4ನೇ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ ಹಾಗೂ ಮಂಡಿಸುವ ವಿವಿಧ ದಾಖಲಾತಿಗಳು

      ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (ರಿ)

Reg No:OTS-2/293/HOT/52921/2018-19 Date: 14-02-2020

#41/ಬಿ, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097

Email: ksecsb.kar@gmail.com

ವೀರಕ್ಯಾತಯ್ಯ ಎನ್                  ನೇತ್ರಾವತಿ                                     ಸಂಜೀವೇಗೌಡ ಜಿ.ಆರ್‌

ಅಧ್ಯಕ್ಷರು- 9964100089      ಉಪಾಧ್ಯಕ್ಷರು- 9242881867        ಮುಖ್ಯಕಾರ್ಯನಿರ್ವಹಣಾಧಿಕಾರಿ- 9108283109

 

 

ಸಂಖ್ಯೆ: ಕರಾಅನೌಸಸನಿ/ಸಾಸಸಸೂಪ/3/2022.                                                ದಿನಾಂಕ: 10.08.2022.

 

 

ಸಭಾಸೂಚನಾ ಪತ್ರ

 

ಮಾನ್ಯರೇ,

 

ವಿಷಯ:

4ನೇ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಿರುವ ಕುರಿತು.

 

ಉಲ್ಲೇಖ:

ದಿನಾಂಕ:31.07.2022ರಂದು ನಡೆದ 5ನೇ ಆಡಳಿತ ಮಂಡಳಿ ಸಭೆಯ, ನಿರ್ಣಯ ಸಂಖ್ಯೆ-2.

* * * *

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ಗೌರವಾನ್ವಿತ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ತಿಳಿಯ ಪಡಿಸುತ್ತಿರುವುದೇನೆಂದರೆ, ಸಹಕಾರ ಸಂಘದ 4ನೇ ಸರ್ವಸದಸ್ಯರ ಸಭೆಯನ್ನು ಅಧ್ಯಕ್ಷರಾದ ಶ್ರೀಯುತ ವೀರಕ್ಯಾತಯ್ಯ ಎನ್‌. ರವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ  ನಡೆಸಲು ಉಲ್ಲೇಖಿತ ಆಡಳಿತ 5ನೇ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ, ಸದರಿ ಸಭೆಗೆ ಸಂಘಧ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ತಪ್ಪದೆ ಪಾಲ್ಗೊಳ್ಳಬೇಕೆಂದು ಈಮೂಲಕ ತಮ್ಮಲ್ಲಿ ಕೋರಲಾಗಿದೆ:-

 

ಸಭಾ ದಿನಾಂಕ:

11.09.2022. ಸಮಯ: ಬೆಳಿಗ್ಗೆ 10: 00 ರಿಂದ ಮಧ್ಯಾಹ್ನ:2:00.

ಸ್ಥಳ:

ಕಸ್ತೂರಿ ಬಾ ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತ, ಕುಮಾರ ಕೃಪ ರಸ್ತೆ, ಬೆಂಗಳೂರು-560 001.

ಸಭಾ ವಿಷಯಗಳು:

1.     3ನೇ ಸರ್ವ ಸದಸ್ಯರ ಸಭಾ ನಡಾವಳಿಯ ಸಂಕ್ಷಿಪ್ತ ವರದಿ ಮಂಡನೆ.

2.     ಸಹಕಾರ ಸಂಘದ 2021-22 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿ ಮಂಡನೆ.

3.     2021-22ನೇ ಸಾಲಿನ ಆಡಳಿತ ವರದಿ  ಮಂಡನೆ.

4.     2022-23ನೇ ಸಾಲಿನ ಮುಂಗಡ ಪತ್ರ ಮಂಡನೆ. ಸಭೆಯಲ್ಲಿ ಮಂಡಿಸುವ ಕ್ರಮ ಸಂಖ್ಯೆ: 2 ರಿಂದ 4 ರವರೆಗಿನ ವರದಿಗಳಿಗೆ ಅನುಮೋದನೆ ಪಡೆಯುವುದು ಮತ್ತು 3ನೇ ಮಹಾಸಭೆಯ ನಿರ್ಣಯವನ್ನು ಸ್ವೀಕರಿಸಿಕೊಳ್ಳುವುದು.

5.     ಈ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭವನ್ನು ವಿವಿಧ ನಿಧಿಗಳಿಗೆ ಹಂಚಿಕೆ 2019-20, 2020-21 ಮತ್ತು 2021-22ನೇ ಸಾಲುಗಳ ಸದಸ್ಯರ ಷೇರುಗಳಿಗೆ ನಿಗದಿಪಡಿಸಬೇಕಾದ ಲಾಭಾಂಶ ನಿರ್ಧರಣೆ ಮೇಲೆ ಚರ್ಚೆ ಹಾಗೂ ನಿರ್ಣಯ ಸ್ವೀಕಾರ.

6.     ಸದಸ್ಯರಿಂದ ಸ್ವೀಕರಿಸುವ ಸಲಹೆ/ ಪ್ರಶ್ನೆಗಳು ಮತ್ತು ಅಧ್ಯಕ್ಷರ ಅನುಮತಿಯ ಮೇರೆಗೆ ಚರ್ಚಿಸಬಹುದಾದ ಇತರೇ ವಿಷಯಗಳು.

 

ವಂದನೆಗಳೊಂದಿಗೆ,

(ಸಂಜೀವೇಗೌಡ ಜಿ.ಆರ್‌)

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ,

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ.

 

 

      ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (ರಿ)

Reg No:OTS-2/293/HOT/52921/2018-19 Date: 14-02-2020

#41/ಬಿ, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097

Email: ksecsb.kar@gmail.com

ವೀರಕ್ಯಾತಯ್ಯ ಎನ್.                 ನೇತ್ರಾವತಿ                                     ಸಂಜೀವೇಗೌಡ ಜಿ.ಆರ್‌.

ಅಧ್ಯಕ್ಷರು- 9964100089      ಉಪಾಧ್ಯಕ್ಷರು- 9242881867            ಮುಖ್ಯ ಕಾರ್ಯನಿರ್ವಹಣಾಧಿಕಾರಿ- 9108283109

 

 


ಸೂಚನೆಗಳು:

1.     ಸಭೆಗೆ ಬರುವ ಸದಸ್ಯರು ಕಡ್ಡಾಯವಾಗಿ ಈ ಸಹಕಾರ ಸಂಘದ ಸದಸ್ಯತ್ವ ಗುರುತಿನ ಚೀಟಿ ಮತ್ತು ಷೇರು ಪ್ರಮಾಣ ಪತ್ರವನ್ನು ತರತಕ್ಕದ್ದು. ಒಂದು ವೇಳೆ ಈ ದಾಖಲಾತಿಗಳನ್ನು ಕಳೆದುಕೊಂಡಿದ್ದಲ್ಲಿ ಗುರುತಿನ ಚೀಟಿಗೆ ರೂ.50 ಮತ್ತು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು ನೀಡಬೇಕು. ಷೇರು ಪ್ರಮಾಣ ಪತ್ರಕ್ಕೆ ರೂ.50 ಪಾವತಿಸತಕ್ಕದ್ದು. ಗುರುತಿನ ಚೀಟಿ ಹೊಂದಿಲ್ಲದವರಿಗೆ ಸಭೆಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.

2.     ಸದಸ್ಯರಿಗೆ ಮತ್ತು ಸಹಾಯಕರಿಗೆ ಚಹಾ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ದೇಣಿಗೆಗೆ ಅವಕಾಶವಿದ್ದು, ಆಸಕ್ತ ಸದಸ್ಯರು ಸಹಕಾರ ಸಂಘದ ನಿರ್ದೇಶಕರ ಮೂಲಕ ದೇಣಿಗೆಯನ್ನು ನೀಡಬಹುದಾಗಿದೆ.

3.      ದೂರದ ಊರುಗಳಿಂದ ಬರುವ ಸದಸ್ಯರಿಗೆ ಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು..

4.     ಕೋವಿಡ್‌ನ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸುವ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುವುದು ಮತ್ತು ಸದಸ್ಯರು ಕೂಡ ಪ್ರಯಾಣದ ಹೊತ್ತಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಸಭೆಗೆ ಆಗಮಿಸಿ, ನಿರ್ಗಮಿಸತಕ್ಕದ್ದು.

5.     ಸದಸ್ಯರು ಸಭೆಯ ಗಮನಕ್ಕೆ ತರಬಯಸುವ ವಿಷಯಗಳನ್ನುಅಥವಾ ಪ್ರಶ್ನೆಗಳನ್ನು ದಿನಾಂಕ: 05.09.2022ರ ಒಳಗಾಗಿ ಸಹಕಾರ ಸಂಘಕ್ಕೆ ಮುಂಚೆ ಕಳುಹಿಸಬೇಕು.

6.     4ನೇ ಸರ್ವ ಸದಸ್ಯರ ಸಭಾ ರೂಪುರೇಷೆಯನ್ನು ಈ ಸೂಚನಾ ಪತ್ರದಲ್ಲಿ ಲಗತ್ತಿಸಲಾಗಿದೆ.

7.      4ನೇ ಸರ್ವ ಸದಸ್ಯರ ಸಭೆಯ ನಿರ್ಣಯದಂತೆ ನಿಗದಿಯಾಗುವ ಷೇರುಗಳ ಲಾಭಾಂಶವನ್ನು ಸದಸ್ಯರು ಕಟ್ಟಡ ನಿಧಿಗೆ ದೇಣಿಗೆ ರೂಪದಲ್ಲಿ ನೀಡಬಹುದು. ಇದಕ್ಕಾಗಿ ನಿಗದಿತ ನಮೂನೆಯನ್ನು ಸಭೆಯ ದಿನದಂದು ನೀಡಲಾಗುವುದು. ಆಸಕ್ತರು ಆ ನಮೂನೆಯನ್ನು ಭರ್ತಿಗೊಳಿಸಿ ಸಲ್ಲಿಸಬೇಕಾಗಿ ವಿನಂತಿ.

8.     ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ: ಸಹಕಾರ ಸಂಘದ ವಾಟ್ಸಪ್‌ ಗುಂಪು/ ಮೊಬೈಲ್‌ಸಂಖ್ಯೆ: 8867360940 / e-mail: ksecsb.kar@gmail.com ಈ ಸಂವಹನ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯಬಹುದು.

9.      ನಿಗದಿತ ಸಭಾ ಕಾರ್ಯಸೂಚಿಗಳಲ್ಲಿ ಬದಲಾವಣೆಗಳಾದಲ್ಲಿ ತಿಳಿಸಲಾಗುವುದು.

 

* * * *

      ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ (ರಿ)

Reg No:OTS-2/293/HOT/52921/2018-19 Date: 14-02-2020

#41/ಬಿ, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097

Email: ksecsb.kar@gmail.com

ವೀರಕ್ಯಾತಯ್ಯ ಎನ್.                 ನೇತ್ರಾವತಿ                                     ಸಂಜೀವೇಗೌಡ ಜಿ.ಆರ್‌.

ಅಧ್ಯಕ್ಷರು- 9964100089      ಉಪಾಧ್ಯಕ್ಷರು- 9242881867            ಮುಖ್ಯ ಕಾರ್ಯನಿರ್ವಹಣಾಧಿಕಾರಿ- 9108283109

 

 


ದಿನಾಂಕ:11.09.2022 4ನೇ ಮಹಾ ಸಭೆಯ ಕಾರ್ಯಕ್ರಮದ ರೂಪುರೇಷೆ:-

 

ಪ್ರಥಮ ಹಂತದ ಪಟ್ಟಿ:-

 

ಸಮಯ: ಬೆಳಿಗ್ಗೆ 10:10 ರಿಂದ 1:30 ರವರೆಗೆ

1.     ನಿರೂಪಣೆ ಮೂಲಕ ಸಭೆಯ ಆರಂಭ.

2.     ಪ್ರಾರ್ಥನೆ.

3.      ಸ್ವಾಗತ ಭಾಷಣ.

4.     ಉದ್ಘಾಟನೆ ಮತ್ತು ಉದ್ಘಾಟನಾ ನುಡಿ.

5.      ಪ್ರಾಸ್ತಾವಿಕ ನುಡಿ.

6.     2021-22ನೇ ಸಾಲಿನಲ್ಲಿ ಹೆಚ್ಚು ಷೇರು ಪಡೆದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ.

7.     5ನೇ ಸರ್ವಸದಸ್ಯರ ಸಭಾಸೂಚನಾ ಪತ್ರವನ್ನು ಓದಿ ದಾಖಲಿಸುವುದು.

8.      3ನೇ ಸರ್ವಸದಸ್ಯರ ಸಭಾನಡಾವಳಿಯ ಸಂಕ್ಷಿಪ್ತ ವರದಿ ಮಂಡನೆ.

9.     2021-22ನೇ ಸಾಲಿನ ಆಡಳಿತ ವರದಿ ಮಂಡನೆ.

10.  2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡನೆ.

11.  ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿರುವ ಕ್ರಮವಿಡಬೇಕಾದ ಕಂಡಿಕೆಗಳಿಗೆ ಅನುಪಾಲನಾ ವರದಿ ಮಂಡನೆ.

12.  2022-23ನೇ ಸಾಲಿನ ಮುಂಗಡ ಪತ್ರ ಮಂಡನೆ.

13.  ಸದಸ್ಯರಿಂದ ಸ್ವೀಕರಿಸಿದ ಲಿಖಿತ ಪತ್ರಗಳಿಗೆ ಆಡಳಿತ ಮಂಡಳಿಯ ಉತ್ತರ ಹಾಗೂ ಇತರೇ ಅಂಶಗಳ ಕುರಿತು ಚರ್ಚೆ.

14.  ಗೊತ್ತುವಳಿಗಳ ಮಂಡನೆ, ಚರ್ಚೆ ಹಾಗೂ ನಿರ್ಣಯಗಳ ಸ್ವೀಕರಣಾ ಪ್ರಕ್ರಿಯೆ.

15.  ಅಧ್ಯಕ್ಷರಿಂದ ಅಧ್ಯಕ್ಷೀಯ ನುಡಿ.

16.  ವಂದನಾರ್ಪಣೆ.

ಊಟದ ಅವಧಿ ಸಮಯ: 1.30 ರಿಂದ 2.30.

 

 

 

 

 


ಎರಡನೇ ಹಂತದ ಪಟ್ಟಿ:-

17.  2019-20, 2020-21 ಹಾಗೂ 2021-22ನೇ ಸಾಲುಗಳ ಸದಸ್ಯರ ಷೇರುಗಳಿಗೆ ಲಾಭಾಂಶ ವಿತರಣೆ ಸಮಯ: ಮಧ್ಯಾಹ್ನ 2:30ಕ್ಕೆ.

18.  ನೂತನ ಸದಸ್ಯರಾಗುವವರಿಂದ ಅರ್ಜಿ -ಶುಲ್ಕ-ದಾಖಲಾತಿಗಳ ಸ್ವೀಕಾರ.

* * * *

 

4ನೇ ಸರ್ವ ಸದಸ್ಯರ ಸಭಾ ಸೂಚನಾ ಪತ್ರ

(ಹೆಚ್ಚುವರಿ ಸೇರ್ಪಡೆ ಅಂಶಗಳು)

 

ಸಂಖ್ಯೆ: ಕರಾಅನೌಸಸನಿ/ಸಾಸಸಸೂಪ/3/2022.                                    ದಿನಾಂಕ:25.08.2022.


ವಿಷಯ:

ಈ ಸಹಕಾರ ಸಂಘದ ಉಪವಿಧಿಯಲ್ಲಿರುವ ಉಪಬಂಧಗಳನ್ನು ತಿದ್ದುಪಡಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಅರ್ಹ ಸದಸ್ಯರಿಂದ ಸಲಹೆಗಳನ್ನು ಆಹ್ವಾನಿಸುತ್ತಿರುವ ಕುರಿತು

ಉಲ್ಲೇಖ:

01.    ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ರವರ ದಿನಾಂಕ: 01.06.2022 ಸಂಖ್ಯೆ: ಕ್ರ.ಸಂ.ಎಂ.ಜೆ.ಎನ್ / ಸನಿ / ಬೆಂ -2 / 2022-23ರ ಪತ್ರ.

02.    ದಿನಾಂಕ: 27.07.2022ರಂದು ಸಹಕಾರ ಸಂಘಗಳ ನಿಬಂಧಕರಿಗೆ ಬರೆದ ಪತ್ರ ಸಂಖ್ಯೆ:10/2022.

03.    ದಿನಾಂಕ:22.08.2022ರಂದು ನಡೆದ ಆಡಳಿತ ಮಂಡಳಿಯ 6ನೇ ಸಭೆಯ. ನಿರ್ಣಯ ಸಂಖ್ಯೆ: 01.

04.    ಸಹಕಾರ ಸಂಘದ ಸರ್ವ ಸದಸ್ಯರ ೪ನೇ ಸಭೆಯ ಸೂಚನಾ ಪತ್ರ. ಸಂಖ್ಯೆ: ಕರಾಅನೌಸಸನಿ/ಸಾಸಸಸೂಪ/3/2022. ದಿನಾಂಕ:10.08.2022.

*********

ಗೌರವಾನ್ವಿತ ಸದಸ್ಯರೇ,

ಈ ಸಹಕಾರ ಸಂಘವು ತನ್ನ ಉಪವಿಧಿಯ 3ರ ಅಧ್ಯಾಯದಲ್ಲಿರುವ 4ರ ನಿಯಮದಲ್ಲಿ ತಿಳಿಸಿರುವ ಧ್ಯೇಯ ಮತ್ತು ಉದ್ದೇಶಗಳನ್ನು ಯೋಜಿತವಾಗಿ ಅನುಷ್ಠಾನಗೊಳಿಸಲು ಆಡಳಿತ ಮಂಡಳಿಯ ವಿವಿಧ ಸಭೆಗಳಲ್ಲಿ ಮತ್ತು ಸರ್ವ ಸದಸ್ಯರ 2 ಹಾಗೂ 3ನೇ ಸಭೆಗಳಲ್ಲಿ ವಿವಿಧ ನಿಯಮಾವಳಿಗಳಿಗೆ ಅನುಮೋದನೆ ಪಡೆದು, ಅನುಷ್ಠಾನಗೊಳಿಸಲಾಗಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರು ಉಲ್ಲೇಖಿತ (1)ರ ಪತ್ರದೊಂದಿಗೆ ಈ ಸಹಕಾರ ಸಂಘಕ್ಕೆ 2020-22ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಅಡಕಗೊಳಿಸಿ ಈ ಸಹಕಾರ ಸಂಘಕ್ಕೆ ಕಳುಹಿಸಿರುತ್ತಾರೆ. ಲೆಕ್ಕಪರಿಶೋಧನಾ ವರದಿಯ 11ನೇ ಕಂಡಿಕೆಯ ಉಪ ಕಂಡಿಕೆ (3) ರಲ್ಲಿ ಠೇವಣಿ ಮತ್ತು ಸಾಲಗಳ ಕುರಿತು ನಿಯಮಗಳನ್ನು ರಚಿಸಿಕೊಂಡು ಇಲಾಖಾ ಅನುಮೋದನೆ ಪಡೆಯುವುದಕ್ಕಾಗಿ ಕ್ರಮವಹಿಸಲು ತಿಳಿಸಿರುತ್ತಾರೆ.

ಉಲ್ಲೇಖಿತ (2) ರಲ್ಲಿ ಈ ಸಹಕಾರ ಸಂಘದಿಂದ ಅನುಷ್ಠಾನಗೊಳಿಸಿರುವ ನಿಶ್ಚಿತ ಹಾಗೂ ಆವರ್ತಕ ಠೇವಣಿಗಳ, ಸಾಲ ವಿತರಣೆ ಮತ್ತು ಮರಣ ಪರಿಹಾರ ನಿಧಿ ಇವುಗಳ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಿದ ದಿನಾಂಕಗಳಿಂದಲೇ ಅನುಮೋದಿಸುವಂತೆ ಸಹಕಾರ ಸಂಘಗಳ ನಿಬಂಧಕರಲ್ಲಿ ವಿನಂತಿಸಲಾಗಿದೆ.

ಸಹಕಾರ ಸಂಘಗಳ ಕಾಯ್ದೆ 1959 (ತಿದ್ದುಪಡಿ 2012) ರ ಪ್ರಕರಣ 28 (C)  ರಲ್ಲಿ ಆಡಳಿತ ಮಂಡಳಿಯ ಅಧಿಕಾರಗಳು ಮತ್ತು ಕರ್ತವ್ಯಗಳ ಕುರಿತು ತಿಳಿಸಿದ್ದು, (j) ಉಪ ಪ್ರಕರಣದಲ್ಲಿ ಸಹಕಾರ ಸಂಘದ ಉದ್ದೇಶಗಳನ್ನು ತಲುಪಲು ನಿರ್ದಿಷ್ಟ ಗುರಿಗಳನ್ನು ಹೊಂದಲು ಅವಕಾಶವಿದೆ. ಇದರ ಅನುಸಾರ ಆವರ್ತಕ ಠೇವಣಿ, ನಿಶ್ಚಿತ ಠೇವಣಿ ಹಾಗೂ ಮರಣ ಪರಿಹಾರ ಯೋಜನೆಗಳ ಅನುಷ್ಠಾನಕ್ಕಾಗಿ ನಿಯಮಾವಳಿಗಳನ್ನು ಆಡಳಿತ ಮಂಡಳಿಯು ಅನುಷ್ಠಾನಗೊಳಿಸಿದೆ. ಸಾಲ ವಿತರಣೆಯ ಗರಿಷ್ಟ ಮೊತ್ತವನ್ನು ರೂ.50,000/- (ಐವತ್ತು ಸಾವಿರ ರೂಪಾಯಿ ಮಾತ್ರ) ಕ್ಕೆ ಸಹಕಾರ ಸಂಘದ ಉಪವಿಧಿಯ 25ನೇ ಉಪಬಂಧದಲ್ಲಿ ನಿರ್ದಿಷ್ಟಪಡಿಸಿರುವುದರಿಂದ, 3ನೇ ಮಹಾ ಸಭೆಯಲ್ಲಿ ರೂ.1,00,000/- (ರೂಪಾಯಿ ಒಂದು ಲಕ್ಷ ಮಾತ್ರ) ಲಕ್ಷದವರೆಗೆ ವಿತರಿಸಲು ನಿರ್ಣಯ ಕೈಗೊಂಡಿರುವುದರಿಂದ, ದಿನಾಂಕ: 27.02.2022ರಂದು ಆಡಳಿತ ಮಂಡಳಿಯ ಸಭೆ 13 ರಲ್ಲಿ ಸಾಲ ಮಂಜೂರು ಮತ್ತು ವಸೂಲು ನಿಯಮಗಳನ್ನು ಪರಿಷ್ಕರಿಸಿ 01-04-2022 ರಿಂದ ಸಾಲದ ಗರಿಷ್ಠ ಮಿತಿಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಿ ಮಂಜೂರುಗೊಳಿಸುತ್ತಿರುವುದರಿಂದ, ಸಾಲ ಪಡೆಯುವವರ ಸಂಖ್ಯೆಯು ಹೆಚ್ಚುತ್ತಿರುವುದನ್ನು  ಮನಗಾಣಲಾಗಿದೆ.

2021 ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಅಂಶಗಳನ್ನು ಸೇರ್ಪಡೆಗೊಳಿಸಿರುವುದರಿಂದ ಉಪವಿಧಿಯ ಕೆಲವು ಉಪಬಂಧಗಳನ್ನು  ಸಹ ತಿದ್ದುಪಡಿಗೊಳಿಸಿ ಭವಿಷ್ಯವರ್ತಿಯನ್ನಾಗಿ ಅನುಷ್ಠಾನದಲ್ಲಿರಿಸಲು  ಆಡಳಿತ ಮಂಡಳಿಯು ಉಲ್ಲೇಖಿತ 03 ರಲ್ಲಿ ತೀರ್ಮಾನಿಸಿದೆ.

            ಈಗಾಗಲೇ ಉಲ್ಲೇಖಿತ (4)ರಲ್ಲಿ ಪ್ರಕಟಿಸಿರುವ 4ನೇ ಸರ್ವ ಸದಸ್ಯರ ಸಭಾ ಸೂಚನಾ ಪತ್ರದಲ್ಲಿ ಸಭಾ ವಿಷಯಗಳನ್ನು ತಿಳಿಯಪಡಿಸಿದ್ದು, 7ನೇ ಅಂಶದ ಮಂಡನೆಯ ಅವಧಿಯಲ್ಲಿ ಸಹಕಾರ ಸಂಘದ ಉಪವಿಧಿಯ ಕೆಲವು ಉಪಬಂಧಗಳನ್ನು  ತಿದ್ದುಪಡಿಗೊಳಿಸಲು ಗೊತ್ತುವಳಿಗಳನ್ನು ಮಂಡಿಸಲಾಗುವುದು. ಕರಡು ಪ್ರತಿಯನ್ನು ಈ ಸೂಚನಾ ಪತ್ರದಲ್ಲಿ ಲಗತ್ತಿಸಲಾಗಿದೆ. ಸಲಹೆಗಳನ್ನು ಸದಸ್ಯರು ದಿನಾಂಕ: 08.09.2022ರ ಒಳಗಾಗಿ ಸಹಕಾರ ಸಂಘದ ಇ-ಮೇಲ್‌- ksecsb.kar@gmail.com ಗೆ  ಕಳುಹಿಸಲು ಕೋರಿದೆ.

72ನೇ ಉಪಬಂಧದಲ್ಲಿ ಈ ಸಹಕಾರ ಸಂಘದ ಉಪವಿಧಿಗಳ ತಿದ್ದುಪಡಿ ವಿಧಾನವನ್ನು ತಿಳಿಸಿದ್ದು, ಕೆಲವು ಉಪಬಂಧಗಳ ತಿದ್ದುಪಡಿ ಕರಡನ್ನು 4ನೇ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು, ಸಹಕಾರ ಸಂಘಗಳ ನಿಬಂಧಕರ ಅನುಮತಿಗೆ ಸಲ್ಲಿಸಲಾಗುವುದು.

 

ಗೌರವಪೂರ್ವಕ ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

 

 

(ಸಂಜೀವೇಗೌಡ ಜಿ.ಆರ್‌)

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ,

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ.


 


ಕರ್ನಾಟಕರಾಜ್ಯಅಂಧ ನೌಕರರ ಸಹಕಾರ ಸಂಘ ನಿಯಮಿತ (ರಿ)

#41/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಉತ್ತರ-560097

ನಮೂನೆ–4

ಕ್ರ.ಸಂ:

ಉಪವಿಧಿ ಸಂಖ್ಯೆ ಮತ್ತು ಶೀರ್ಷಿಕೆ:

ಪ್ರಸ್ತುತ ಇರುವ ಉಪಬಂಧದ ವಿವರಣಾ ಕಂಡಿಕೆ:

ತಿದ್ದುಪಡಿ ಕಂಡಿಕೆ:

ಸಕಾರಣಗಳು:

1.

ಅಧ್ಯಾಯ-III ೪. ಸಂಘದ ಧ್ಯೇಯ ಮತ್ತು ಉದ್ದೇಶಗಳು:

 ೧೬. ಸದಸ್ಯರು ಅಥವಾ ಅವರ ಕುಟುಂಬ ವರ್ಗದವರು ಮೃತಪಟ್ಟಾಗ ತುರ್ತುನಿಧಿಯಿಂದ ಧನಸಹಾಯ ಮಾಡುವುದು.

೧೬. (a) ಸದಸ್ಯರು ಅಥವಾ ಅವರ ಕುಟುಂಬ ವರ್ಗದವರು ಮೃತಪಟ್ಟಾಗ ತುರ್ತುನಿಧಿಯಿಂದ ಧನಸಹಾಯ ಮಾಡುವುದು.

ಉದ್ದೇಶಗಳಲ್ಲಿ ಕ್ರಮ ಸಂಖ್ಯೆ ೧೬ ಎರಡು ಸಲ ನಮೂದಾಗಿರುವುದರಿಂದ ತಿದ್ದುಪಡಿಗೊಳಿಸಲಾಗುವುದು.

2.

ಅಧ್ಯಾಯ-IV. ೯. ಸದಸ್ಯರ ಮತದಾನದ ಹಕ್ಕುಗಳು:

ಸಂಘದ ಸಾಮಾನ್ಯ ಸದಸ್ಯ, ಪ್ರತಿನಿದಿ ಅಥವಾ ನಿಯೋಜಿಸಿದ ಸದಸ್ಯ ಒಟ್ಟು ೫ ಸರ್ವ ಸದಸ್ಯರ ಸಭೆಗಳ ಪೈಕಿ ೩ ಸಭೆಗಳಿಗೆ ಗೈರು ಹಾಜರಾದಲ್ಲಿ ಅವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಸಂಘದ ಸಾಮಾನ್ಯ ಸದಸ್ಯ, ಪ್ರತಿನಿದಿ ಅಥವಾ ನಿಯೋಜಿಸಿದ ಸದಸ್ಯ ಒಟ್ಟು ೫ ಸರ್ವ ಸದಸ್ಯರ ಸಭೆಗಳ ಪೈಕಿ ಎರಡು  ಸಭೆಗಳಿಗೆ ಗೈರು ಹಾಜರಾದಲ್ಲಿ  ಮತ ಚಲಾಯಿಸಲು ಅರ್ಹವಲ್ಲ.

ಕರ್ನಾಟಕ ಸಹಕಾರ ಸಂಘಗಳ

(ತಿದ್ದುಪಡಿ ) ಅಧಿನಿಯಮ, 2021ರ ಅನುಸಾರ ತಿದ್ದುಪಡಿಗೊಳಿಸಲು ಉದ್ದೇಶಿಸಲಾಗಿದೆ.

3.

ಅಧ್ಯಾಯ-IV. ೯. ಸದಸ್ಯರ ಮತದಾನದ ಹಕ್ಕುಗಳು:

 ಸಂಘದ ಸಾಮಾನ್ಯ ಸದಸ್ಯ ಅಥವಾ ಪ್ರತಿನಿಧಿ ಒಂದು ಸಹಕಾರ ವರ್ಷದಲ್ಲಿ ಕನಿಷ್ಟ ಸೇವೆ ಮತ್ತು ಅನುಕೂಲತೆಗಳನ್ನು ಸತತವಾಗಿ ೩ ವರ್ಷಗಳು ಉಪಯೋಗಿಸಿಕೊಳ್ಳದಿದ್ದಲ್ಲಿ ಅವರು ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಹಿಂದಿನ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರ ವರ್ಷಕ್ಕಾಗಿ ಆಡಳಿತ ಮಂಡಳಿಯು ನಿರ್ಧಿಷ್ಟಪಡಿಸಬಹುದಾದಂಥ ಕನಿಷ್ಟ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಫಲನಾದ ಒಬ್ಬ ಸದಸ್ಯ ಅಥವಾ ಒಬ್ಬ ಪ್ರತಿನಿಧಿ ಮತ ಚಲಾಯಿಸಲು ಅರ್ಹವಲ್ಲ.

ಕರ್ನಾಟಕ ಸಹಕಾರ ಸಂಘಗಳ ( ತಿದ್ದುಪಡಿ ) ಅಧಿನಿಯಮ, 2021 ಪ್ರಕರಣ ೨೦ ಅನುಸಾರ ತಿದ್ದುಪಡಿಗೊಳಿಸಲು ಉದ್ದೇಶಿಸಲಾಗಿದೆ.

4.

ಅಧ್ಯಾಯ-VI. ಸಾಲ: ೨೫.      ಸಾಲ ನೀಡುವ ಗರಿಷ್ಠ ಮಿತಿ:

ಆಡಳಿತ ಮಂಡಳಿಯು ಅಂಗೀಕರಿಸಿದ ಭದ್ರತೆಗಳ ಮೇಲೆ ಅಥವಾ ಜಾಮೀನು ಪಡೆದು ಆಡಳಿತ ಮಂಡಳಿಯು ಒಳನಿಯಮಗಳನ್ನು ಮಾಡಿಕೊಂಡು ಸದಸ್ಯರುಗಳಿಗೆ ಅವಶ್ಯವಾದ ಸಾಲವನ್ನು ಮಂಜೂರು ಮಾಡಬಹುದು. ಕನಿಷ್ಟ ೨೫,೦೦೦ ದಿಂದ ಗರಿಷ್ಟ ೫೦,೦೦೦ ರೂಗಳವರೆಗೂ ಸಾಲ ನೀಡಬಹುದು.

ಆಡಳಿತ ಮಂಡಳಿಯು ಅಂಗೀಕರಿಸಿದ ಭದ್ರತೆಗಳ ಮೇಲೆ ಅಥವಾ ಜಾಮೀನು ಪಡೆದು ಸದಸ್ಯರುಗಳಿಗೆ ಅವಶ್ಯವಾದ ಸಾಲವನ್ನು ಮಂಜೂರು ಮಾಡಬಹುದು ಮತ್ತು ಮಂಜೂರು ಮಾಡಿದ ಸಾಲವನ್ನು ವಸೂಲು ಮಾಡತಕ್ಕದ್ದು. ಇದಕ್ಕಾಗಿ  ನಿಯಮವನ್ನು ರಚಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಅನುಮೋದನೆ  ಪಡೆಯತಕ್ಕದ್ದು. ಸಾಲ ಮಂಜೂರಾತಿಯ ಗರಿಷ್ಟ  ಮೊತ್ತವನ್ನು ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸತಕ್ಕದ್ದು. ಬಡ್ಡಿ ನಿರ್ಧರಣೆಯ ತೀರ್ಮಾನವು ಆಡಳಿತ ಮಂಡಳಿಯಲ್ಲಿ ನಿಹಿತವಾಗಿರತಕ್ಕದ್ದು.

ಪ್ರಸ್ತುತ ಹಾಗೂ ಭವಿಷ್ಯದ ಸನ್ನಿವೇಶಗಳಲ್ಲಿ ಮೂಲ ಉಪವಿಧಿಯಲ್ಲಿ ನಿಗದಿಪಡಿಸಿರುವ ಗರಿಷ್ಟ ಮೊತ್ತಕ್ಕಿಂತ ಹೆಚ್ಚು ರೂಗಳ  ಸಾಲವನ್ನು ವಿತರಿಸುವುದು ಅನಿವಾರ್ಯವಾಗಬಹುದಾದ್ದರಿಂದ ಸದರಿ ಉಪಬಂಧವನ್ನು ತಿದ್ದುಪಡಿಗೊಳಿಸಲು ತೀರ್ಮಾನಿಸಲಾಗಿದೆ.

 

(ಸಂಜೀವೇಗೌಡ ಜಿ.ಆರ್‌)

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ ನಿಯಮಿತ.

 

 

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು