಡಿಸುವ ಮೊತ್ತವನ್ನು ಹಂಚಿಕೆ ಮಾಡಿ ಉಳಿದ ಮೊತ್ತದ ಪಾಲನ್ನು ಸದಸ್ಯರ ಷೇರು ಬಂಡವಾಳದ ಮೇಲೆ ಶೇಕಡ 25ಕ್ಕೆ ಮೀರದಷ್ಟು ಲಾಭಾಂಶವನ್ನು ಹಂಚಬಹುದಾಗಿದೆ.

8. ಕರಾರು ಸಂಬಂಧಿತ:

ಅ. ಸಾಲ ಪಡೆಯಲು ಇಚ್ಛಿಸುವ ಸದಸ್ಯನು ಮತ್ತು ಜಾಮೀನುದಾರನು ವಕೀಲರಿಂದ ನೋಟರಿ ಮಾಡಿಸಬೇಕಿಲ್ಲ. ಅದಾಗ್ಯೂ ಕಾಲಕಾಲಕ್ಕೆ ಆಡಳಿತ ಮಂಡಳಿಯು ಈ ಕುರಿತು ಕೈಗೊಳ್ಳುವ ನಿರ್ಣಯಕ್ಕೆ ಸಾಲ ಪಡೆದವರು ಮತ್ತು ಜಾಮೀನುದಾರರು ಬದ್ಧರಾಗಿರತಕ್ಕದ್ದು.

ಆ. ಸಾಲದ ಅರ್ಜಿಗೆ ಮತ್ತು ಮುಚ್ಚಳಿಕೆ ಪತ್ರಕ್ಕೆ ಮಾತ್ರ ಜಾಮೀನುದಾರರ ಸಹಿಯ ಅಗತ್ಯವಿದೆ. ಸಾಲ ಮಂಜೂರಾತಿ ಆದೇಶವನ್ನು ಪಡೆಯುವಾಗ ಜಾಮೀನುದಾರರ ಹಾಜರಾತಿ ಕಡ್ಡಾಯವಿಲ್ಲ ಮತ್ತು ಜಾಮೀನುದಾರರ ಸಹಿ ಅಗತ್ಯವಿಲ್ಲ.

9. ಸಾಲ ಮರುಪಾವತಿ ಕೋಷ್ಟಕ:

ಸಾಲದ ಅರ್ಜಿಯಲ್ಲಿ ಸಾಲ ಪಡೆಯುವವರು ನಮೂದಿಸುವ ಮೊತ್ತ ಹಾಗೂ ಮರುಪಾವತಿಸುವ ಕಂತುಗಳಿಗೆ ತಕ್ಕಂತೆ ಸಾಲದ ಮರುಪಾವತಿ ಮೊತ್ತವು ವಿಭಿನ್ನತೆಯನ್ನು ಹೊಂದಿದ್ದು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸಾಲ ಮಂಜೂರಾತಿ ಆದೇಶದಲ್ಲಿ ನಮೂದಿಸತಕ್ಕದ್ದು. ಅದಾಗ್ಯೂ, ಈ ಮಾಹಿತಿಯನ್ನು ಇಲ್ಲಿ ಕೇವಲ 50000ರೂಗಳ ಸಾಲಕ್ಕೆ ಸಂಬಂಧಿಸಿದಂತೆ ತಖ್ತೆಯ ವಿವರವನ್ನು ನೀಡಲಾಗಿದೆ.

ಕೋಷ್ಟಕ:

ಸಾಲದ ಮೊತ್ತ:

ವಾರ್ಷಿಕ ಬಡ್ಡಿ:

ಮರುಪಾವತಿಗೆ ನಿಗದಿಪಡಿಸಲಾದ ಕಂತುಗಳು::

20 ಕಂತುಗಳಿಗೆ ಸಾಲ ಹಾಗೂ ಬಡ್ಡಿ ಸೇರಿ ಪಾವತಿಸಲೇಬೇಕಾದ ಮೊತ್ತ:

50000ರೂಗಳು.

ಶೇಕಡ 16ಪ್ರತಿಶತ.

20 ಕಂತುಗಳು.

  2865 ರೂಗಳು.

 

                       

10. ಮೇಲಿನ ಯಾವುದೇ ನಿಯಮಗಳನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಒಮ್ಮತದ ಮೇರೆಗೆ ರದ್ದುಪಡಿಸುವ ಅಥವಾ ಪರಿರಿಸುವ ಅಧಿಕಾರವನ್ನು ಆಡಳಿತ ಮಂಡಳಿಯು ಹೊಂದಿದೆ.

*******

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು